»   » ಶಿವರಾಜ್‌ - ಜಗ್ಗೇಶ್‌ ‘ಜೋಡಿ’ಯಾಗಿ ಬರುತ್ತಿದ್ದಾರೆ.. ದಾರಿಬಿಡಿ!

ಶಿವರಾಜ್‌ - ಜಗ್ಗೇಶ್‌ ‘ಜೋಡಿ’ಯಾಗಿ ಬರುತ್ತಿದ್ದಾರೆ.. ದಾರಿಬಿಡಿ!

Posted By: Super
Subscribe to Filmibeat Kannada

ನವರಸನಾಯಕ ಜಗ್ಗೇಶ್‌ ಹಾಗೂ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಜತೆಯಾಗಿ ನಟಿಸಿರುವ 'ಜೋಡಿ" ಈ ಶುಕ್ರವಾರ (ಡಿ.7) ರಾಜ್ಯಾದ್ಯಂತ ತೆರೆಕಾಣುತ್ತಿದೆ.

ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಎಂ. ನೀಲಕಂಠ ನಾಯ್ಡು ಅರ್ಪಿಸಿ, ಧೀರ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿರುವ ಪ್ರೀತಿ, ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ ಮಿಶ್ರಿತ ಚಿತ್ರವೇ ಜೋಡಿ. ಭಾರೀ ತಾರಾಗಣದ ಈ ಅದ್ಧೂರಿ ಚಿತ್ರವನ್ನು 'ತುತ್ತಾ ಮುತ್ತಾ" ಖ್ಯಾತಿಯ ಕಿಶೋರ್‌ ಸರ್ಜಾ ನಿರ್ದೇಶಿಸಿದ್ದಾರೆ.

ಎಂ.ಎಸ್‌. ರಾಜಶೇಖರ್‌ ಸಂಭಾಷಣೆ, ಪಿ.ಕೆ.ಎಚ್‌. ದಾಸ್‌ ಛಾಯಾಗ್ರಹಣ, ಆರ್‌.ಎನ್‌. ಜಯಗೋಪಾಲ್‌, ಕಲ್ಯಾಣ್‌ರ ಸಾಹಿತ್ಯ, ಎಸ್‌.ಎ. ರಾಜ್‌ಕುಮಾರ್‌ ಸಂಗೀತ, ಕೆ.ಡಿ. ವೆಂಕಟೇಶ್‌ ಸಾಹಸ, ಶ್ಯಾಂ ಸಂಕಲನ, ನಂಜುಂಡಸ್ವಾಮಿ ಕಲೆ ಇರುವ ಜೋಡಿಯಲ್ಲಿ ಶಿವರಾಜ್‌ಕುಮಾರ್‌, ಜಗ್ಗೇಶ್‌ ಜತೆಗೆ ಮುಂಬೈ ಬೆಡಗಿ ಪೂನಂ, ಮುಖ್ಯಮಂತ್ರಿ ಚಂದ್ರು, ವಿಜಯಸಾರಥಿ, ಕಲ್ಯಾಣಿ, ಸಾಧು ಕೋಕಿಲ, ಶೈಲಜಾ ಜೋಷಿ, ಕಾಶಿ, ಶಂಕರ್‌ ಅಶ್ವತ್ಥ್‌, ಚಿತ್ರಾ ಶೆಣೈ, ಲೋಕನಾಥ್‌, ದೊಡ್ಡಣ್ಣ ಮೊದಲಾದವರಿದ್ದಾರೆ.

ಬೆಂಗಳೂರಿನ ನರ್ತಕಿ, ಪ್ರಮೋದ್‌, ಉಮಾ, ಶಾಂತಿ, ನವರಂಗ್‌, ಗೋವರ್ಧನ್‌, ಮೋಹನ್‌, ಸಿದ್ಧಲಿಂಗೇಶ್ವರ, ಪ್ರಸನ್ನ, ಪುಟ್ಟಣ್ಣ, ವೆಂಕಟೇಶ್ವರ, ಬಾಲಾಜಿ; ದೊಡ್ಡಬಳ್ಳಾಪುರದ ರಾಜ್‌ಕಮಲ್‌; ಮೈಸೂರಿನ ಉಡ್‌ಲ್ಯಾಂಡ್ಸ್‌, ಗಾಯತ್ರಿ, ಸರಸ್ವತಿ, ಲಕ್ಷ್ಮೀ; ಮಂಡ್ಯದ ಗುರುಶ್ರೀ; ಹಾಸನದ ಭಾನು; ಶಿವಮೊಗ್ಗದ ವೀರಭದ್ರೇಶ್ವರ; ಚಿಕ್ಕಮಗಳೂರಿನ ಮಿಲನ್‌; ಚಿತ್ರದುರ್ಗದ ಬಸವೇಶ್ವರ; ದಾವಣಗೆರೆಯ ಗೀತಾಂಜಲಿ; ಮಂಗಳೂರಿನ ಜ್ಯೋತಿ; ಹುಬ್ಬಳ್ಳಿಯ ಸುಧಾ, ರೂಪಂ; ಧಾರವಾಡದ ವಿಜಯ; ಬೆಳಗಾವಿಯ ಸಂತೋಷ್‌ ಚಿತ್ರಮಂದಿರಗಳಲ್ಲಿ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.

English summary
Jodi This Fridays gift for kannada film lovers

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada