ದೊಡ್ಡ ಪ್ರಶಂಸೆ ಪಡೆದ 'ಜೀರ್ಜಿಂಬೆ' ಟ್ರೇಲರ್
ಒಂದರ ನಂತರ ಒಂದರಂತೆ ವಿಭಿನ್ನ ಸಿನಿಮಾಗಳು ಕನ್ನಡದಲ್ಲಿ ಬರುತ್ತಿದೆ. ಇತ್ತೀಚಿಗಷ್ಟೆ ಬಂದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಬಳಿಕ ಈಗ ಮತ್ತೊಂದು ಮಕ್ಕಳ ಸಿನಿಮಾ ಬಂದಿದೆ.
'ಜೀರ್ಜಿಂಬೆ' ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ. ಟ್ರೇಲರ್ ನೋಡಿದವರಿಗೆ ಒಂದು ಒಳ್ಳೆಯ ಸಿನಿಮಾ ಎಂಬ ಭರವಸೆ ಮೂಡುತ್ತದೆ. ಕನ್ನಡದಲ್ಲಿ ಈ ರೀತಿ ಸಿನಿಮಾ ಬರುತ್ತಿದೆ ಎಂದು ಖುಷಿ ಆಗುತ್ತದೆ.
ಕಾಲಲ್ಲಿ ಚಕ್ರ ಹೆಗಲಲ್ಲಿ ರೆಕ್ಕೆ ಎಂಬ ಅಡಿ ಬರಹ ಚಿತ್ರಕ್ಕಿದೆ. ಮುಖ್ಯವಾಗಿ ಈ ಸಿನಿಮಾ ಸೈಕಲ್ ಮೇಲೆ ಸಾಗುತ್ತದೆ. ಇದೊಂದು ಮಕ್ಕಳ ಸಿನಿಮಾವಾಗಿದ್ದು, ಬಾಲ್ಯ ವಿವಾಹ ಸೇರಿದಂತೆ ಅನೇಕ ಅಂಶಗಳು ಚಿತ್ರದಲ್ಲಿದೆ. ಸಿನಿಮಾದಲ್ಲಿರುವ ಅನೇಕ ವಿಷಯಗಳು ತುಂಬ ಚೆನ್ನಾಗಿದೆ. ಈಗಾಗಲೇ ಸಾಕಷ್ಟು ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ.

ಸಿರಿ ವನಲಿ, ಲಾವಣ್ಯ ನಟನ, ಸುಮನಾ ನಗರಕರ್ ಚಿತ್ರದಲ್ಲಿ ನಟಿಸಿದ್ದಾರೆ. ಪುಷ್ಕರ್ ಫಿಲಂಸ್ ಈ ಚಿತ್ರವನ್ನು ಅರ್ಪಿಸಿದೆ. ಕಾರ್ತಿಕ್ ಸರಗೂರು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ.


Click it and Unblock the Notifications











