ಜಯಶ್ರೀ ಡೈರಿ ಪತ್ತೆ: ಸಾಲ ಹಿಂತಿರುಗಿಸುವಂತೆ ಕುಟುಂಬಸ್ಥರಿಗೆ ಮನವಿ

ಪುನರ್ವಸತಿ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಟಿ ಜಯಶ್ರೀ ರಾಮಯ್ಯ ಅವರ ಖಾಸಗಿ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Recommended Video

ಸಂಧ್ಯಾ ಕಿರಣ ಕೇಂದ್ರದಲ್ಲಿ ರಾತ್ರಿ ನಡೆದದ್ದಾದ್ರು ಏನು | Filmibeat Kannada

ಜಯಶ್ರೀ ಸಾವಿನ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಡೈರಿ ಸಿಕ್ಕಿದ್ದು, ಅದರಲ್ಲಿ ಸಾಕಷ್ಟು ವಿಚಾರಗಳಿವೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಸಾಲ ಪಡೆದಿರುವ ಬಗ್ಗೆ ವಿವರಗಳಿದ್ದು, ಹಣ ಹಿಂತಿರುಗಿಸುವಂತೆ ಕುಟುಂಬಸ್ಥರಿಗೆ ಮನವಿ ಮಾಡಿದ್ದಾರೆ.

ಡೈರಿ ಜೊತೆ ಡೆತ್ ನೋಟ್ ಸಹ ಇದೆ ಎನ್ನಲಾಗಿದೆ. ಇದರಲ್ಲಿ ಸಾಲು ಪಡೆದಿರುವವರಿಗೆ ಹಣ ವಾಪಸ್ ನೀಡಿ ಎಂದು ತಮ್ಮ ಸಹೋದರನಿಗೆ ತಿಳಿಸಲಾಗಿದೆ. ಮನೆ ಬಾಡಿಗೆ, ವೈದ್ಯರ ಶುಲ್ಕ ಕೊಡುವಂತೆ ಕೋರಿದ್ದಾರೆ. ಯಾರ್ ಯಾರಿಗೆ ಹಣ ನೀಡಬೇಕು, ಯಾರ ಬಳಿ ಎಷ್ಟು ತೆಗೆದುಕೊಂಡಿದ್ದಾರೆ ಎಂದು ಬರೆದಿದ್ದಾರಂತೆ.

Jayashrees private diary seized by police

ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರು ಭೇಟಿ ನೀಡಿದ್ದರು. ಜಯಶ್ರೀ ಚಿಕ್ಕಮ್ಮ, ಸಹೋದರ ಅಜಯ್ ಬಂದಿದ್ದರು. ಇವರಿಬ್ಬರಿಂದಲೂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಜಯಶ್ರೀ ಅವರ ಮೃತದೇಹವನ್ನು ವಿಕ್ಟೋರಿಯಾಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಅಂದ್ಹಾಗೆ, ನಟಿ ಜಯಶ್ರೀ ರಾಮಯ್ಯ ಮಾಗಡಿ ರಸ್ತೆಯ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿ ಕಳೆದ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಕೊಂಡಿದ್ದಾರೆ. ಬೆಳಗ್ಗೆ ಸಮಯ ಕಳೆದರೂ ಕೊಠಡಿಯಿಂದ ಹೊರಬಾರದ ಕಾರಣ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

More from Filmibeat

English summary
Jayashree Ramaiah Suicide: Jayashree's private diary was seized by police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X