twitter
    For Quick Alerts
    ALLOW NOTIFICATIONS  
    For Daily Alerts

    ಜಯಶ್ರೀ ಡೈರಿ ಪತ್ತೆ: ಸಾಲ ಹಿಂತಿರುಗಿಸುವಂತೆ ಕುಟುಂಬಸ್ಥರಿಗೆ ಮನವಿ

    |

    ಪುನರ್ವಸತಿ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಟಿ ಜಯಶ್ರೀ ರಾಮಯ್ಯ ಅವರ ಖಾಸಗಿ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    Recommended Video

    ಸಂಧ್ಯಾ ಕಿರಣ ಕೇಂದ್ರದಲ್ಲಿ ರಾತ್ರಿ ನಡೆದದ್ದಾದ್ರು ಏನು | Filmibeat Kannada

    ಜಯಶ್ರೀ ಸಾವಿನ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಡೈರಿ ಸಿಕ್ಕಿದ್ದು, ಅದರಲ್ಲಿ ಸಾಕಷ್ಟು ವಿಚಾರಗಳಿವೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಸಾಲ ಪಡೆದಿರುವ ಬಗ್ಗೆ ವಿವರಗಳಿದ್ದು, ಹಣ ಹಿಂತಿರುಗಿಸುವಂತೆ ಕುಟುಂಬಸ್ಥರಿಗೆ ಮನವಿ ಮಾಡಿದ್ದಾರೆ.

    ದೇಹ-ಮನಸ್ಸುಗಳ ಮೇಲಿನ ಅತ್ಯಾಚಾರದ ಬಗ್ಗೆ ತಿಳಿದಾಗ ಮನುಷ್ಯರ ಬಗ್ಗೆ ಅಸಹ್ಯ ಹುಟ್ಟುತ್ತದೆ; ಜಯಶ್ರೀ ಬಗ್ಗೆ ರೇಖಾರಾಣಿ ಮಾತುದೇಹ-ಮನಸ್ಸುಗಳ ಮೇಲಿನ ಅತ್ಯಾಚಾರದ ಬಗ್ಗೆ ತಿಳಿದಾಗ ಮನುಷ್ಯರ ಬಗ್ಗೆ ಅಸಹ್ಯ ಹುಟ್ಟುತ್ತದೆ; ಜಯಶ್ರೀ ಬಗ್ಗೆ ರೇಖಾರಾಣಿ ಮಾತು

    ಡೈರಿ ಜೊತೆ ಡೆತ್ ನೋಟ್ ಸಹ ಇದೆ ಎನ್ನಲಾಗಿದೆ. ಇದರಲ್ಲಿ ಸಾಲು ಪಡೆದಿರುವವರಿಗೆ ಹಣ ವಾಪಸ್ ನೀಡಿ ಎಂದು ತಮ್ಮ ಸಹೋದರನಿಗೆ ತಿಳಿಸಲಾಗಿದೆ. ಮನೆ ಬಾಡಿಗೆ, ವೈದ್ಯರ ಶುಲ್ಕ ಕೊಡುವಂತೆ ಕೋರಿದ್ದಾರೆ. ಯಾರ್ ಯಾರಿಗೆ ಹಣ ನೀಡಬೇಕು, ಯಾರ ಬಳಿ ಎಷ್ಟು ತೆಗೆದುಕೊಂಡಿದ್ದಾರೆ ಎಂದು ಬರೆದಿದ್ದಾರಂತೆ.

    Jayashrees private diary seized by police

    ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರು ಭೇಟಿ ನೀಡಿದ್ದರು. ಜಯಶ್ರೀ ಚಿಕ್ಕಮ್ಮ, ಸಹೋದರ ಅಜಯ್ ಬಂದಿದ್ದರು. ಇವರಿಬ್ಬರಿಂದಲೂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

    ಜಯಶ್ರೀ ಅವರ ಮೃತದೇಹವನ್ನು ವಿಕ್ಟೋರಿಯಾಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

    'ಜೀವನ' ಹೋರಾಟದಲ್ಲಿ ಸೋತ ಜಯಶ್ರೀ: ಮಾಡೆಲಿಂಗ್, ಬಿಗ್ ಬಾಸ್, ಸಿನಿಮಾ ಕೈಹಿಡಿಯಲಿಲ್ಲ!'ಜೀವನ' ಹೋರಾಟದಲ್ಲಿ ಸೋತ ಜಯಶ್ರೀ: ಮಾಡೆಲಿಂಗ್, ಬಿಗ್ ಬಾಸ್, ಸಿನಿಮಾ ಕೈಹಿಡಿಯಲಿಲ್ಲ!

    ಅಂದ್ಹಾಗೆ, ನಟಿ ಜಯಶ್ರೀ ರಾಮಯ್ಯ ಮಾಗಡಿ ರಸ್ತೆಯ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿ ಕಳೆದ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಕೊಂಡಿದ್ದಾರೆ. ಬೆಳಗ್ಗೆ ಸಮಯ ಕಳೆದರೂ ಕೊಠಡಿಯಿಂದ ಹೊರಬಾರದ ಕಾರಣ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

    ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

    English summary
    Jayashree Ramaiah Suicide: Jayashree's private diary was seized by police.
    Monday, January 25, 2021, 20:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X