ಅಧಿಕೃತ ಘೋಷಣೆಗೂ ಮೊದ್ಲೆ ಧ್ರುವ- ಪ್ರೇಮ್ ಸಿನಿಮಾ ಟೈಟಲ್ ಲೀಕ್? ಅಯ್ಯೋ ಇದು ಹಳೇ ಟೈಟಲ್ ಎಂದ ನೆಟ್ಟಿಗರು!

ಜೋಗಿ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಒಂದು ಅದ್ಧೂರಿ ಸಿನಿಮಾ ನಿರ್ಮಾಣ ಆಗ್ತಿರೋದು ಗೊತ್ತೇಯಿದೆ. ಕೆವಿಎನ್‌ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಈ ಬಹಳ ಅದ್ಧೂರಿಯಾಗಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಡಿ ಬರ್ತಿದೆ. ಇನ್ನು ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಇದೀಗ ಟೈಟಲ್ ಟೀಸರ್ ಲಾಂಚ್‌ಗೆ ವೇದಿಕೆ ಸಿದ್ಧವಾಗ್ತಿದೆ.

ಕೆಲ ದಿನಗಳ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಬಹಳ ಅದ್ಧೂರಿಯಾಗಿ ಮೂಹೂರ್ತ ನೆರವೇರಿಸಿ ಪ್ರೇಮ್- ಧ್ರುವ ಕ್ರೇಜಿ ಕಾಂಬಿನೇಷನ್‌ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಸೆನ್ಸೇಷನಲ್ ಸಿನಿಮಾಗಳ ಸರದಾರ ಪ್ರೇಮ್ ಹಾಗೂ ಮಾಸ್ ಹೀರೊ ಧ್ರುವ ಒಂದಾಗಿದ್ದಾರೆ ಅಂದಮೇಲೆ ಸಹಜವಾಗಿಯೇ ಸಿನಿಮಾ ಬಗ್ಗೆ ಕುತೂಹಲ ಗರಿಗೆದರುತ್ತದೆ. ಬಹುಕೋಟಿ ವೆಚ್ಚದಲ್ಲಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗ್ತಿದೆ. ಬಹಳ ವಿಭಿನ್ನವಾಗಿ ಸಿನಿಮಾ ಟೈಟಲ್ ಲಾಂಚ್ ಮಾಡಲು ಪ್ರೇಮ್ ಅಂಡ್ ಟೀಂ ಪ್ಲ್ಯಾನ್ ಮಾಡ್ತಿದೆ.

ವಿಜಯದಶಮಿ ಸಂಭ್ರಮದಲ್ಲಿ ಬೆಳಗ್ಗೆ ಟೈಟಲ್ ಟೀಸರ್ ರಿಲೀಸ್ ಬಗ್ಗೆ ಅಪ್‌ಡೇಟ್ ಕೊಡೋದಾಗಿ ಪ್ರೇಮ್ ಹೇಳಿದ್ದಾರೆ. ವಾರ್ ಸ್ಟ್ಯಾಟರ್ಜಿ ಪ್ಲ್ಯಾನಿಂಗ್ ಎಂದು ಒಂದು ವಿಡಿಯೋ ಸಮೇತ ಪೋಸ್ಟ್ ಮಾಡಿದ್ದಾರೆ. ಇದೆಲ್ಲದರ ನಡುವೆ ಸಿನಿಮಾ ಟೈಟಲ್‌ ಈಗಾಗಲೇ ಲೀಕ್ ಆಗಿದೆ ಎನ್ನಲಾಗ್ತಿದೆ.

ಪ್ರೇಮ್ ಕೈಜಾರಿದ 'ಕಾಳಿ' ಟೈಟಲ್

ಪ್ರೇಮ್ ಕೈಜಾರಿದ 'ಕಾಳಿ' ಟೈಟಲ್

ನಿರ್ದೇಶಕ ಪ್ರೇಮ್ ಮೊದಲಿಗೆ ಚಿತ್ರಕ್ಕೆ 'ಕಾಳಿ' ಟೈಟಲ್ ಎನ್ನುವ ಟೈಟಲ್ ಫಿಕ್ಸ್ ಮಾಡಲು ತೀರ್ಮಾನಿಸಿದ್ದರು. ಈ ಬಗ್ಗೆ ಟೀಸರ್ ರೆಡಿ ಮಾಡಿ ರಿಲೀಸ್ ಮಾಡಬೇಕು ಎಂದುಕೊಂಡಿದ್ದ ಸಮಯದಲ್ಲಿ ಹೆಬ್ಬುಲಿ ಸಿನಿಮಾ ಖ್ಯಾತಿಯ ನಿರ್ದೇಶಕ ಕೃಷ್ಣ ಶಾಕ್ ಕೊಟ್ಟಿದ್ದರು. ತಮ್ಮ ಮುಂದಿನ ಚಿತ್ರಕ್ಕೆ 'ಕಾಳಿ' ಟೈಟಲ್ ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಅಭಿಷೇಕ್ ಅಂಬರೀಶ್ 'ಕಾಳಿ' ಆಗಿ ನಟಿಸ್ತಿದ್ದಾರೆ. ಹಾಗಾಗಿ ಟೈಟಲ್ ಬದಲಿಸಲು ಪ್ರೇಮ್ ಮುಂದಾಗಿದ್ದರು.

'ಕೇಡಿ ನಂ. 1' ಆಗಿ ಧ್ರುವ ಸರ್ಜಾ?

'ಕೇಡಿ ನಂ. 1' ಆಗಿ ಧ್ರುವ ಸರ್ಜಾ?

'ಕಾಳಿ' ಟೈಟಲ್ ಕೈಬಿಟ್ಟ ಪ್ರೇಮ್ 'ಕೇಡಿ' ಎನ್ನುವ ಟೈಟಲ್‌ನಲ್ಲಿ ಸಿನಿಮಾ ಮಾಡಲು ತೀರ್ಮಾನಿಸಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಚಿತ್ರದಲ್ಲಿ ಧ್ರುವ ಸರ್ಜಾನ ಕೇಡಿಯಂತೆ ತೋರಿಸ್ತಿದ್ದು, ಟೈಟಲ್ ಸೂಕ್ತವಾಗಿರುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ. ಸದ್ಯ ಅದನ್ನೇ ಕೊಂಚ ಬದಲಿಸಿ 'ಕೇಡಿ ನಂ. 1' ಎನ್ನುವ ಟೈಟಲ್‌ನಲ್ಲಿ ಟೀಸರ್ ರೆಡಿ ಮಾಡಿದ್ದಾರೆ ಎನ್ನಲಾಗ್ತಿದೆ. ಇದನ್ನೇ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲು ಪ್ರಯತ್ನ ಮಾಡ್ತಿದ್ದಾರೆ. ಈ ಟೈಟಲ್ ನೋಡಿ ಕೆಲವರು ಅಯ್ಯೋ ಇದು ಹಳೇ ಟೈಟಲ್ ಅಲ್ವಾ? ಈ ಹಿಂದೆ ಟೈಗರ್ ಪ್ರಭಾಕರ್ ಇದೇ ಟೈಟಲ್‌ನಲ್ಲಿ ಸಿನಿಮಾ ಮಾಡಿದ್ದರು ಎನ್ನುತ್ತಿದ್ದಾರೆ.

ಚಿತ್ರದಲ್ಲಿದೆ 80ರ ದಶಕದ ಕಥೆ

ಚಿತ್ರದಲ್ಲಿದೆ 80ರ ದಶಕದ ಕಥೆ

ಇನ್ನು ಹೆಸರಿಡದ ಈ ಚಿತ್ರದಲ್ಲಿ 80ರ ದಶಕದ ಕಥೆಯನ್ನು ಹೇಳಲು ಪ್ರೇಮ್ ಮುಂದಾಗಿದ್ದಾರೆ. ಈಗಾಗಲೇ ಥೀಮ್ ಪೋಸ್ಟರ್‌ಗಳಿಂದಲೇ ಸಿನಿಮಾ ಕುತೂಹಲ ಕೆರಳಿಸಿದೆ. ಸುಂಕದಕಟ್ಟೆ ಬಳಿ 20 ಎಕರೆ ಜಾಗದಲ್ಲಿ ಬಹಳ ದೊಡ್ಡ ಸೆಟ್ ನಿರ್ಮಾಣ ಮಾಡಿ ಸಿನಿಮಾ ಚಿತ್ರೀಕರಣ ನಡೆಸಲಾಗ್ತಿದೆ. ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾ ಜೊತೆ ಜೊತೆಗೆ ಪ್ರೇಮ್ ನಿರ್ದೇಶನದ ಚಿತ್ರದಲ್ಲೂ ನಟಿಸ್ತಿದ್ದಾರೆ.

ಟೈಟಲ್ ಬದಲಿಸಿ ಟ್ವಿಸ್ಟ್?

ಟೈಟಲ್ ಬದಲಿಸಿ ಟ್ವಿಸ್ಟ್?

ಪ್ರೇಮ್ ಹಾಗೂ ಧ್ರುವ ಜೋಡಿಯ ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈಗಾಗಲೇ 'ಕೇಡಿ' ಟೈಟಲ್ ಲೀಕ್ ಆಗಿರುವುದರಿಂದ ಇದೇ ಟೈಟಲ್‌ನಲ್ಲಿ ಪ್ರೇಮ್ ಸಿನಿಮಾ ಮಾಡ್ತಾರಾ ಎನ್ನುವ ಅನುಮಾನವು ಇದೆ. ಈ ಟೈಟಲ್‌ನ ಅನೌನ್ಸ್ ಮಾಡೋಕೆ ಅಷ್ಟೆಲ್ಲಾ ಖರ್ಚು ಮಾಡಿ ಟೀಸರ್ ಮಾಡಿಸ್ತಾರಾ? ಎನ್ನುವವರು ಇದ್ದಾರೆ. ಕೊನೆ ಹಂತದಲ್ಲಿ ಟೈಟಲ್ ಬದಲಿಸಿ ಪ್ರೇಮ್ ಸರ್‌ಪ್ರೈಸ್ ಕೊಟ್ಟರೂ ಅಚ್ಚರಿಪಡಬೇಕಿಲ್ಲ. ಯಾವುದಕ್ಕೂ ಅಧಿಕೃತವಾಗಿ ಘೋಷಣೆ ಆಗುವವರೆಗು ಕಾಯಬೇಕು.

More from Filmibeat

English summary
Jogi Prem and Dhruva Sarja Combination Movie title leaked. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X