For Quick Alerts
  ALLOW NOTIFICATIONS  
  For Daily Alerts

  ಜಮೀರ್ ಅಹ್ಮದ್ ಮಗನನ್ನು ಲಾಂಚ್ ಮಾಡ್ತಿದ್ದಾರೆ ಸ್ಟಾರ್ ಡೈರೆಕ್ಟರ್

  |
  ಜಮೀರ್ ಅಹ್ಮದ್ ಖಾನ್ ಮಗ ಜಾಹಿದ್ ಖಾನ್ ರನ್ನ ಲಾಂಚ್ ಮಾಡಲು ಹೊರಟ ಕನ್ನಡದ ಸ್ಟಾರ್ ಡೈರೆಕ್ಟರ್ | FILMIBEAT KANNADA

  ರಾಜಕಾರಣಿಗಳ ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸ ವಿಷಯ ಏನಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್, ಚೆಲುವರಾಯ ಸ್ವಾಮಿ ಪುತ್ರ ಸಚಿನ್, ಹೆಚ್ ಎಮ್ ರೇವಣ್ಣ ಪುತ್ರ ಅನೂಪ್ ಈಗಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

  ಇದೀಗ ಕಾಂಗ್ರೆಸ್ ಪಕ್ಷದ ನಾಯಕ, ಸಚಿವ ಜಮೀರ್ ಅಹ್ಮದ್ ಮಗ ಕೂಡ ಸಿನಿಮಾ ರಂಗಕ್ಕೆ ಬರುವ ಪ್ಲಾನ್ ಮಾಡಿದ್ದಾರೆ. ಜಮೀರ್ ಅಹ್ಮದ್ ಪುತ್ರ ಜಾಹಿದ್ ಖಾನ್ ಮೊದಲ ಸಿನಿಮಾದ ನಿರ್ದೇಶಕರು ಯಾರು ಎನ್ನುವ ವಿಷಯ ಕೂಡ ಈಗಾಗಲೇ ಬಹಿರಂಗವಾಗಿದೆ.

  ಜಮೀರ್ ಅಹ್ಮದ್ ಪುತ್ರ ಝೈದ್ ಬಗ್ಗೆ ಬ್ರೇಕ್ ಆಗಿರುವ ಇಂಟ್ರೆಸ್ಟಿಂಗ್ ಸುದ್ದಿ ಇದು ಜಮೀರ್ ಅಹ್ಮದ್ ಪುತ್ರ ಝೈದ್ ಬಗ್ಗೆ ಬ್ರೇಕ್ ಆಗಿರುವ ಇಂಟ್ರೆಸ್ಟಿಂಗ್ ಸುದ್ದಿ ಇದು

  'ಬೆಲ್ ಬಾಟಂ' ಸಿನಿಮಾದ ಗೆಲ್ಲುವಿನ ಖುಷಿಯಲ್ಲಿ ಇರುವ ಜಯತೀರ್ಥ ಈಗ ಜಮೀರ್ ಅಹ್ಮದ್ ಮಗನ ಸಿನಿಮಾವನ್ನು ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ತಮ್ಮ ಹೊಸ ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಮುಂದೆ ಓದಿ....

  ಚಿತ್ರದ ಮಾತುಕತೆ ನಡೆಯುತ್ತಿದೆ

  ಚಿತ್ರದ ಮಾತುಕತೆ ನಡೆಯುತ್ತಿದೆ

  ತಮ್ಮ ಹೊಸ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಜಯತೀರ್ಥ ಜಮೀರ್ ಅಹ್ಮದ್ ಮಗ ಜಾಹಿದ್ ಖಾನ್ ಅವರಿಗೆ ಸಿನಿಮಾ ಮಾಡುವ ಪ್ಲಾನ್ ಇದ್ದು, ಸದ್ಯಕ್ಕೆ ಈ ಚಿತ್ರದ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ. ಅಲ್ಲಿಗೆ ಜಾಹಿದ್ ಖಾನ್, ಜಯತೀರ್ಥ ಸಿನಿಮಾದ ಮೂಲಕ ಚಿತ್ರ ಜೀವನ ಶುರು ಮಾಡುವುದು ಪಕ್ಕಾ ಆಗಿದೆ.

  ಆತನಿಗೆ ಒಪ್ಪುವ ಕಥೆ ಆಗಬೇಕು

  ಆತನಿಗೆ ಒಪ್ಪುವ ಕಥೆ ಆಗಬೇಕು

  ಜಾಹಿದ್ ಖಾನ್ ಮುಂಬೈ ನಲ್ಲಿ ನಟನ ತರಬೇತಿ ಪಡೆದಿದ್ದಾರೆ. ಅವರಿಗೆ ಸೂಟ್ ಆಗುವ ಕಥೆಯನ್ನು ಜಯತೀರ್ಥ ಮಾಡಬೇಕಿದೆಯಂತೆ. ಕಥೆ ಇಬ್ಬರಿಗೂ ಇಷ್ಟ ಆದಾಗ ಸಿನಿಮಾ ಶುರು ಆಗಲಿದೆ. ವಿಶೇಷ ಅಂದರೆ, ಈ ಸಿನಿಮಾಗೆ ಜಮೀರ್ ಹಣ ಹಾಕುತ್ತಿಲ್ಲ. ಬದಲಿಗೆ ಬಾಂಬೆ ನಿರ್ಮಾಣ ಸಂಸ್ಥೆ ಪ್ರೊಡ್ಯೂಸ್ ಮಾಡುತ್ತಿದೆ.

  ಚಿತ್ರರಂಗಕ್ಕೆ ಸುದೀಪ್ ಅಳಿಯ, ಜಯತೀರ್ಥ ಆಕ್ಷನ್ ಕಟ್.! ಚಿತ್ರರಂಗಕ್ಕೆ ಸುದೀಪ್ ಅಳಿಯ, ಜಯತೀರ್ಥ ಆಕ್ಷನ್ ಕಟ್.!

  ಜಯತೀರ್ಥ ಪಟ್ಟಿಗೆ ಮತ್ತೊಬ್ಬ ಹೊಸ ಹೀರೋ

  ಜಯತೀರ್ಥ ಪಟ್ಟಿಗೆ ಮತ್ತೊಬ್ಬ ಹೊಸ ಹೀರೋ

  ಜಯತೀರ್ಥ ತಮ್ಮ ಮೊದಲ ಸಿನಿಮಾ 'ಒಲವೇ ಮಂದಾರ' ಮೂಲಕ ಶ್ರೀಕಾಂತ್ ಪರಿಚಯ ಆದರು. ಆದಾದ ನಂತರ 'ವೆನಿಲ್ಲಾ' ಸಿನಿಮಾ ಮೂಲಕ ಅವಿನಾಶ್ ಲಾಂಚ್ ಆದರು. 'ಬೆಲ್ ಬಾಟಂ' ಮೂಲಕ ರಿಷಬ್ ಶೆಟ್ಟಿ ಹೀರೋ ಪಟ್ಟ ಪಡೆದರು. ಈಗ ಜಯತೀರ್ಥ ಆಶೀರ್ವಾದದಿಂದ ಜಾಹಿದ್ ಖಾನ್ ನಾಯಕ ನಟ ಆಗುತ್ತಿದ್ದಾರೆ.

  10ನೇ ವಾರ 'ಬೆಲ್ ಬಾಟಂ' ಯಶಸ್ವಿ ಪ್ರದರ್ಶನ

  10ನೇ ವಾರ 'ಬೆಲ್ ಬಾಟಂ' ಯಶಸ್ವಿ ಪ್ರದರ್ಶನ

  ಮತ್ತೊಂದು ಕಡೆ ಜಯತೀರ್ಥ ನಿರ್ದೇಶನದ 'ಬೆಲ್ ಬಾಟಂ' ಸಿನಿಮಾ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರ ಈಗ 10ನೇ ವಾರಕ್ಕೆ ಕಾಲಿಟ್ಟಿದೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಚಿತ್ರದಲ್ಲಿ ನಟಿಸಿದ್ದಾರೆ. ಸಿಕ್ಕಾಪಟ್ಟೆ ಮನರಂಜನೆ ಇರುವ ಪಕ್ಕಾ ಪತ್ತೇದಾರಿ ಸಿನಿಮಾ ಇದಾಗಿದೆ.

  ಬಾಲಿವುಡ್ ಗೆ ಹೊರಟ 'ಬೆಲ್ ಬಾಟಮ್', ನಾಯಕ ಯಾರು? ಬಾಲಿವುಡ್ ಗೆ ಹೊರಟ 'ಬೆಲ್ ಬಾಟಮ್', ನಾಯಕ ಯಾರು?

  English summary
  Kannada director Jayatheertha will launch minister Zameer Ahmed son Zaid Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X