'ಜೆಸಿ' ಚಿತ್ರದಲ್ಲಿ ಪ್ರಖ್ಯಾತ್ ನಟನೆ ಮೆಚ್ಚಿ ತತ್‌ಕ್ಷಣ ಗಿಫ್ಟ್ ಕೊಟ್ಟ ಡಾಲಿ ಧನಂಜಯ್

ಭೂಗತಲೋಕದ ಕಥೆಗಳನ್ನು ಹೊತ್ತ ಸಾಕಷ್ಟು ಸಿನಿಮಾಗಳು ಬಂದು ಹೋಗಿದೆ. ಈ ವಾರ ಅಂಥದ್ದೆ ಕಥೆ ಆಧರಿಸಿದ 'ಜೆಸಿ: ದಿ ಯೂನಿವರ್ಸಿಟಿ' ಸಿನಿಮಾ ಬಿಡುಗಡೆ ಆಗಿದೆ. ನಟ ಡಾಲಿ ಧನಂಜಯ್ ನಿರ್ದೇಶನದ ಚಿತ್ರವನ್ನು ಚೇತನ್ ಜಯರಾಮ್ ನಿರ್ದೇಶನ ಮಾಡಿದ್ದಾರೆ.

'ಜೆಸಿ: ದಿ ಯೂನಿವರ್ಸಿಟಿ' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿ ಚಿತ್ರತಂಡ ಖುಷಿಯಾಗಿದೆ. ನಾಯಕ ಸೂರ್ಯ ಪ್ರಖ್ಯಾತ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಪ್ರೇಕ್ಷಕರ ಪ್ರಶಂಸೆಗೆ ಥ್ರಿಲ್ಲಾದ ಧನಂಜಯ್ ತಮ್ಮ ಕೈಯಲ್ಲಿದ್ದ ವಾಚ್ ಅನ್ನು ನಟ ಪ್ರಖ್ಯಾತ್‌ಗೆ ಗಿಫ್ಟ್ ಕೊಟ್ಟಿದ್ದಾರೆ. ಎಚ್​ಎಂಟಿ ಕಂಪನಿಯ ಗಂಡಬೇರುಂಡ ವಾಚ್ ಇದು.

JC The University Gets Good Response Dhananjay Gifts Watch to Surya Prakyath

ವಿಖ್ಯಾತ್ ಪರ್ಫಾರ್ಮನ್ಸ್ ನೋಡಿ ಕೊಂಡಾಡಿದ ಡಾಲಿ "ಗಂಡಬೇರುಂಡ ವಾಚ್ ಇದು. ವಿಜಯದ ಸಂಕೇತ" ಎಂದು ಹೇಳಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ. ಈ ವಾರ 7-10 ಕನ್ನಡ ಸಿನಿಮಾಗಳು ಬಿಡುಗಡೆಯಾಗಿದೆ. ರಾಜ್. ಬಿ ಶೆಟ್ಟಿ ನಟನೆಯ 'ರಕ್ಕಸಪುರದೊಳ್' ಹಾಗೂ 'ಜೆಸಿ' ಚಿತ್ರಗಳಿಗೆ ಪ್ರೇಕ್ಷಕರ ರೆಸ್ಪಾನ್ಸ್ ಚೆನ್ನಾಗಿದೆ. ಮಾಸ್ ಪ್ರೇಕ್ಷಕರಿಗೆ ಎರಡೂ ಸಿನಿಮಾಗಳು ಇಷ್ಟವಾಗುವಂತಿದೆ.

ಹೀರೊ ಆಗಿ ನಟಿಸುವುದರ ಜೊತೆ ಜೊತೆಗೆ ನಟ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಕಳೆದ ವರ್ಷ 'ವಿದ್ಯಾಪತಿ' ಸಿನಿಮಾ ನಿರ್ಮಿಸಿದ್ದರು. ಇದೀಗ 'ಜೆಸಿ: ದಿ ಯೂನಿವರ್ಸಿಟಿ' ಚಿತ್ರ ತೆರೆಗೆ ತಂದಿದ್ದಾರೆ. ಸೂರ್ಯ ವಿಖ್ಯಾತ್ ಜೊತೆಗೆ ರಂಗಾಯಣ ರಘು, ಥ್ರಿಲ್ಲರ್ ಮಂಜು ಸೇರಿ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಕಾಲೇಜು ವಿದ್ಯಾರ್ಥಿ ಮ್ಯಾಡಿ ಪ್ರಕರಣವೊಂದರಲ್ಲಿ ಜೈಲು ಸೇರುವಂತಾಗುತ್ತದೆ. ಜೈಲಿನ ನರಕಯಾತನೆ ಮುಂದೆ ಏನೆಲ್ಲಾ ತಿರುವುಗಳಿಗೆ ಕಾರಣವಾಗುತ್ತದೆ ಎನ್ನುವುದು 'ಜೆಸಿ' ಚಿತ್ರದ ಕಥೆ. 'ನಡುವೆ ಅಂತರವಿರಲಿ' ಚಿತ್ರದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ಪ್ರಖ್ಯಾತ್ ಈ ಚಿತ್ರದಲ್ಲಿ ಗನ್, ಕತ್ತಿ ಹಿಡಿದು ಅಬ್ಬರಿಸಿದ್ದಾರೆ. ಆತನ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದರಿಗಳಿಗೆ ಸೆಳೆಯುವ ಸುಳಿವು ಸಿಗುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಯುವ ನಟರ ಅಗತ್ಯವಿದೆ. ಆ ನಿಟ್ಟಿನಲ್ಲಿ ಸೂರ್ಯ ಪ್ರಖ್ಯಾತ್ ಭರವಸೆ ಮೂಡಿಸಿದ್ದಾರೆ. ರೋಹಿತ್ ಸೋವರ್ ಸಂಗೀತ, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ಅರ್ಜುನ್ ರಾಜ್ ಸ್ಟಂಟ್ಸ್ 'ಜೆಸಿ' ಚಿತ್ರಕ್ಕಿದೆ. ಭಾವನಾ ರೆಡ್ಡಿ ನಾಯಕಿಯಾಗಿ ಮಿಂಚಿದ್ದಾರೆ.

ಕೇಂದ್ರ ಕಾರಾಗೃಹಗಳ ಒಳಗಿನ ಪ್ರಪಂಚವನ್ನು 'ಜೆಸಿ' ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಜೈಲು ಒಳಗೆ ಹೋಗಿವವರಿಗೆ ನಾನಾ ವಿಚಾರಗಳನ್ನು ಕಲಿಸುವ ಯೂನಿವರ್ಸಿಟಿ ಎಂದು ಚಿತ್ರದಲ್ಲಿ ಹೇಳಿದ್ದಾರೆ. ಯಾರು ಏನು ಕಲಿಯುತ್ತಾರೆ ಎನ್ನುವುದರಿಂದ ಅವರ ಮುಂದೆ ಭವಿಷ್ಯ ಏನಾಗುತ್ತದೆ ಎನ್ನುವ ಸಂದೇಶವೂ ಇಲ್ಲಿದೆ.

3 ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ಪ್ರಖ್ಯಾತ್ ನಟಿಸಿ ಗೆದ್ದಿದ್ದಾರೆ. ಹಿಡಿದಿಟ್ಟುಕೊಳ್ಳುವ ಚಿತ್ರಕಥೆ ಚಿತ್ರದ ಹೈಲೆಟ್. ಸೆಕೆಂಡ್ ಹಾಫ್‌ಗಿಂತ ಫಸ್ಟ್ ಹಾಫ್ ಚೆನ್ನಾಗಿದೆ. ಬಹಳ ದಿನಗಳ ನಂತರ ಥ್ರಿಲ್ಲರ್ ಮಂಜು ಒಂದೊಳ್ಳೆ ಪಾತ್ರದಲ್ಲಿ ತೆರೆಮೇಲೆ ಬಂದಿದ್ದಾರೆ. ಬಿಜಿಎಂ, ಡೈಲಾಗ್ಸ್ ಎಲ್ಲವೂ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ.

ದುನಿಯಾ ಸೂರಿ ಹಾಗೂ ದುನಿಯಾ ವಿಜಯ್ ನಿರ್ದೇಶನದ ಸಿನಿಮಾಗಳ ರೀತಿ 'ಜೆಸಿ' ಭಾಸವಾಗುತ್ತದೆ. ಇಂಟರ್‌ವಲ್ ಸೀನ್ ಕಿಕ್ ಕೊಡುತ್ತದೆ. ರಂಗಾಯಣ ರಘು ಅನುಭವನ ನಟನೆ ಇಷ್ಟವಾಗುತ್ತದೆ. ಒಟ್ಟಾರೆ ಮಾಸ್ ಪ್ರೇಕ್ಷಕರಿಗೆ ಸಿನಿಮಾ ಭರ್ಜರಿ ಮನರಂಜನೆ ಒದಗಿಸುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X