twitter
    For Quick Alerts
    ALLOW NOTIFICATIONS  
    For Daily Alerts

    ಬಿಡುಗಡೆಗೆ ಮೊದಲೇ ಜೋಗಯ್ಯ ಟಿಕೆಟ್ ಸೋಲ್ಡ್ ಔಟ್!

    |

    ಯಾರ್ರೀ ಟಿಕೆಟ್ ಬಾಲ್ಕನಿ 1,000, ಸೆಕಂಡ್ ಕ್ಲಾಸ್ 700. ಯಾರ್ರೀ ಟಿಕೆಟ್ ಟಿಕೆಟ್. 'ಜೋಗಯ್ಯ' ಚಿತ್ರ ಬಿಡುಗಡೆ ಬಿಡುಗಡೆಯಾಗುತ್ತಿರುವ ಕಪಾಲಿ ಚಿತ್ರಮಂದಿರದಲ್ಲಿ ಕಾಳಸಂತೆಯಲ್ಲಿ ಭಾನುವಾರ (ಆ.14) ಟಿಕೆಟ್ ಬಿಕರಿ ಆಗುತ್ತಿದ್ದ ಪರಿ. ಚಿತ್ರ ಬಿಡುಗಡೆಗೆ ಮೊದಲೇ ಕಪಾಲಿ ಚಿತ್ರಮಂದಿರದ ಮುಂದೆ ಟಿಕೆಟ್ ಗಾಗಿ ಭಾರೀ ನೂಕು ನುಗ್ಗಲು.

    ಎರಡು ದಿನದ ಟಿಕೆಟ್ ಮಾತ್ರ ಕೌಂಟರ್ ನಲ್ಲಿ ಕೊಟ್ಟಿದ್ದು ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಬೋರ್ಡ್. ಇದರಲ್ಲಿ ಕೌಂಟರ್ ನಲ್ಲಿ ಎಷ್ಟು ಟಿಕೆಟ್ ವಿತರಿಸಲಾಗಿದೆ ಬ್ಲ್ಯಾಕ್ ಟಿಕೆಟ್ ನವರಿಗೆ ಎಷ್ಟು ಕೊಡಲಾಗಿದೆ ಅನ್ನೋದಕ್ಕೆ ಲೆಕ್ಕವಿಲ್ಲ. ಯಾಕೆಂದ್ರೆ ಕಪಾಲಿ ಚಿತ್ರಮಂದಿರ ಗೋಡೌನ್ ಇದ್ದ ಹಾಗೆ. ನಗರದ ಅತಿ ದೊಡ್ಡ ಚಿತ್ರಮಂದಿರದಲ್ಲೊಂದು.

    ಟಿಕೆಟ್ ಬೆಲೆ ಸೆಕಂಡ್ ಕ್ಲಾಸ್ ಗೆ ರೂಪಾಯಿ 75 ಮತ್ತು ಬಾಲ್ಕನಿಗೆ 100 ರೂಪಾಯಿಗೆ ಹೆಚ್ಚಿಸಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಚಿತ್ರ 245 ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿಕೆ ನೀಡಿದ್ದಾರೆ.

    ರಾಜಣ್ಣ ಅಭಿನಯದ 'ಮಯೂರ' ಚಿತ್ರದ ನಂತರ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಮೆಜೆಸ್ಟಿಕ್ ಪ್ರದೇಶದ ಎರಡು ಚಿತ್ರಮಂದಿರದಲ್ಲಿ (ಕಪಾಲಿ, ಸಂತೋಷ್) ಬಿಡುಗಡೆಯಾಗುತ್ತಿದೆ. ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ಪ್ರಾಂತ್ಯವೊಂದರಲ್ಲೇ 65 ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಗೊಳ್ಳುತ್ತಿದೆ.

    ಸಂತೋಷ್ ಚಿತ್ರಮಂದಿರದಲ್ಲಿ 2011ರ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ 'ಹುಡುಗರು' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಕಪಾಲಿ ಚಿತ್ರಮಂದಿರದಲ್ಲಿ ಈಗ ಪ್ರದರ್ಶನ ಗೊಳ್ಳುತ್ತಿರುವ 'ಕಿರಾತಕ' ಚಿತ್ರ ಕೂಡ 50 ದಿನ ಪೂರೈಸಿದ್ದು ಉತ್ತಮ ಗಳಿಕೆ ಕಾಣುತ್ತಿದೆ. ಚಿತ್ರ ಎತ್ತಂಗಡಿಗೆ 'ಕಿರಾತಕ' ಚಿತ್ರ ತಂಡದ ಪ್ರತಿಭಟನೆ ಕೂಡಾ ನಡೆಸುತ್ತಿದೆ.

    ಮಲ್ಟಿಪ್ಲೆಕ್ಸ್ ನಲ್ಲಿ ಬುಧವಾರದಿಂದ (ಆ.17) ಟಿಕೆಟ್ ವಿತರಿಸಲಾಗುತ್ತಿದೆ. ಬೆಂಗಳೂರು ನಗರದ ವಿಸನ್ ಸಿನಿಮಾ ಮಲ್ಟಿಪ್ಲೆಕ್ಸ್ ನಲ್ಲಿ ಆನ್ ಲೈನ್ ಬುಕ್ಕಿಂಗ್ ಆರಂಭವಾಗಿದ್ದು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಗಾಂಧಿನಗರದ ಮೂಲಗಳ ಪ್ರಕಾರ, 'ಜೋಗಯ್ಯ' ಚಿತ್ರವನ್ನು ಈಗಾಗಲೇ ನಿರ್ಮಾಪಕಿ ರಕ್ಷಿತಾ ಭಾರೀ ಬೆಲೆಗೆ ಹಂಚಿಕೆದಾರರಿಗೆ ಮಾರಿ ಬಿಟ್ಟು ಉತ್ತಮ ಲಾಭದಿಂದ ಸೇಫ್ ಆಗಿದ್ದಾರೆ. ಚಿತ್ರದ ಟಿವಿ ರೈಟ್ಸ್ ಕೂಡಾ 'ಪರಮಾತ್ಮ' ನಂತರ ದಾಖಲೆ ಬೆಲೆಗೆ ಮಾರಾಟವಾಗಿದೆ. ಚಿತ್ರ ಬಿಡುಗಡೆಗೊಳ್ಳುತ್ತಿರುವ ಎಲ್ಲಾ ಚಿತ್ರಮಂದಿರದಲ್ಲಿ ಈಗಾಗಲೇ ಶಿವಣ್ಣ ಕಟ್ ಔಟ್ ರಾರಾಜಿಸುತ್ತಿವೆ. ಅಂದ ಹಾಗೆ, ಚಿತ್ರ ಆ.19ರಂದು ತೆರೆಯ ಮೇಲೆ ಅಪ್ಪಳಿಸಲಿದೆ.

    ನಿರ್ದೇಶಕ ಪ್ರೇಮ್ ಅವರಿಗೆ ಕೂಡ ಈ ಚಿತ್ರ ಅಗ್ನಿ ಪರೀಕ್ಷೆಗೆ ಒಡ್ಡಲಿದೆ. ಅವರ ನಿರ್ದೇಶನದ, ಪುನೀತ್ ಅಭಿನಯದ 'ರಾಜ್-ದಿ ಶೋ ಮ್ಯಾನ್' ಪ್ರೇಕ್ಷಕರ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿದ್ದರಿಂದ 'ಜೋಗಯ್ಯ' ಹೇಗಿದೆಯೋ ಎಂಬ ಅಳಕೂ ಪ್ರೇಕ್ಷಕರಲ್ಲಿದೆ.

    ಒಂದಂತೂ ಸತ್ಯ 'ಜೋಗಿ' ಚಿತ್ರಕ್ಕಿದ್ದ ಹೈಪ್ 'ಜೋಗಯ್ಯ'ನಿಗೆ ಸಿಕ್ಕಿಲ್ಲ. ಆದರೂ ತುಂಬಾ ನಿರೀಕ್ಷೆಯ 'ಜೋಗಯ್ಯ' ಚಿತ್ರ ಸಿನಿರಸಿಕರ ನಿರೀಕ್ಷೆಗೆ ತಕ್ಕಂತೆ ಇದೆಯೇ ಇಲ್ಲವೇ ಇನ್ನು ಕೆಲವೇ ದಿನದಲ್ಲಿ ಗೊತ್ತಾಗಲಿದೆ.

    English summary
    Shivarajkumar's 100th film Jogayya tickets are being sold in black in Kapali theatre in Majestic in Bangalore, even before the release. Prem is the director and his wife Rakshita has produced the much awaited Kannada movie.
    Tuesday, August 16, 2011, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X