For Quick Alerts
  ALLOW NOTIFICATIONS  
  For Daily Alerts

  ಮೆಜೆಸ್ಟಿಕ್ ನಿರ್ಮಾಪಕನ ಪಾಲಾದ 'ಜೋಡೆತ್ತು' ಟೈಟಲ್: ಹೀರೋ ಯಾರು?

  |
  ದರ್ಶನ್ ಮಂಡ್ಯ ಚುನಾವಣೆ ಟೈಮ್ ನಲ್ಲಿ ಬಳಸಿದ ಜೋಡೆತ್ತು ಪದ ಈಗ ಸಿನಿಮಾ

  ಮಂಡ್ಯ ಚುನಾವಣೆಯಲ್ಲಿ ಸಖತ್ ಸದ್ದು ಮಾಡಿದ್ದು ನಿಖಿಲ್ ಎಲ್ಲಿದ್ದಿಯಪ್ಪಾ ಮತ್ತು ಜೋಡೆತ್ತು. ಈ ಎರಡು ಹೆಸರಿನಲ್ಲಿ ಸಿನಿಮಾ ಮಾಡಲು ಸಿನಿರಂಗದವರು ಮನಸ್ಸು ಮಾಡಿದ್ದರು. ಅದರಂತೆ ವಾಣಿಜ್ಯ ಮಂಡಳಿಯಲ್ಲಿ ಈ ಎರಡು ಟೈಟಲ್ ಗಳಿಗಾಗಿ ನಿರ್ಮಾಪಕರು ಮುಗಿಬಿದ್ದಿದ್ದರು ಎನ್ನಲಾಗುತ್ತಿತ್ತು.

  ಈಗ ಎರಡು ಟೈಟಲ್ ಬಹುತೇಕ ಫಿಕ್ಸ್ ಆಗಿದೆಯಂತೆ. 'ಎಲ್ಲಿದ್ದಿಯಪ್ಪಾ' ಚಿತ್ರದ ಟೈಟಲ್ ಕೂಡ ನಿರ್ಮಾಪಕ ಗಣೇಶ್ ಬಿಡುಗಡೆ ಮಾಡಿದ್ದಾರೆ. ಇದೀಗ ಜೋಡೆತ್ತು ಶೀರ್ಷಿಕೆಯೂ ಖ್ಯಾತ ನಿರ್ಮಾಪಕರ ಪಾಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

  ದರ್ಶನ್ 55ನೇ ಚಿತ್ರಕ್ಕೆ ಫೈಟ್: ಒಂದೇ ಹೆಸರಿನಲ್ಲಿ ಇಬ್ಬರು ನಿರ್ಮಾಪಕರು ಜಾಹೀರಾತು

  ಹೌದು, ಮೆಜೆಸ್ಟಿಕ್ ಚಿತ್ರ ನಿರ್ಮಾಣ ಮಾಡಿದ್ದ ಎಂಜೆ ರಾಮಮೂರ್ತಿ ಅವರು ಜೋಡೆತ್ತು ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈಗ ಹೀರೋ ಯಾರೂ ಎನ್ನುವುದೇ ಕುತೂಹಲ. ಅಷ್ಟಕ್ಕೂ ಜೋಡೆತ್ತು ಚಿತ್ರಕ್ಕೆ ಹೀರೋ ಯಾರಾಗಬಹುದು?

  'ಜೋಡೆತ್ತು' ಚಿತ್ರಕ್ಕೆ ಹೀರೋ ಯಾರು?

  'ಜೋಡೆತ್ತು' ಚಿತ್ರಕ್ಕೆ ಹೀರೋ ಯಾರು?

  ಮೆಜಿಸ್ಟಿಕ್ ಚಿತ್ರದ ನಿರ್ಮಾಪಕ ಎಂಜೆ ರಾಮಮೂರ್ತಿ ಈಗ ಜೋಡೆತ್ತು ಎಂಬ ಟೈಟಲ್ ವಶಪಡಿಸಿಕೊಂಡಿದ್ದರು ನಾಯಕರು ಯಾರೂ ಎಂದು ನೋಡಿದ್ರೆ ಡಿ ಬಾಸ್ ದರ್ಶನ್ ಮತ್ತು ಯಶ್ ಕಡೆ ಬೆರಳು ತೋರಿಸುತ್ತಿದ್ದಾರೆ ಗಾಂಧಿನಗರದ ಜನ. ಅದು ಎಷ್ಟು ಸತ್ಯನೋ ಕುತೂಹಲ ಮೂಡಿಸಿದೆ.

  ನಮ್ಮ ಜೋಡೆತ್ತುಗಳ ಎದುರು ಯಾವ ಎತ್ತುಗಳು ಗೆಲ್ಲುತ್ತೆ ನೋಡೋಣ: ಸುಮಲತಾ

  ದರ್ಶನ್ ಕಾಲ್ ಶೀಟ್ ಕೊಟ್ಟಿದ್ದಾರೆ.!

  ದರ್ಶನ್ ಕಾಲ್ ಶೀಟ್ ಕೊಟ್ಟಿದ್ದಾರೆ.!

  ಹಾಗ್ನೋಡಿದ್ರೆ ಎಂಜೆ ರಾಮಮೂರ್ತಿ ಅವರಿಗೆ ನಟ ದರ್ಶನ್ ಕಾಲ್ ಶೀಟ್ ಕೊಟ್ಟಿದ್ದಾರೆ. ಮೆಜೆಸ್ಟಿಕ್, ಧರ್ಮ ಸಿನಿಮಾದ ನಂತರ ಮತ್ತೆ ದರ್ಶನ್ ಜೊತೆ ಸಿನಿಮಾ ಮಾಡುತ್ತಿದ್ದು, ಅಧಿಕೃತವಾಗಿ ಹೇಳಿಕೊಂಡಿದ್ದಾರೆ ಕೂಡ. ಆದ್ರೆ, ಈ ಸಿನಿಮಾ ಯಾವಾಗ ಆರಂಭವಾಗುತ್ತೆ, ಕಥೆ ಏನು ಎಂಬುದು ಗೌಪ್ಯವಾಗಿದೆ.

  D55 ಚಿತ್ರದ ಗೊಂದಲಕ್ಕೆ ಬ್ರೇಕ್: ದರ್ಶನ್ 55 ಅವರಿಗೆ, 56 ಇವರಿಗೆ.!

  ಜೋಡೆತ್ತು ಪಕ್ಕಾ ಆಗಬಹುದು

  ಜೋಡೆತ್ತು ಪಕ್ಕಾ ಆಗಬಹುದು

  ಒಂದು ಕಡೆ ಡಿ ಬಾಸ್ ಕಾಲ್ ಶೀಟ್ ಸಿಕ್ಕಿದೆ. ಇನ್ನೊಂದೆಡೆ ಜೋಡೆತ್ತು ಟೈಟಲ್ ಸಿಕ್ಕಿದೆ. ಕಾಲ ಕೂಡಿ ಬಂದ್ರೆ ಅದೇ ಟೈಟಲ್ ನಲ್ಲಿ ದರ್ಶನ್ ಅವರನ್ನ ನಾಯಕನನ್ನಾಗಿಸಿ ಸಿನಿಮಾ ಮಾಡಬಹುದು ಎಂಬ ಲೆಕ್ಕಾಚಾರ ಈಗ ಶುರುವಾಗಿದೆ. ಬಟ್, ದರ್ಶನ್ ಈ ಟೈಟಲ್ ಮತ್ತು ಕಥೆಗೆ ಓಕೆ ಕೊಡ್ತಾರಾ ಗೊತ್ತಿಲ್ಲ. ಕಥೆ ಚೆನ್ನಾಗಿದ್ದರೇ ಜೋಡೆತ್ತು ಹೆಸರಿನಲ್ಲಿ ಸಿನಿಮಾ ಮಾಡ್ತೀನಿ ಅಂತನೂ ದರ್ಶನ್ ಹೇಳಿದ್ದಾರೆ.

  ಸುಮಲತಾ ಪರ ಪ್ರಚಾರ ಮಾಡೋದ್ರಿಂದ 'ಜೋಡೆತ್ತು'ಗಳಿಗಾಗುವ ನಷ್ಟವೇನು?

  ಯಶ್ ಏನು ಹೇಳಬಹುದು

  ಯಶ್ ಏನು ಹೇಳಬಹುದು

  ಜೋಡೆತ್ತು ಅಂದ್ರೆ ನೆನಪಾಗುವುದೇ ದರ್ಶನ್ ಮತ್ತು ಯಶ್. ಈ ಟೈಟಲ್ ಇಟ್ಟು ಒಬ್ಬ ನಾಯಕನನ್ನ ಹಾಕ್ಕೊಂಡು ಸಿನಿಮಾ ಮಾಡಿದ್ರೆ ಸೂಕ್ತವಲ್ಲ. ಹಾಗಾಗಿ, ಇಬ್ಬರು ಹೀರೋಗಳು ಬೇಕಾಗುತ್ತೆ. ಸೋ ಒಬ್ಬರು ದರ್ಶನ್ ಅಂದ್ರೆ ಇನ್ನೊಬ್ಬರು ಯಶ್ ಆಗ್ತಾರಾ, ಇದು ಪಕ್ಕಾ ಆದ್ರೆ ರಾಕಿಂಗ್ ಸ್ಟಾರ್ ಒಪ್ಪಿಕೊಳ್ಳುತ್ತಾರಾ ಅನ್ನೋದು ಪ್ರಶ್ನೆಯಾಗಿದೆ.

  English summary
  Karnataka film chamber has granted Jodethu title to majestic producer mj ramamurthy. if starts this movie, who are the heroes?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X