ಮಾರಿಮುತ್ತು ಸಾವಿನ ಮುಂಚೆ ನಡೆದ ಒಂದು ಘಟನೆಯನ್ನು ಬಿಚ್ಚಿಟ್ಟ ಮೊಮ್ಮಗಳು!

By Naveen

ಮಾರಿಮುತ್ತು ಖ್ಯಾತಿಯ ಹಿರಿಯ ಪೋಷಕ ನಟಿ ಸರೋಜಮ್ಮ ಅವರ ಮೊಮ್ಮಗಳು ಈಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಯುವ ನಟಿ ಜಯಶ್ರೀ ಆರಾಧ್ಯ ಅವರನ್ನು ಸ್ಯಾಂಡಲ್ ವುಡ್ ಪ್ರೇಕ್ಷಕರು ಖುಷಿಯಾಗಿ ವೆಲ್ ಕಮ್ ಮಾಡಿದ್ದಾರೆ. ಜನರ ಈ ಪ್ರೀತಿ ಕಂಡು ಜಯಶ್ರೀ ಆರಾಧ್ಯ ಕೂಡ ಸಿಕ್ಕಾಪಟ್ಟೆ ಸಂತಸದಲ್ಲಿ ಇದ್ದಾರೆ.

ಚಿಕ್ಕ ಹುಡುಗಿಯಾಗಿದ್ದಾಗ ಅಜ್ಜಿಯ ಜೊತೆಗೆ ದಾರಿಯಲ್ಲಿ ಹೋಗುವ ವೇಳೆ ಎಲ್ಲರೂ ಅಜ್ಜಿಯನ್ನು ಗುರುತಿಸಿ ಮಾತನಾಡಿಸುವುದನ್ನು ನೋಡಿ, ನಾನು ಈ ರೀತಿ ಆಗಬೇಕು ಅಂದುಕೊಂಡ ಜಯಶ್ರೀ ಈಗ ಅದೇ ದಾರಿಯ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಸದ್ಯ ಬಿ.ಕಾಂ ಓದುತ್ತಾ ಇರುವ ಜಯಶ್ರೀ ಆರಾಧ್ಯ ನಟನೆಯನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ.

ಜಯಶ್ರೀ ಆರಾಧ್ಯ ತಮ್ಮ ಮೊದಲ ಸಿನಿಮಾ 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಸಿನಿಮಾ ಬಗ್ಗೆ ಮಾತನಾಡುವ ವೇಳೆ ಅವರ ಅಜ್ಜಿ ನಟಿ ಸರೋಜಮ್ಮ ಅವರ ಬಗ್ಗೆಯ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಆರು ಏಳು ತಿಂಗಳಿನಿಂದ ತುಂಬ ಪ್ರಯತ್ನ ಮಾಡಿದೆ

ಆರು ಏಳು ತಿಂಗಳಿನಿಂದ ತುಂಬ ಪ್ರಯತ್ನ ಮಾಡಿದೆ

''ಅಜ್ಜಿಯ ರೀತಿ ನಾನು ನಟಿ ಆಗಬೇಕು ಎಂಬ ಆಸೆ ಇತ್ತು. ಆರು ಏಳು ತಿಂಗಳಿನಿಂದ ತುಂಬ ಪ್ರಯತ್ನ ಮಾಡಿದೆ. ಎಲ್ಲ ಆಡಿಷನ್ ಗಳಿಗೆ ಹೋಗಿ ಬರುತ್ತಿದೆ. ನನಗೆ ಸೋಷಿಯಲ್ ಮೀಡಿಯಾದಿಂದ ತುಂಬ ಸಹಾಯ ಆಯ್ತು. ಅದರ ಮೂಲಕ ನನ್ನ ಪೋಟೋಗಳನ್ನು ನೋಡಿ ಕೆಲವು ಚಿತ್ರತಂಡಗಳು ಸಂಪರ್ಕ ಮಾಡುತ್ತಿದ್ವು.'' - ಜಯಶ್ರೀ ಆರಾಧ್ಯ, ನಟಿ

ನನ್ನದಲ್ಲದ ಒಂದು ಪಾತ್ರ ಮಾಡಬೇಕಿತ್ತು

ನನ್ನದಲ್ಲದ ಒಂದು ಪಾತ್ರ ಮಾಡಬೇಕಿತ್ತು

''ಪುಟ್ಟರಾಜು ಲವರ್ ಆಫ್ ಶಶಿಕಲಾ' ಚಿತ್ರದಲ್ಲಿ ನಾನು ಹಳ್ಳಿಯ ಸ್ಕೂಲ್ ಹುಡುಗಿ ಪಾತ್ರ ಮಾಡುತ್ತಿದ್ದೇನೆ. 10ನೇ ಕ್ಲಾಸ್ ಓದುವ ಒಬ್ಬ ಸೈಲೆಂಟ್ ಹುಡುಗಿಯ ಪಾತ್ರ ನನ್ನದು. ನನ್ನ ರಿಯಲ್ ಪಾತ್ರಕ್ಕಿಂತ ನನ್ನ ಸಿನಿಮಾದ ಪಾತ್ರ ವಿರುದ್ಧವಾಗಿದೆ. ನನ್ನದಲ್ಲದ ಒಂದು ಪಾತ್ರವನ್ನು ಮಾಡಬೇಕಿತ್ತು. ಅದಕ್ಕೆ ಚಿತ್ರದ ಲೀಡ್ ರೋಲ್ ಒಪ್ಪಿಕೊಂಡೆ.'' - ಜಯಶ್ರೀ ಆರಾಧ್ಯ, ನಟಿ

ಅಜ್ಜಿ ಸಾಯುವ 15 ದಿನಗಳ ಮುಂಚೆ

ಅಜ್ಜಿ ಸಾಯುವ 15 ದಿನಗಳ ಮುಂಚೆ

''ಅಜ್ಜಿಗೆ ಕೂಡ ನಮ್ಮ ಮನೆಯಲ್ಲಿ ಯಾರಾದರೂ ಒಬ್ಬರಾದರೂ ಸಿನಿಮಾಗೆ ಬರಬೇಕು ಎನ್ನುವ ಆಸೆ ಇತ್ತು. ಅವರು ಸಾಯುವ 15 ದಿನಗಳ ಮುಂಚೆ 'ನಾನು ಸತ್ತರು ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಹೆಸರು ಇರಬೇಕು. ನನ್ನನ್ನು ಜನ ಯಾವಾಗಲೂ ನೆನಪಿನಲ್ಲಿ ಇಡಬೇಕು. ಅದಕ್ಕಾಗಿ ನಮ್ಮ ಕುಟುಂಬದ ಯಾರಾದರೂ ಚಿತ್ರರಂಗಕ್ಕೆ ಸೇರಬೇಕು ಎಂದು ಹೇಳಿದರು. ಅದೇ ಕಾರಣಕ್ಕೆ ನಾನು ಸಿನಿಮಾವನ್ನು ತುಂಬ ಸೀರಿಯಸ್ ಆಗಿ ತೆಗೆದುಕೊಂಡೆ. ಈ ಘಟನೆ ಬಳಿಕ ಅಜ್ಜಿಯ ಆಸೆ ನೆರವೇರಿಸುವುದಕ್ಕೆ ಸಿನಿಮಾ ಜರ್ನಿ ಶುರು ಮಾಡಿದೆ.'' - ಜಯಶ್ರೀ ಆರಾಧ್ಯ, ನಟಿ

ನಾಲ್ಕೈದು ದಿನಗಳಿಂದ ತುಂಬ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ

ನಾಲ್ಕೈದು ದಿನಗಳಿಂದ ತುಂಬ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ

''ಎಷ್ಟೋ ಜನರಿಗೆ ನಾನು ಮಾರಿಮುತ್ತು ಅವರ ಮೊಮ್ಮಗಳು ಅಂತ ಗೊತ್ತಿರಲಿಲ್ಲ. ಈ ನಾಲ್ಕೈದು ದಿನಗಳಿಂದ ತುಂಬ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ನನ್ನ ಅಜ್ಜಿಗೆ ಇಷ್ಟೊಂದು ಫೇಮ್ ಇತ್ತು ಅಂತ ನನಗೆ ಗೊತ್ತಾಗಿದ್ದು ಈ ನಾಲ್ಕೈದು ದಿನದಲ್ಲಿ. ನನಗೆ ಮುಂದೆ ಮುಖ್ಯವಾಗಿ ಚಾಲೆಂಜಿಂಗ್ ರೋಲ್ ಗಳನ್ನು ಮಾಡುವ ಆಸೆ ಇದೆ. ನೋಡುವವರಿಗೆ ನನ್ನ ಪಾತ್ರ ಹತ್ತಿರ ಆಗಬೇಕು ಜನರು ಖುಷಿ ಪಡಬೇಕು ಎನ್ನುವುದು ನನ್ನ ಆಸೆ.'' - ಜಯಶ್ರೀ ಆರಾಧ್ಯ, ನಟಿ

'ಪುಟ್ಟರಾಜು ಲವರ್ ಆಫ್ ಶಶಿಕಲಾ' ಚಿತ್ರದ ಬಗ್ಗೆ

'ಪುಟ್ಟರಾಜು ಲವರ್ ಆಫ್ ಶಶಿಕಲಾ' ಚಿತ್ರದ ಬಗ್ಗೆ

ಕನ್ನಡದಲ್ಲಿ ಬರುತ್ತಿರುವ 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಎಂಬ ಹೊಸ ಸಿನಿಮಾದಲ್ಲಿ ನಟಿ ಜಯಶ್ರೀ ಆರಾಧ್ಯ ನಟಿಸುತ್ತಿದ್ದಾರೆ. ಈ ಚಿತ್ರದ ಇಬ್ಬರು ನಾಯಕಿಯರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ. ಈ ಸಿನಿಮಾ ರಿಯಲ್ ಸ್ಟೋರಿಯ ಚಿತ್ರವಾಗಿದ್ದು, ಖೋ ಖೋ ಆಟದ ಮೇಲೆ ಚಿತ್ರದ ಕಥೆ ಇದೆ.

More from Filmibeat

English summary
Kannada Actress Jayshree Aradhya spoke about her granddaughter Marimuttu fame actress Sarojamma. Kannada supporting actress, 'Upendra' movie Marimuttu fame Sarojamma's granddaughter Jayshree Aradhya enters sandalwood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X