twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ಇಂಡಸ್ಟ್ರಿಯಿಂದ ಜೆ.ಕೆಗೆ ಬಂತು ಮೆಗಾ ಆಫರ್

    By Bharath Kumar
    |

    Recommended Video

    'ಜೆಕೆ'ಗೆ ಈಗ ಬಾಲಿವುಡ್ ನಲ್ಲೂ ಬೇಡಿಕೆ | Filmibeat Kannada

    'ಬಿಗ್ ಬಾಸ್ ಕನ್ನಡ 5'ನೇ ಆವೃತ್ತಿಯಲ್ಲಿ ಎಲ್ಲರ ಮನ ಗೆದ್ದ ಜೆ.ಕೆ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗುವ ಸೂಚನೆ ಕೊಟ್ಟಿದ್ದಾರೆ. ಜೆ.ಕೆ ಅಭಿನಯದ ಮೇ 1 ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ನಿರ್ದೇಶಕ ದಯಾಳ್ ನಿರ್ದೇಶನ ಮಾಡಲಿರುವ 2 ಚಿತ್ರಗಳಿಗೆ ಕಾರ್ತಿಕ್ ಜಯರಾಂ ನಾಯಕನಾಗಿದ್ದಾರೆ.

    ಹೀಗೆ, ಚಂದನವನದಲ್ಲಿ ಹಿಂದೆಂದೆನೇ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿರುವ ಜೆ.ಕೆ ಬಾಲಿವುಡ್ ಬಾಗಿಲು ಮತ್ತೆ ತೆರೆದಿದೆ. ಇಷ್ಟು ದಿನ ಹಿಂದಿ ಕಿರುತೆಯರೆಯಲ್ಲಿ ಮಿಂಚಿದ್ದ ಜೆ.ಕೆ ಈಗ ಬಾಲಿವುಡ್ ಬಿಗ್ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ.

    ಹಿಂದಿಯಲ್ಲಿ ಸಿಯಾ ಕಾ ರಾಮ್ ಧಾರವಾಹಿಯಲ್ಲಿ ರಾವಣನ ಪಾತ್ರವನ್ನು ಮಾಡಿರುವ ಜೆ.ಕೆ ಈಗಾಗಲೇ ಬಾಲಿವುಡ್ ಮಂದಿಗೆ ಪರಿಚಿತ. ಇದೀಗ, ಕಿರುತೆರೆಯಿಂದ ಹಿರಿತೆರೆಗೆ ಕಾಲಿಡಲು ರಾವಣ ರೆಡಿಯಾಗಿದ್ದಾರೆ. ಯಾವುದು ಆ ಚಿತ್ರ? ಮುಂದೆ ಓದಿ.....

    ಮಾರ್ಚ್ ತಿಂಗಳಲ್ಲಿ ಆರಂಭ

    ಮಾರ್ಚ್ ತಿಂಗಳಲ್ಲಿ ಆರಂಭ

    ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಈ ಮಧ್ಯೆ ಬಿಗ್ ಬಾಸ್ ಮನೆಗೆ ಹೋದ ಜೆ.ಕೆ 106 ದಿನದ ನಂತರ ಹೊರ ಬಂದಿದ್ದಾರೆ. ಜೆಕೆಗಾಗಿ ಕಾಯುತ್ತಿದ್ದ ನಿರ್ಮಾಪಕರು ಈಗ ಸಿನಿಮಾ ಆರಂಭಿಸಲು ಸಿದ್ದವಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಜೆಕೆಯ ಮೊದಲ ಹಿಂದಿ ಸಿನಿಮಾ ಆರಂಭವಾಗಲಿದೆ.

    ಬಿಗ್‌ ಬಾಸ್‌ ಶೋ ಮೇಲೆ ಬೇಸರಗೊಂಡ ಜೆ.ಕೆ: ಕಾರಣವೇನು?ಬಿಗ್‌ ಬಾಸ್‌ ಶೋ ಮೇಲೆ ಬೇಸರಗೊಂಡ ಜೆ.ಕೆ: ಕಾರಣವೇನು?

    ರಮೇಶ್ ತಲ್ವಾರ್ ಅಕ್ಷನ್ ಕಟ್

    ರಮೇಶ್ ತಲ್ವಾರ್ ಅಕ್ಷನ್ ಕಟ್

    ಜೆಕೆ ಅಭಿನಯಿಸಲಿರುವ ಮೊದಲ ಹಿಂದಿ ಚಿತ್ರಕ್ಕೆ ರಮೇಶ್ ತಲ್ವರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2009ರಲ್ಲಿ ಇವರು ಕೊನೆಯ ಚಿತ್ರವನ್ನ ನಿರ್ದೇಶಿಸಿದ್ದರು.

    ಗೌಹಾರ್ ಖಾನ್ ನಾಯಕಿ?

    ಗೌಹಾರ್ ಖಾನ್ ನಾಯಕಿ?

    ಅಂದ್ಹಾಗೆ, ಜೆ.ಕೆಯ ಹಿಂದಿಯ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ಗೌಹಾರ್ ಖಾನ್ ಅವರನ್ನ ನಾಯಕಿಯನ್ನಾಗಿಸಲು ಮಾತುಕತೆ ನಡೆದಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಜೆ.ಕೆ ಜೊತೆ ಗೌಹಾರ್ ಹೆಜ್ಜೆ ಹಾಕಲಿದ್ದಾರೆ.

    'ಬಿಗ್ ಬಾಸ್' ನಂತರ ಮತ್ತೆ ನಿಮ್ಮ ಮುಂದೆ ಬರ್ತಿದ್ದಾರೆ ಜೆಕೆ'ಬಿಗ್ ಬಾಸ್' ನಂತರ ಮತ್ತೆ ನಿಮ್ಮ ಮುಂದೆ ಬರ್ತಿದ್ದಾರೆ ಜೆಕೆ

    ಮತ್ತೊಂದು ಬಾಲಿವುಡ್ ಸಿನಿಮಾ?

    ಮತ್ತೊಂದು ಬಾಲಿವುಡ್ ಸಿನಿಮಾ?

    ಹಿಂದಿಯ ಮೊದಲ ಸಿನಿಮಾದ ತಯಾರಿಯಲ್ಲಿರುವ ಜೆಕೆಗೆ, ಮತ್ತೊಂದು ಅವಕಾಶ ಸಿಕ್ಕಿದೆಯಂತೆ. ಕೃಷ್ಣ ಅಭಿಷೇಕ್ ಅವರ ಜೊತೆ ಅಭಿನಯಿಸಲು ಜೆ.ಕೆ ಮುಂದಾಗಿದ್ದು, ಈ ಚಿತ್ರವನ್ನ ದಿನಕರ್ ಕಪೂರ್ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.

    ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ನಟ ಜಯರಾಂ ಕಾರ್ತಿಕ್.!ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ನಟ ಜಯರಾಂ ಕಾರ್ತಿಕ್.!

    English summary
    The actor, who was part of Bigg Boss Kannada Season 5, and has been getting many film offers in Kannada, will soon make his debut in a Hindi film.
    Friday, February 9, 2018, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X