ಬಾಲಿವುಡ್ ಇಂಡಸ್ಟ್ರಿಯಿಂದ ಜೆ.ಕೆಗೆ ಬಂತು ಮೆಗಾ ಆಫರ್
Recommended Video

'ಬಿಗ್ ಬಾಸ್ ಕನ್ನಡ 5'ನೇ ಆವೃತ್ತಿಯಲ್ಲಿ ಎಲ್ಲರ ಮನ ಗೆದ್ದ ಜೆ.ಕೆ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗುವ ಸೂಚನೆ ಕೊಟ್ಟಿದ್ದಾರೆ. ಜೆ.ಕೆ ಅಭಿನಯದ ಮೇ 1 ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ನಿರ್ದೇಶಕ ದಯಾಳ್ ನಿರ್ದೇಶನ ಮಾಡಲಿರುವ 2 ಚಿತ್ರಗಳಿಗೆ ಕಾರ್ತಿಕ್ ಜಯರಾಂ ನಾಯಕನಾಗಿದ್ದಾರೆ.
ಹೀಗೆ, ಚಂದನವನದಲ್ಲಿ ಹಿಂದೆಂದೆನೇ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿರುವ ಜೆ.ಕೆ ಬಾಲಿವುಡ್ ಬಾಗಿಲು ಮತ್ತೆ ತೆರೆದಿದೆ. ಇಷ್ಟು ದಿನ ಹಿಂದಿ ಕಿರುತೆಯರೆಯಲ್ಲಿ ಮಿಂಚಿದ್ದ ಜೆ.ಕೆ ಈಗ ಬಾಲಿವುಡ್ ಬಿಗ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ.
ಹಿಂದಿಯಲ್ಲಿ ಸಿಯಾ ಕಾ ರಾಮ್ ಧಾರವಾಹಿಯಲ್ಲಿ ರಾವಣನ ಪಾತ್ರವನ್ನು ಮಾಡಿರುವ ಜೆ.ಕೆ ಈಗಾಗಲೇ ಬಾಲಿವುಡ್ ಮಂದಿಗೆ ಪರಿಚಿತ. ಇದೀಗ, ಕಿರುತೆರೆಯಿಂದ ಹಿರಿತೆರೆಗೆ ಕಾಲಿಡಲು ರಾವಣ ರೆಡಿಯಾಗಿದ್ದಾರೆ. ಯಾವುದು ಆ ಚಿತ್ರ? ಮುಂದೆ ಓದಿ.....

ಮಾರ್ಚ್ ತಿಂಗಳಲ್ಲಿ ಆರಂಭ
ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಈ ಮಧ್ಯೆ ಬಿಗ್ ಬಾಸ್ ಮನೆಗೆ ಹೋದ ಜೆ.ಕೆ 106 ದಿನದ ನಂತರ ಹೊರ ಬಂದಿದ್ದಾರೆ. ಜೆಕೆಗಾಗಿ ಕಾಯುತ್ತಿದ್ದ ನಿರ್ಮಾಪಕರು ಈಗ ಸಿನಿಮಾ ಆರಂಭಿಸಲು ಸಿದ್ದವಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಜೆಕೆಯ ಮೊದಲ ಹಿಂದಿ ಸಿನಿಮಾ ಆರಂಭವಾಗಲಿದೆ.

ರಮೇಶ್ ತಲ್ವಾರ್ ಅಕ್ಷನ್ ಕಟ್
ಜೆಕೆ ಅಭಿನಯಿಸಲಿರುವ ಮೊದಲ ಹಿಂದಿ ಚಿತ್ರಕ್ಕೆ ರಮೇಶ್ ತಲ್ವರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2009ರಲ್ಲಿ ಇವರು ಕೊನೆಯ ಚಿತ್ರವನ್ನ ನಿರ್ದೇಶಿಸಿದ್ದರು.

ಗೌಹಾರ್ ಖಾನ್ ನಾಯಕಿ?
ಅಂದ್ಹಾಗೆ, ಜೆ.ಕೆಯ ಹಿಂದಿಯ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ಗೌಹಾರ್ ಖಾನ್ ಅವರನ್ನ ನಾಯಕಿಯನ್ನಾಗಿಸಲು ಮಾತುಕತೆ ನಡೆದಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಜೆ.ಕೆ ಜೊತೆ ಗೌಹಾರ್ ಹೆಜ್ಜೆ ಹಾಕಲಿದ್ದಾರೆ.

ಮತ್ತೊಂದು ಬಾಲಿವುಡ್ ಸಿನಿಮಾ?
ಹಿಂದಿಯ ಮೊದಲ ಸಿನಿಮಾದ ತಯಾರಿಯಲ್ಲಿರುವ ಜೆಕೆಗೆ, ಮತ್ತೊಂದು ಅವಕಾಶ ಸಿಕ್ಕಿದೆಯಂತೆ. ಕೃಷ್ಣ ಅಭಿಷೇಕ್ ಅವರ ಜೊತೆ ಅಭಿನಯಿಸಲು ಜೆ.ಕೆ ಮುಂದಾಗಿದ್ದು, ಈ ಚಿತ್ರವನ್ನ ದಿನಕರ್ ಕಪೂರ್ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.


Click it and Unblock the Notifications











