For Quick Alerts
  ALLOW NOTIFICATIONS  
  For Daily Alerts

  ಪುನೀತ್ ಚಿತ್ರಕ್ಕೆ ನಾಯಕಿ ಆದ 'ಜೋಡಿಹಕ್ಕಿ' ಜಾನಕಿ ಟೀಚರ್ ಚೈತ್ರ

  By Naveen
  |
  ಪುನೀತ್ ಚಿತ್ರಕ್ಕೆ ನಾಯಕಿ ಆದ 'ಜೋಡಿಹಕ್ಕಿ' ಜಾನಕಿ ಟೀಚರ್ ಚೈತ್ರ | Filmibeat Kannada

  ಕಿರುತೆರೆಯ ಪ್ರತಿಭೆಗಳು ಹಿರಿತೆರೆಗೆ ಬರುವುದು ಸಾಮಾನ್ಯ. ನಟಿ ರಾಧಿಕಾ ಪಂಡಿತ್, ರಚಿತಾ ರಾಮ್ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟಿಯರು ಮೊದಲು ಸೀರಿಯಲ್ ನಲ್ಲಿ ಮಿಂಚಿದ್ದರು. ಈಗ ಮತ್ತೊಂದು ಧಾರಾವಾಹಿಯ ಪ್ರತಿಭೆ ಸಿನಿಮಾರಂಗ ಪ್ರವೇಶ ಮಾಡಿದೆ.

  'ಜೀ ಕನ್ನಡ' ವಾಹಿನಿ ನೋಡುಗರಿಗೆ 'ಜೋಡಿ ಹಕ್ಕಿ' ಧಾರಾವಾಹಿ ಬಲು ಇಷ್ಟದ ಸೀರಿಯಲ್. ಅದರಲ್ಲಿ ಜಾನಕಿ ಟೀಚರ್ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಜಾನಕಿ ಟೀಚರ್ ಸೌಂದರ್ಯ ಅವರ ಸಹಜ ನಟನೆ ಧಾರಾವಾಹಿಯ ಹೈಲೆಟ್. ಈ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಜಾನಕಿ ಟೀಚರ್ ಅಂದರೆ ಚೈತ್ರ ರಾವ್ ಅವರು ಈಗ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಅದು ಕೂಡ ನಟ ಪುನೀತ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಎನ್ನುವುದು ವಿಶೇಷ. ಮುಂದೆ ಓದಿ...

  ಅಪ್ಪು ನಿರ್ಮಾಣದ 2ನೇ ಚಿತ್ರ

  ಅಪ್ಪು ನಿರ್ಮಾಣದ 2ನೇ ಚಿತ್ರ

  ನಟ ಪುನೀತ್ ರಾಜ್ ಕುಮಾರ್ ತಮ್ಮ ಬ್ಯಾನರ್ ನಲ್ಲಿ ಎರಡನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ 'ಜೋಡಿಹಕ್ಕಿ' ಖ್ಯಾತಿಯ ಚೈತ್ರ ಆಯ್ಕೆ ಆಗಿದ್ದಾರೆ.

  ಮಾಯಬಜಾರ್ 2016

  ಮಾಯಬಜಾರ್ 2016

  ಪುನೀತ್ 'ಮಾಯಬಜಾರ್ 2016' ಎಂಬ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಚಿತ್ರದ ಮುಹೂರ್ತ ನಿನ್ನೆ ನೆಡೆದಿದೆ. ಪುನೀತ್ ಅವರ ಪಿ.ಆರ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಚೈತ್ರ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

  ಸಂತಸದಲ್ಲಿ ಚೈತ್ರ

  ಸಂತಸದಲ್ಲಿ ಚೈತ್ರ

  ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡಿರುವ ಚೈತ್ರ ''ನನ್ನ ಮೊದಲ ಚಿತ್ರವನ್ನು ಪುನೀತ್ ಸರ್ ಅವರ ಬ್ಯಾನರ್ ನಲ್ಲಿ ಮಾಡುತ್ತಿರುವ ಕಾರಣ ತುಂಬ ಉತ್ಸಾಹದಲ್ಲಿ ಇದ್ದೇನೆ. ನನ್ನ ಪಾತ್ರ ತುಂಬ ಡಿಫರೆಂಟ್ ಆಗಿದೆ. ಕಥೆ ಇಷ್ಟ ಆಯ್ತು. ಅದಕ್ಕೆ ಒಪ್ಪಿಕೊಂಡೆ.'' ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

  ಚಿತ್ರದ ಬಗ್ಗೆ

  ಚಿತ್ರದ ಬಗ್ಗೆ

  'ಮಾಯಬಜಾರ್ 2016' ಚಿತ್ರವನ್ನು ರಾಧಾಕೃಷ್ಣ ನಿರ್ದೇಶನ ಮಾಡಿದ್ದಾರೆ. 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್, ವಸಿಷ್ಟ, ಅಚ್ಚುತ್ ಕುಮಾರ್, ಸುಧಾರಾಣಿ, ಚೈತ್ರ ರಾವ್ ಇಲ್ಲಿ ನಟಿಸಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. 'ಮಯಾ ಬಜಾರ್' ಟೈಟಲ್ ಟೀಸರ್ ಕೂಡ ನಿನ್ನೆ ರಿಲೀಸ್ ಆಗಿದೆ.

  ಪುನೀತ್ ನಿರ್ಮಾಣದ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್ಪುನೀತ್ ನಿರ್ಮಾಣದ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್

  ಹೊಸಬರಿಗೆ ಅವಕಾಶ

  ಹೊಸಬರಿಗೆ ಅವಕಾಶ

  ಪುನೀತ್ ತಮ್ಮ ನಿರ್ಮಾಣದಲ್ಲಿ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ತಮ್ಮ ಮೊದಲ ಚಿತ್ರ 'ಕವಲುದಾರಿ'ಯಲ್ಲಿಯೂ ಹೊಸ ನಟಿ ರೋಷಿನಿ ಪ್ರಕಾಶ್ ಅವರಿಗೆ ಅಪ್ಪು ಅವಕಾಶ ಕೊಟ್ಟಿದ್ದರು.

  ಮತ್ತೊರ್ವ ಪ್ರತಿಭಾನ್ವಿತ ನಿರ್ದೇಶಕನಿಗೆ ಚಾನ್ಸ್ ಕೊಟ್ಟ ಪವರ್ ಸ್ಟಾರ್ಮತ್ತೊರ್ವ ಪ್ರತಿಭಾನ್ವಿತ ನಿರ್ದೇಶಕನಿಗೆ ಚಾನ್ಸ್ ಕೊಟ್ಟ ಪವರ್ ಸ್ಟಾರ್

  English summary
  Kannada serial actress, 'Jodi Hakki' fame Chaitra Rao playing lead role in kannada actor Puneeth Rajkumar's Maya Bazaar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X