ಸುಖಾ ಸುಮ್ಮನೆ 'ಕಾಟೇರ'ನಿಗೆ ಕಂಟಕ ಒಡ್ಡುತ್ತಿದ್ದಾರಾ...?: ನಟ ದರ್ಶನ್ ಬಗ್ಗೆ ಯಾಕಿ ಹೊಸ ಚರ್ಚೆ?
ಕನ್ನಡ ಸಿನಿಮಾರಂಗದ ಸ್ಟಾರ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ದೊಡ್ಡ ಸ್ಥಾನವಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ ಬೇಸ್ ಇರುವ ಏಕೈಕ ನಟ ಎಂದರೇ ಅದು ದರ್ಶನ್ ತೂಗುದೀಪ. ಹಲವು ಕಾರಣಗಳಿಗೆ ಪದೇ ಪದೇ ವಿವಾದಗಳಿಗೆ ದಚ್ಚು ಒಳಗಾಗುತ್ತಿರುತ್ತಾರೆ. ವರ್ಷದಲ್ಲಿ ಕನಿಷ್ಠ ಮೂರರಿಂದ ನಾಲ್ಕು ವಿವಾದಗಳು ಅವರ ಸುತ್ತು ಸುತ್ತುತ್ತವೆ. ಇದಕ್ಕೆ ಅವರ ಆಟಿಟ್ಯೂಡ್ ಕೂಡ ಕಾರಣ. ಏನೇ ಆದರೂ ಅವರ ಫ್ಯಾನ್ಸ್ ಮಾತ್ರ ಅವರ ಕೈ ಬಿಡುವುದಿಲ್ಲ.
ಕಳೆದ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 29 ರಂದು 'ಕಾಟೇರ' ಸಿನಿಮಾ ಬಿಡುಗಡೆಯಾಗಿದೆ. ಕರ್ನಾಟಕ, ದೇಶ ಮತ್ತು ವಿದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ವರ್ಷದ ಕನ್ನಡ ಸಿನಿಮಾಗಳಿಗೆ ಥಿಯೇಟರ್‌ನಲ್ಲಿ ಭದ್ರ ಬುನಾದಿ ಕೂಡ ಹಾಕಿಕೊಟ್ಟಿದೆ. ಆದರೆ, ಭರ್ಜರಿ ಹಿಟ್ ಸಿನಿಮಾ ಕೊಟ್ಟ ಕೆಲವೇ ದಿನಗಳಲ್ಲಿ ಅವರ ಸುತ್ತ ವಿವಾದ ತಲೆ ಎತ್ತಿದೆ. ಅದೇ ಜೆಟ್‌ಲ್ಯಾಗ್ ಪಾರ್ಟಿ ವಿವಾದ.

ಜೆಟ್‌ಲ್ಯಾಗ್ ಪಾರ್ಟಿ, ದರ್ಶನ್ ಮತ್ತು ಹಿತ ಶತ್ರು!
ನಟ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‌ನ ಎರಡನೇ ಸಿನಿಮಾ 'ಕಾಟೇರ'. ಈ ಸಿನಿಮಾ ಡಿ ಬಾಸ್ ಫ್ಯಾನ್ಸ್ ಜೊತೆಗೆ ಕನ್ನಡಿಗರ ಮನ ಗೆದ್ದಿದೆ. ಇದೇ ಕಾರಣಕ್ಕೆ ಈ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ಸೆಲಬ್ರಿಟಿ ಶೋ ಆಯೋಜಿಸಲಾಗಿತ್ತು. ಇದಾದ ನಂತರ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಮಾಡಲಾಗಿದೆ. ಆದರೆ, ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ ಪ್ರಕರಣ ದರ್ಶನ್ ಮತ್ತು ಇತರ ಸೆಲಬ್ರಿಟಿಗಳ ಮೇಲಿದೆ. ಈ ಸಂಬಂಧ ನಟ ದರ್ಶನ್ ಮತ್ತು ಇತರರು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೂ ಹಾಜರಾಗಿದ್ದರು. ಈಗ ಸಕತ್ ಚರ್ಚೆಯಾಗುತ್ತಿರುವುದು ಈ ವಿಷಯದಲ್ಲಿ ನಟ ದರ್ಶನ್ ಅವರನ್ನು ಸುಖಾ ಸುಮ್ಮನೆ ಎಳೆದು ತರಲಾಗಿದೆ ಎಂಬ ವಿಷಯ.
ಹೌದು.... ಜೆಟ್ ಲ್ಯಾಗ್ ಲೇಟ್ ನೈಟ್ ಪಾರ್ಟಿ ವಿಷಯದಲ್ಲಿ ಪಬ್ ಮಾಲೀಕರಿಗೆ ಸಮನ್ಸ್ ನೀಡಬೇಕಿತ್ತು. ಅವರನ್ನು ವಿಚಾರಣೆ ಮಾಡಬೇಕಿತ್ತು. ಅದು ಬಿಟ್ಟು ಅಲ್ಲಿ ಪಾರ್ಟಿ ಮಾಡಿದ ನಟ ದರ್ಶನ್ ಅವರನ್ನು ಅಲ್ಲ ಎಂದು ಸೋಶಿಯಲ್ ಮಿಡಿಯಾದಲ್ಲಿ ಸಕತ್ ಚರ್ಚೆಯಾಗುತ್ತಿದೆ. ಇದು ಬೇಕು ಎಂತಲೇ ಅವರನ್ನು ಪ್ರಕರಣದಲ್ಲಿ ಸಿಲುಕಿಸುತ್ತಿವ ಪ್ರಯತ್ನ ಎಂದು ಆರೋಪಿಸಲಾಗುತ್ತಿದೆ.
ದರ್ಶನ್‌ಗೆ ಇದ್ಯಾ ಹಿತ ಶತ್ರುಗಳ ಕಾಟ!?
ನಟ ದರ್ಶನ್ ಅವರ ಯಶಸನ್ನು ಸಹಿಸದೇ ಇರುವವರು ಹೀಗೆ ಬೇಕು ಬೇಕು ಎಂತಲೇ ಅವರನ್ನು ವಿವಾದಗಳಲ್ಲಿ ಎಳೆದು ತರುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. 'ಕಾಟೇರ' ಸಿನಿಮಾ ಯಶಸ್ಸನ್ನು ಸಹಿಸದೇ ಇರುವವರು ಹೀಗೇಲ್ಲಾ ಬೇಡದೆ ಇರುವ ಪ್ರಕರಣಗಳಲ್ಲಿಸಿಲುಕಿಸಿ, ಅವರನ್ನು ಪೊಲೀಸ್ ಠಾಣೆ ಮೆಟ್ಟಿಲು ಏರುವಂತೆ ಮಾಡುತ್ತಿದ್ದಾರೆ ಎಂಬುದು ಡಿ ಬಾಸ್ ಫ್ಯಾನ್ಸ್ ಅಂಬೋಣ.

ಇತ್ತೀಚೆಗೆ ನಟ ದರ್ಶನ್ ಕೂಡ ಹಿತ ಶತ್ರುಗಳ ಬಗ್ಗೆ ಸುಳಿವು ನೀಡಿದ್ದರು. ದುಬೈನಿಂದಲೇ ಟ್ವೀಟ್ ಮಾಡಿದ್ದ ಅವರು, "ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ" ಎಂದಿದ್ದರು. ಇದು ಕೂಡ ವಾರ್ನಿಂಗ್ ಕೊಟ್ಟ ಹಾಗಿತ್ತು.


Click it and Unblock the Notifications











