For Quick Alerts
  ALLOW NOTIFICATIONS  
  For Daily Alerts

  'ಸೂಪರ್ ಸ್ಟಾರ್' ವಿವಾದದ ಬಗ್ಗೆ 'ಜೆಕೆ' ನೇರ ಮಾತು

  By Bharath Kumar
  |

  ಸ್ಯಾಂಡಲ್ ವುಡ್ ಅಂಗಳಲ್ಲಿ ಮತ್ತೊಂದು ಟೈಟಲ್ ವಾರ್ ನಡೆಯುತ್ತಿದೆ. ನಟ ಕಾರ್ತಿಕ್ ಜಯರಾಂ ಅಭಿನಯದ 'ಮೇ 1' ಚಿತ್ರದ 'ಸೂಪರ್ ಸ್ಟಾರ್ ಜೆಕೆ' ಎಂದು ಟೈಟಲ್ ನೀಡಲಾಗಿದೆ ಎಂದು ಉಪ್ಪಿಯ ಅಭಿಮಾನಿಗಳು ಜೆಕೆ ವಿರುದ್ಧ ಗರಂ ಆಗಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ರಿಯಲ್ ಸ್ಟಾರ್ ಅಭಿಮಾನಿಗಳು, ಕೂಡಲೇ ಆ ಟೈಟಲ್ ನ್ನ ಹಿಂದಕ್ಕೆ ಪಡೆಯಬೇಕು ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

  ನಟ ಜೆಕೆ ಅವರು ಮಾಧ್ಯಮವೊಂದಕ್ಕೆ ಸೂಪರ್ ಸ್ಟಾರ್ ಟೈಟಲ್ ಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದಾರೆ. ಆ ಹೆಸರು ಯಾಕೆ ಬಳಸಲಾಯಿತು ಎಂಬುದರ ಬಗ್ಗೆ ಮತ್ತು ಉಪೇಂದ್ರ ಅವರ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ರೆ, ಜೆಕೆ ಸೂಪರ್ ಸ್ಟಾರ್ ಆಗಿದ್ದು ಯಾಕೆ.? ಮುಂದೆ ಓದಿ.....

  ಅದು ನಾನು ಕೇಳಿದ್ದಲ್ಲ....

  ಅದು ನಾನು ಕೇಳಿದ್ದಲ್ಲ....

  ''ಖಂಡಿತಾ ಉಪೇಂದ್ರ ಅವರ ಅಭಿಮಾನಿಗಳಿಗೆ ಬೇಸರವಾಗಿರುತ್ತೆ. ಒಬ್ಬ ಸ್ಟಾರ್ ಮೇಲೆ ಅಷ್ಟರ ಮಟ್ಟಿಗೆ ಪ್ರೀತಿ ಇರುತ್ತೆ. ಆದ್ರೆ, ಅದನ್ನ ಯಾಕೆ ಬಳಿಸಿದ್ದೀವಿ ಅಂತ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ. ನಾನು ಹೋಗಿ ಯಾರ್ ಹತ್ರನೂ ಈ ಟೈಟಲ್ ಕೊಡಿ ಎಂದು ಕೇಳಿಲ್ಲ. ಸೀರಿಯಲ್ ನಲ್ಲಿ ಇರೋದನ್ನ ಜನ ಹಾಗೆ ಮುಂದುವರೆಸಿದ್ರು. ಧಾರಾವಾಹಿಯಲ್ಲಿ ನೋಡಿದ ಆ ಪಾತ್ರವನ್ನ ಜನಕ್ಕೆ ತುಂಬಾ ಹತ್ತಿರವಾಗುತ್ತೆ. ಅದೇ ಹೇಳ್ತಾ ಹೋದ್ರು''

  ಜೆಕೆ 'ಸೂಪರ್ ಸ್ಟಾರ್' ಆದ್ರು: ಉಪೇಂದ್ರ ಅಭಿಮಾನಿಗಳು ರೊಚ್ಚಿಗೆದ್ರು.!ಜೆಕೆ 'ಸೂಪರ್ ಸ್ಟಾರ್' ಆದ್ರು: ಉಪೇಂದ್ರ ಅಭಿಮಾನಿಗಳು ರೊಚ್ಚಿಗೆದ್ರು.!

  ನಾನು ಉಪೇಂದ್ರ ಅವರ ಅಭಿಮಾನಿ

  ನಾನು ಉಪೇಂದ್ರ ಅವರ ಅಭಿಮಾನಿ

  ''ನಾನೊಬ್ಬ ಸಾಮಾನ್ಯ ಕಲಾವಿದ. ನಾನು ಯಾವ ಸ್ಟಾರ್ ಅಲ್ಲ. ಸೂಪರ್ ಸ್ಟಾರ್ ಟೈಟಲ್ ಕೂಡ ನನಗೆ ಬೇಡ. ಯಾಕಂದ್ರೆ, ಉಪೇಂದ್ರ ಸರ್ ತುಂಬಾ ಸಾಧನೆ ಮಾಡಿದ್ದಾರೆ. ಅವರನ್ನ ನಾನು ಸೂಪರ್ ಸ್ಟಾರ್ ಅಂತ ಹೇಳ್ತೀನಿ. ನಾನು ಅವರ ದೊಡ್ಡ ಅಭಿಮಾನಿ. ಅವರ ಹಲವು ಚಿತ್ರಗಳನ್ನ ಮೊದಲ ದಿನವೇ ಹೋಗಿ ನೋಡಿದ್ದೀನಿ, ಸುಮಾರು 25 ಸಲ ನೋಡಿರುವ ಚಿತ್ರಗಳು ಇವೆ''

  ಕನ್ನಡಕ್ಕೆ ಒಬ್ಬರೇ 'ಸೂಪರ್ ಸ್ಟಾರ್'.., 'ದುನಿಯಾ' ವಿಜಿಗಿಲ್ಲ 'ಆ' ಸ್ಟಾರ್.!ಕನ್ನಡಕ್ಕೆ ಒಬ್ಬರೇ 'ಸೂಪರ್ ಸ್ಟಾರ್'.., 'ದುನಿಯಾ' ವಿಜಿಗಿಲ್ಲ 'ಆ' ಸ್ಟಾರ್.!

  ದಯವಿಟ್ಟು ಬೇಜಾರಾಗಬೇಡಿ

  ದಯವಿಟ್ಟು ಬೇಜಾರಾಗಬೇಡಿ

  ''ನನಗೆ ಅರ್ಥವಾಗುತ್ತೆ ಅವರ ಅಭಿಮಾನಿಗಳಿಗೆ ಬೇಜಾರಾಗಿದೆ. ದಯವಿಟ್ಟು ಅಭಿಮಾನಿಗಳು ಬೇಜಾರಾಗಬಾರದು. ನಿಮಗೆ ಬೇಕಾರಾದ್ರೆ ಉಪೇಂದ್ರ ಸರ್ ಗೆ ಬೇಜಾರಾಗುತ್ತೆ. ಉಪೇಂದ್ರ ಅವರಿಗೆ ಬೇಜಾರಾದ್ರೆ ನನಗೆ ಬೇಸರವಾಗುತ್ತೆ. ನಾವೆಲ್ಲಾ ಉಪೇಂದ್ರ ಸರ್ ಗೆ ದೊಡ್ಡ ಅಭಿಮಾನಿಗಳು''

  ಸಿನಿಮಾ ನೋಡಿ ಅರ್ಥವಾಗುತ್ತೆ

  ಸಿನಿಮಾ ನೋಡಿ ಅರ್ಥವಾಗುತ್ತೆ

  ''ಇದು ಟೈಟಲ್ ಕಾರ್ಡ್ ನಲ್ಲಿ ಕೊಟ್ಟಿಲ್ಲ. ಸಿನಿಮಾದಲ್ಲಿ ಏನು ನಡೆಯುತ್ತಿರುತ್ತೆ ಅದಕ್ಕೆ ಸಂಬಂಧಿಸಿದಂತೆ ಕೊಟ್ಟಿರೋದು. ಅದು ಯಾಕೆ ಅಂತ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ. ನಿಜಕ್ಕೂ ಅಭಿಮಾನಿಗಳಿಗೆ ನೋವಾಗಿದ್ರೆ, ನಾನು ಕ್ಷಮೆ ಕೇಳೊದ್ರಿಂದ ಖುಷಿ ಆಗುತ್ತೆ ಎನ್ನುವುದಾರೇ ಸಾರಿ ಕೇಳ್ತೀನಿ'' ಎಂದು ಸಮರ್ಥಿಸಿಕೊಂಡಿದ್ದಾರೆ.

  English summary
  'Super star' title controversy between Karthik jayaram and Super star upendra fans. Jk has react on this controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X