For Quick Alerts
  ALLOW NOTIFICATIONS  
  For Daily Alerts

  ಜಿಲ್ಕ ಚಿತ್ರಕ್ಕಾಗಿ ಕವೀಶ್ ಶೆಟ್ಟಿ ಸಾಹಸ: ಚಿತ್ರರಂಗದಲ್ಲೇ ಇಂತಹ ಪ್ರಯತ್ನ ಮೊದಲ ಸಲ!

  |

  ಜೋಶ್, ಕಿರಿಕ್ ಪಾರ್ಟಿ ಬಳಿಕ ಕನ್ನಡದಲ್ಲಿ ಅಂತಹದ್ದೆ ಸೂಪರ್ ಹಿಟ್ ಆಗುವ ನಿರೀಕ್ಷೆ ಮೂಡಿಸಿರುವ ಚಿತ್ರ ಜಿಲ್ಕ. ಫೆಬ್ರವರಿ 7 ರಂದು ಈ ಸಿನಿಮಾ ತೆರೆಕಾಣುತ್ತಿದೆ. ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಿ ತೆರೆಗೆ ಬರ್ತಿದೆ.

  ಕವೀಶ್ ಶೆಟ್ಟಿ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಟೀನೆಜ್, ಕಾಲೇಜ್ ಮತ್ತು ರಿಲೇಷನ್ ಶಿಪ್ ಸುತ್ತ ಕಥೆ ಮಾಡಲಾಗಿದೆ. ಜಿಲ್ಕ ಚಿತ್ರದ ಟೀಸರ್, ಹಾಡುಗಳು ಯೂಟ್ಯೂಬ್ನಲ್ಲಿ ಸದ್ದು ಮಾಡ್ತಿದೆ. ಈ ಮೂಲಕ ಮೊದಲ ನೋಟದಲ್ಲೇ ಕವೀಶ್ ಶೆಟ್ಟಿ ಗಮನ ಸೆಳೆದಿದ್ದು, ಸಿನಿರಸಿಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ.

  ನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ' ಎನ್ನುತ್ತಾರೆ ಕವೀಶ್ ಶೆಟ್ಟಿನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ ಜಿಲ್ಕ' ಎನ್ನುತ್ತಾರೆ ಕವೀಶ್ ಶೆಟ್ಟಿ

  ಅಂದ್ಹಾಗೆ, ಕವೀಶ್ ಶೆಟ್ಟಿ ಈ ಚಿತ್ರದಲ್ಲಿ ಮೂರು ವಿಭಿನ್ನ ಲುಕ್ನಲ್ಲಿ ನಟಿಸಿದ್ದಾರೆ. ಅದಕ್ಕಾಗಿ ಅವರು ಮಾಡಿರುವ ಹಾರ್ಡ್ ವರ್ಕ್ ಮೆಚ್ಚಲೇಬೇಕು. ತೂಕ ಕಡಿಮೆ ಮಾಡುವುದು ಮತ್ತು ತೂಕ ಹೆಚ್ಚಿಸಿಕೊಳ್ಳುವುದು ಸಹಜ. ಆದರೆ ಒಂದೇ ಚಿತ್ರದಲ್ಲಿ ಮೂರು ಸಲ ತೂಕವನ್ನು ನಿಯಂತ್ರಿಸಿ ನಟಿಸಿದ್ದಾರೆ.

  ಹೈಸ್ಕೂಲ್ ಡೇಸ್ ಗೆ 51 ಕೆ.ಜಿ, ಕಾಲೇಜ್ ಡೇಸ್ ಗೆ 68 ಕೆ.ಜಿ ಮತ್ತು ಕಾಲೇಜ್ ಬಳಿಕದ ದೃಶ್ಯಗಳಲ್ಲಿ 78 ಕೆ.ಜಿ ತೂಕವನ್ನು ನಿಯಂತ್ರಿಸಿಕೊಂಡಿದ್ದಾರೆ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಒಂದು ಸಿನಿಮಾಗಾಗಿ ಈ ಮಟ್ಟದ ಬಾಡಿ ಟ್ರಾನ್ಸ್ ಫರ್ ಮೇಷನ್ (Body transformation) ಮಾಡಿರುವುದು ಇದೇ ಮೊದಲು.

  ಜಿಲ್ಕ'ದ ನಾಯಕಿಗೆ ದರ್ಶನ್ ಜತೆಗೆ ಡ್ಯುಯೆಟ್ ಹಾಡುವಾಸೆಜಿಲ್ಕ'ದ ನಾಯಕಿಗೆ ದರ್ಶನ್ ಜತೆಗೆ ಡ್ಯುಯೆಟ್ ಹಾಡುವಾಸೆ

  ಸಿನಿಮಾ ತಂಡ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಕೆಲವು ಕಾಲೇಜ್ ಗಳಿಗೆ ಭೇಟಿ ನೀಡಿದೆ. ಪ್ರತಿಯೊಂದು ಕಾಲೇಜಿನಲ್ಲೂ ಜಿಲ್ಕ ಚಿತ್ರದ ಬಗ್ಗೆ ಕ್ರೇಜ್ ಹುಟ್ಟಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲೂ ಜಿಲ್ಕ ಟೀಸರ್, ಡೈಲಾಗ್ ವೈರಲ್ ಆಗಿದ್ದು, ಟಿಕ್ ಟಾಕ್ನಲ್ಲೂ ಸದ್ದು ಮಾಡ್ತಿದೆ.

  Jilka Movie Set To Release On February 7th

  ನಾಯಕನಾಗಿ ನಟಿಸಿರುವ ಕವೀಶ್ ಶೆಟ್ಟಿ ಅವರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ವಿಶೇಷ. ಪ್ರಿಯಾ ಹೆಗ್ಡೆ ಮತ್ತು ಲಕ್ಷ್ ಶೆಟ್ಟಿ ಇಬ್ಬರು ನಾಯಕಿಯರು. ಕೃಷ್ಣಮೂರ್ತಿ ಕವತಾರ್, ಗೋಪಿಕಾ ದಿನೇಶ್, ಪ್ರತೀಕ್ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ ಪ್ರಮುಖ ತಾರಬಳಗದಲ್ಲಿದ್ದಾರೆ.

  ಮರಾಠಿಯಲ್ಲಿ ಜೀ ಸಿನಿಮಾಸ್ ಮತ್ತು ಹಿಂದಿಯಲ್ಲಿ ಎರೋಸ್ ಇಂಟರ್ ನ್ಯಾಷನಲ್ ಸಂಸ್ಥೆ ಈ ಚಿತ್ರವನ್ನ ಖರೀದಿಸಿದ್ದು, ಪ್ರೇಮಿಗಳ ದಿನಾಚರಣೆಯ ವಿಶೇಷವಾಗಿ ಬಿಡುಗಡೆಯಾಗುತ್ತಿದೆ. ಕಿಶೋರ್ ಖುಬ್ಚಂದಾನಿ, ತೆಹಲ್ ಸಿಂಗ್ ಸೈನಿ ಮತ್ತು ಮನೀಶ್ ನಾಗದೇವ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪ್ರಾಂಶು ಜಾ ಸಂಗೀತ ನೀಡಿದ್ದಾರೆ.

  English summary
  New talent Kaveesh shetty directional Jilka movie set to release on february 7th in kannada, hindi and marathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X