»   » "ಜಿಂಕೆಮರಿ" ಖ್ಯಾತಿಯ ಫರ್ಹಾನ್ ಗೆ ಮದುವೆ ಫಿಕ್ಸ್

"ಜಿಂಕೆಮರಿ" ಖ್ಯಾತಿಯ ಫರ್ಹಾನ್ ಗೆ ಮದುವೆ ಫಿಕ್ಸ್

Posted By:
Subscribe to Filmibeat Kannada

'ನಂದ ಲವ್ಸ್ ನಂದಿತಾ' (2009) ಚಿತ್ರದ ಜನಪ್ರಿಯ ಗೀತೆ "ಜಿಂಕೆ ಮರೀನಾ...ನೀ ಜಿಂಕೆ ಜಿಂಕೆ ಮರೀನಾ.." ಹಾಡಿನ ಖ್ಯಾತಿಯ ಎಮಿಲ್ ಯಾನೆ ಫರ್ಹಾನ್ ರೋಷನ್ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಶಬನಾಜ್ ಅವರ ಕೈಹಿಡಿಯುತ್ತಿದ್ದಾರೆ ಫರ್ಹಾನ್.

ಇವರಿಬ್ಬರ ಮದುವೆ ಜನವರಿ 4, 2015ರಂದು ಮಂಗಳೂರಿನಲ್ಲಿ ನೆರವೇರಲಿದ್ದು, ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ನಡೆದ 'ನಮೋ ಭೂತಾತ್ಮ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಫರ್ಹಾನ್ ಅವರು ತಮ್ಮ ಮದುವೆ ಸುದ್ದಿಯನ್ನು ಮಾಧ್ಯಮಗಳ ಕಿವಿಗೆ ಹಾಕಿದರು.

music director Farhan Roshan with Rahman

ಇನ್ನು ಫರ್ಹಾನ್ ಕೈಹಿಡಿಯುತ್ತಿರುವ ವಧು ಶಬನಾಜ್ ಅವರ ತಂದೆ ಕತಾರ್ ನಲ್ಲಿ ಸೆಟ್ಲ್ ಆಗಿದ್ದಾರೆ. ಶಬನಾಜ್ ಅವರಿಗೆ ಬಾರಿ, ತುಳು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳು ಗೊತ್ತು ಎಂದು ತಮ್ಮ ಭಾವಿ ಪತ್ನಿ ಬಗ್ಗೆ ವಿವರ ನೀಡಿದ್ದಾರೆ ಫರ್ಹಾನ್.

ಕಲಾ ಪದವೀಧರೆಯಾಗಿರುವ ಶಬನಾಜ್ ಅವರು ಮಂಗಳೂರು ಮೂಲದವರಾದರೂ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಹೊಸ ಬಾಳಿಗೆ ಅಡಿಯಿಡುತ್ತಿರುವ ನವಜೋಡಿಗೆ ಶುಭವಾಗಲಿ. (ಏಜೆನ್ಸೀಸ್)

English summary
"Jinke Marina..." song from Nanda Loves Nanditha marriage has been fixed with Shabnaz. The marriage will be held on on January 4, 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada