twitter
    For Quick Alerts
    ALLOW NOTIFICATIONS  
    For Daily Alerts

    ಈ ಕಲಾವಿದರ ಜೀವನ ಬದಲಾಯಿಸಿದ್ದು ಜೋಗಿ ಸಿನಿಮಾ

    |

    ಜೋಗಿ ಸಿನಿಮಾ ಬಿಡುಗಡೆಯಾಗಿ ಆಗಸ್ಟ್ 18 ಕ್ಕೆ ಹದಿನೈದು ವರ್ಷವಾಯಿತು. ಶಿವಣ್ಣ, ಅರುಂಧತಿ ನಾಗ್, ಜೆನಿಫರ್ ಕೊತ್ವಾಲ್ ಮುಖ್ಯ ಭೂಮಿಕೆಯಲ್ಲಿದ್ದ ಈ ಸಿನಿಮಾ ಸೃಷ್ಟಿಸಿದ್ದ ಕೆಲವು ದಾಖಲೆಗಳು ಈಗಲೂ ಹಾಗೆಯೇ ಇವೆ.

    Recommended Video

    ಬ್ಲಾಕ್ ಟಿಕೆಟ್ ಮಾರಿ ಸೈಟ್ ತಗೊಂಡಿದ್ರು ಅಭಿಮಾನಿಗಳು | Filmibeat Kannada

    ಜೋಗಿ ಸಿನಿಮಾ ಚಿತ್ರ ನಿರೂಪಣೆ, ಕತೆ ಹೇಳುವ ವಿಧಾನ, ನಾಯಕನ ವೈಭವೀಕರಣ, ಹಾಡುಗಳ ಸಾಹಿತ್ಯದ ಭಿನ್ನತೆ ಹೀಗೆ ಹಲವು ಕಾರಣಗಳಿಗೆ ವಿಭಿನ್ನ. ಸಿನಿಮಾ ಒಳಗೊಂಡಿದ್ದ ರೌಡಿಸಂನ 'ಕಚ್ಚಾತನ' ಹೊಸದಾಗಿ ಕಂಡಿತ್ತು. ರೌಡಿಸಂ ಸಿನಿಮಾ ಆದರೂ ಕತೆಯ ಮೂಲ ಧಾತು ಅಮ್ಮ-ಮಗನ ನಡುವಿನ ಪ್ರೇಮವೇ ಆಗಿತ್ತು.

    ಕುಚೇಲನಾಗಿದ್ದ ನನ್ನನ್ನು ಕುಬೇರನಾಗಿಸಿದ ಸಿನಿಮಾ ಜೋಗಿ: ಆದಿ ಲೋಕೇಶ್ ಬಿಚ್ಚಿಟ್ಟ ನೆನಪುಗಳುಕುಚೇಲನಾಗಿದ್ದ ನನ್ನನ್ನು ಕುಬೇರನಾಗಿಸಿದ ಸಿನಿಮಾ ಜೋಗಿ: ಆದಿ ಲೋಕೇಶ್ ಬಿಚ್ಚಿಟ್ಟ ನೆನಪುಗಳು

    ಜೋಗಿ ಸಿನಿಮಾ ಹಿಟ್ ಆಗಿ ಹಣವನ್ನಷ್ಟೆ ಮಾಡಲಿಲ್ಲ, ಬದಲಿಗೆ ಸಿನಿಮಾದಲ್ಲಿ ನಟಿಸಿದ್ದ ಹಲವಾರು ನಟರಿಗೆ ಹೊಸ ಜೀವನವನ್ನೇ ಕೊಟ್ಟಿತು. ಹಲವಾರು ಹೊಸ ನಟರು, ಸಂಕಷ್ಟದಲ್ಲಿದ್ದ ನಟರಿಗೆ ಹೊಸ ಜೀವನ ದಯಪಾಲಿಸಿತು 'ಜೋಗಿ'. ಅಂಥಹಾ ನಟರ ಪಟ್ಟಿ ಇಲ್ಲಿದೆ.

    ಬ್ಯುಸಿ ನಟಿಯಾದ ಜೆನಿಫರ್ ಕೊತ್ವಾಲ್

    ಬ್ಯುಸಿ ನಟಿಯಾದ ಜೆನಿಫರ್ ಕೊತ್ವಾಲ್

    ಜೆನಿಫರ್ ಕೊತ್ವಾಲ್ ಜೋಗಿ ಸಿನಿಮಾದ ನಾಯಕಿ, ಉತ್ಸಾಹದಿಂದ ನಟಿಸಿದ್ದ ಜೆನಿಫರ್, ಜೋಗಿಗೂ ಮುನ್ನಾ ಕೆಲವೇ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ್ದರು. ಜೋಗಿ ನಂತರ ಕನ್ನಡದಲ್ಲಿ ಜೆನಿಫರ್ ಬೇಡಿಕೆಯ ನಟಿಯಾಗಿಬಿಟ್ಟರು.

    'ಜೋಗಿ' ಚಿತ್ರದ ನಾಯಕಿ ಜನಿಫರ್ ಸಿನಿಮಾರಂಗದಿಂದ ದೂರ ಆಗಿದ್ದೇಕೆ? ಈಗ ಎಲ್ಲಿದ್ದಾರೆ? ಇಲ್ಲಿದೆ ಮಾಹಿತಿ'ಜೋಗಿ' ಚಿತ್ರದ ನಾಯಕಿ ಜನಿಫರ್ ಸಿನಿಮಾರಂಗದಿಂದ ದೂರ ಆಗಿದ್ದೇಕೆ? ಈಗ ಎಲ್ಲಿದ್ದಾರೆ? ಇಲ್ಲಿದೆ ಮಾಹಿತಿ

    ಆದಿ ಲೋಕೇಶ್‌ಗೆ ಅವಕಾಶಗಳ ಸುರಿಮಳೆ

    ಆದಿ ಲೋಕೇಶ್‌ಗೆ ಅವಕಾಶಗಳ ಸುರಿಮಳೆ

    ಮೈಸೂರು ಲೋಕೇಶ್ ಮಗನಾಗಿದ್ದರೂ ಸಿನಿಮಾರಂಗದಲ್ಲಿ ನೆಲೆನಿಲ್ಲಲು ಒದ್ದಾಡುತ್ತಿದ್ದ ಆದಿ ಲೋಕೇಶ್‌ಗೆ ಜೋಗಿ ಅದೃಷ್ಟವನ್ನೇ ಬದಲಾಯಿಸಿತು. ಅವರ ಬಿಡ್ಡಾ ಪಾತ್ರ ಸೂಪರ್ ಹಿಟ್ ಆಯಿತು. ಜೋಗಿ ಸಿನಿಮಾದ ನಂತರ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ ಆದಿ ಲೋಕೇಶ್ ಈಗಲೂ ಬ್ಯುಸಿ ನಟರಾಗಿದ್ದಾರೆ.

    ಅಭಿನಯವೇ ಗೊತ್ತಿರಲಿಲ್ಲ ಪೊಟ್ರೊ ನಾಗರಾಜ್ ಗೆ

    ಅಭಿನಯವೇ ಗೊತ್ತಿರಲಿಲ್ಲ ಪೊಟ್ರೊ ನಾಗರಾಜ್ ಗೆ

    ಸಿನಿಮಾದಲ್ಲಿ ಪೊಟ್ರೆ ನಾಗರಾಜ್ ಎಂಬ ಪಾತ್ರವಿದೆ. ಆ ಪಾತ್ರಧಾರಿ ಈಗ ಅದೇ ಹೆಸರಿನಿಂದ ಖ್ಯಾತರು. ಜೋಗಿ ಅವರಿಗೆ ಮೊಟ್ಟ ಮೊದಲನೇಯ ಸಿನಿಮಾ. ಜೋಗಿ ಗೆ ಮುನ್ನಾ ಅಭಿನಯವನ್ನೇ ಮಾಡಿರಲಿಲ್ಲ. ಆದರೆ ಜೋಗಿ ಸಿನಿಮಾದ ನಂತರ ಅವರಿಗೆ ಹಲವು ಅವಕಾಶಗಳು ದೊರೆತವು. ಈಗಲೂ ಅವರು ಬ್ಯುಸಿ ಪೋಷಕ ಮತ್ತು ಖಳ ನಟ.

    'ಜೋಗಿ' ಹೆಸರಿನಲ್ಲಿದೆ ಯಾರೂ ಅಳಿಸಲಾಗದ ಸಾರ್ವಕಾಲಿಕ ದಾಖಲೆ'ಜೋಗಿ' ಹೆಸರಿನಲ್ಲಿದೆ ಯಾರೂ ಅಳಿಸಲಾಗದ ಸಾರ್ವಕಾಲಿಕ ದಾಖಲೆ

    ನಿರೂಪಕರಾಗಿದ್ದ ರಘುರಾಮ್‌ ನಟ, ನಿರ್ದೇಶಕ ಆದರು

    ನಿರೂಪಕರಾಗಿದ್ದ ರಘುರಾಮ್‌ ನಟ, ನಿರ್ದೇಶಕ ಆದರು

    'ಕಬಡ್ಡಿ ಕಬಡ್ಡಿ ಖಾರ, ಕಬ್ಬಿನ ಗದ್ದೇಲ ಕೀರ, ಹೊತ್ಕೊಂಡು ಹೋದೋರ್ ಯಾರ ಉಡ ಉಡ ಉಡ ಮಾದೇಶ' ಜೋಗಿ ಸಿನಿಮಾ ನೋಡಿದವರು ಈ ಸಾಲು ಮರೆಯಲಿಕ್ಕಿಲ್ಲ. ಶಿವಣ್ಣನ ಜೊತೆ ಕುಣಿಯುತ್ತಾ ಈ ಸಂಭಾಷಣೆ ಹೇಳುವ ನಟ ರಘುರಾಮ್. ಇವರಿಗೂ ಜೋಗಿ ಮೊದಲ ಸಿನಿಮಾ. ಅದಕ್ಕೂ ಮುಂಚೆ ಟಿವಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು ರಘುರಾಮ್. ಜೋಗಿ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ ರಘುರಾಮ್, ಶಿವಣ್ಣ ಅವರನ್ನೇ ನಾಯಕರನ್ನಾಗಿ ಹಾಕಿಕೊಂಡು ಸಿನಿಮಾ ಸಹ ನಿರ್ದೇಶಿಸಿದರು.

    ಮಳವಳ್ಳಿ ಸಾಯಿಕೃಷ್ಣ ಪ್ರತಿಭೆ ಗುರುತಿಸಿದ ಚಿತ್ರ ಜೋಗಿ

    ಮಳವಳ್ಳಿ ಸಾಯಿಕೃಷ್ಣ ಪ್ರತಿಭೆ ಗುರುತಿಸಿದ ಚಿತ್ರ ಜೋಗಿ

    ಪ್ರಸ್ತುತ ಖ್ಯಾತ ಚಿತ್ರ ಸಾಹಿತಿ, ಕತೆಗಾರ ಮಳವಳ್ಳಿ ಸಾಯಿಕೃಷ್ಣ ಅವರಿಗೆ ಜೋಗಿ ದೊಡ್ಡ ಅದೃಷ್ಟವನ್ನೇ ತಂದಿತು. ಆ ಅವರೆಗೆ ಕೆಲವೇ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಸಾಯಿಕೃಷ್ಣ ಅವರು ಜೋಗಿ ಸಿನಿಮಾಕ್ಕೂ ಸಂಭಾಷಣೆ ಬರೆದರು. ನಂತರ ಮಳವಳ್ಳಿ ಸಾಯಿಕೃಷ್ಣ ಎಂಬ ಹೆಸರು ಗಾಂಧಿ ನಗರದಲ್ಲಿ ಅಚ್ಚೊತ್ತಿತ್ತು. ಅವರೊಬ್ಬ ಉತ್ತಮ ಕತೆಗಾರರಾಗಿ ನೆಲೆ ನಿಂತರು.

    ಇನ್ನೂ ಕೆಲವು ಪ್ರಮುಖ ನಟರು

    ಇನ್ನೂ ಕೆಲವು ಪ್ರಮುಖ ನಟರು

    ಈಗಿನ ಖ್ಯಾತ ನಟ ದುನಿಯಾ ವಿಜಯ್, ಜೋಗಿ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಆರಂಭದಲ್ಲಿ ಜೈಲಿನಲ್ಲಿ ನಡೆಯುವ ಫೈಟ್‌ನಲ್ಲಿ ಅವರಿಗೆ ಒಂದು ಡೈಲಾಗ್ ಇದೆ. ಜೊತೆಗೆ ಶಿವಣ್ಣನ ಎದುರು ಸಣ್ಣ ಫೈಟ್. ಮೈನಾ, ಅಮರ್ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ಅವರು ಜೋಗಿ ಸಿನಿಮಾದಲ್ಲಿ ಅತಿ ಸಣ್ಣ ಪಾತ್ರ ಮಾಡಿದ್ದಾರೆ. ಟೀ ಹಾಕುವ ವ್ಯಕ್ತಿಯಾಗಿ ಅವರು ಕಾಣಿಸಿಕೊಳ್ಳುತ್ತಾರೆ. ಇನ್ನೂ ಹಲವು ನಟರು ಇದ್ದಾರೆ.

    'ಜೋಗಿ' ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟ ಮೈಕೋ ನಾಗರಾಜ್'ಜೋಗಿ' ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟ ಮೈಕೋ ನಾಗರಾಜ್

    English summary
    Jogi movie turned life on some actors like Adi Lokesh, Raghu Ram, Potre Nagaraj, Malavalli Saikrishna and many.
    Thursday, August 20, 2020, 15:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X