ಕೊಪ್ಪಳದಲ್ಲಿ ಪ್ರೇಮ್ ಮತ್ತು ರಕ್ಷಿತಾ ಅವರನ್ನು ನೋಡಲು ಮುಗಿಬಿದ್ದ ಜನ!

ನಟ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶಿಸಿ ತೆರೆಗೆ ತಂದಿರುವ ಸಿನಿಮಾ ಏಕ್ ಲವ್ ಯಾ. ಈ ಸಿನಿಮಾದಲ್ಲಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ಹೊಸ ಪ್ರತಿಭೆ ನಟಿ ರೀಷ್ಮಾ ನಟಿಸಿ ಫಸ್ಟ್‌ ಸಿನಿಮಾದಲ್ಲೇ ನೋಡುಗರನ್ನು ಮೋಡಿ ಮಾಡಿದ್ದಾರೆ. ಒಂದೊಳ್ಳೆ ರೊಮ್ಯಾಂಟಿಕ್ ಕಥೆಯನ್ನು ಹೊತ್ತು ಫೆಬ್ರವರಿ 24ಕ್ಕೆ ಸಿನಿಮಾ ರಾಜ್ಯದಾದ್ಯಂತ ತೆರೆ ಕಂಡು ಉತ್ತಮ ರೆಸ್ಪಾನ್ಸ್‌ ಕೂಡ ಪಡೆದುಕೊಳ್ಳುತ್ತಿದೆ. ಏಕ್ ಲವ್ ಯಾ ಸಿನಿಮಾವನ್ನು ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡಿದ್ದು, ವಿತರಣೆ ಮಾಡಿರುವುದು ಸ್ವತಃ ನಿರ್ದೇಶಕ ಪ್ರೇಮ್.

ಹೀಗಾಗಿ ಈ ಸಿನಿಮಾವನ್ನು ಉತ್ತಮವಾಗಿ ತೆರೆಗೆ ತರಲು ಇಡೀ ಚಿತ್ರತಂಡ ಬರೋಬ್ಬರಿ ಮೂರು ವರ್ಷಗಳಿಂದ ಪ್ರಯತ್ನ ಮಾಡಿದೆ. ಅದರಂತೆ ರಿಲೀಸ್‌ ಆಗಿರುವ ಚಿತ್ರಕ್ಕೆ ನೋಡುಗರು ಕೂಡ ಜೈ ಎಂದಿದ್ದಾರೆ. ಪ್ರೇಮ್ ನಿರ್ದೇಶನದ ಸಿನಿಮಾ ಸೂಪರ್ ಅಂತಿದ್ದಾರೆ. ಹೀಗೆ ಥಿಯೇಟರ್‌ಗಳಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವಾಗಲೇ ಏಕ್ ಲವ್ ಯಾ ಸಿನಿಮಾ ಪ್ರಚಾರಕ್ಕಾಗಿ ರಾಜ್ಯದ ಹಲವೆಡೆ ಸುತ್ತಾಟವನ್ನು ಮಾಡುತ್ತಿದೆ. ಥಿಯೇಟರ್‌ಗಳಿಗೆ ಭೇಟಿ ನೀಡಿ ಸಿನಿಮಾಗೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

ಏಕ್ ಲವ್ ಯಾ ಸಿನಿಮಾ ತಂಡ ಇಂದು ಕೊಪ್ಪಳಕ್ಕೆ ಭೇಟಿ ನೀಡಿದೆ. ಈ ವೇಳೆ ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ಅವರನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮುತ್ತಿಕೊಂಡಿದ್ದು, ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿರೋ ಶಿವ ಚಿತ್ರಮಂದಿರಕ್ಕೆ ಇಂದು ಪ್ರೇಮ್, ರಕ್ಷಿತಾ ಸೇರಿದಂತೇ ಇಡೀ ಏಕ್‌ ಲವ್‌ ಯಾ ಚಿತ್ರತಂಡ ಭೇಟಿ ಕೊಟ್ಟಿದೆ. ಈ ವೇಳೆ ರೈತರು ಪ್ರೇಮ್ ಹಾಗೂ ರಕ್ಷಿತಾಗೆ ಹಸಿರು ಶಾಲು ಹೊದಿಸಿ ಸನ್ಮಾನ ಕೂಡ ಮಾಡಿದ್ದಾರೆ. ಈ ಸಂದರ್ಭ ಪ್ರೇಮ್, ರಕ್ಷಿತಾರನ್ನು ನೋಡಲು ನೂರಾರು ಅಭಿಮಾನಿಗಳು ಜಮಾಯಿಸಿದರು. ಏಕ್‌ ಲವ್‌ ಯಾ ಸಿನಿಮಾಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗ್ತಿರೋದ್ರಿಂದ ಸದ್ಯ ಚಿತ್ರತಂಡ ಚಿತ್ರತಂಡ ರಾಜ್ಯ ಪ್ರವಾಸವನ್ನು ಮಾಡುತ್ತಿದೆ. ಈ ಮೂಲಕ ಸಿನಿಮಾಗೆ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ.

Jogi Prem and Rakshitha Prem Movie Promotion at Koppal

ಕೆಲವು ದಿನಗಳ ಹಿಂದೆ ಮಲ್ಟಿಫ್ಲೆಕ್ಸ್‌ಗಳ ವಿರುದ್ಧ ಗರಂ ಆಗಿದ್ದ ನಿರ್ದೇಶಕ ಪ್ರೇಮ್ ಈಗ ಟೆಲಿಗ್ರಾಂ ಮೆಸೆಂಜರ್ ಅಪ್ಲಿಕೇಶನ್ ವಿರುದ್ಧ ಗರಂ ಆಗಿದ್ದಾರೆ. ಅಸಲಿಗೆ ಅವರ ಸಿಟ್ಟಿಗೆ ಕಾರಣ ಟೆಲಿಗ್ರಾಂ ಅಪ್ಲಿಕೇಶನ್ ಅಲ್ಲ ಬದಲಿಗೆ ಪೈರಸಿ. ಪೈರಸಿ ಸಿನಿಮಾಗಳು ಟೆಲಿಗ್ರಾಂ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ದೊರೆಯುವುದು ಗುಟ್ಟಾಗಿ ಏನೂ ಉಳಿದಿಲ್ಲ. ಯಾವುದೇ ಹೊಸ ಸಿನಿಮಾ ಬಿಡುಗಡೆ ಆದರೂ ಅದರ ಬಹುತೇಕ ಒರಿಜಿನಲ್ ಕಾಪಿಗಳು ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂನಲ್ಲಿ ಲಭ್ಯವಾಗುತ್ತವೆ. ಇತ್ತೀಚೆಗೆ ಬಿಡುಗಡೆ ಆದ ಏಕ್ ಲವ್ ಯಾ ಸಿನಿಮಾದ ಪೈರಸಿ ಕಾಪಿ ಸಹ ಟೆಲಿಗ್ರಾಂಗೆ ಅಪ್‌ಲೋಡ್ ಆಗಿತ್ತು.

Jogi Prem and Rakshitha Prem Movie Promotion at Koppal

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್, ''ನಮ್ಮ ಏಕ್ ಲವ್ ಯಾ ಸಿನಿಮಾದ್ದು ಬಹಳ ಪೈರಸಿ ಮಾಡುತ್ತಿದ್ದಾರೆ. ಮುಂದಿನ ವಾರ ನಾನು ಖುದ್ದಾಗಿ ಸಿಎಂ ಸರ್ ಅವರನ್ನು ಭೇಟಿಯಾಗಿ ಅವರಿಗೊಂದು ಪತ್ರ ಕೊಟ್ಟು, ದಯವಿಟ್ಟು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಕೇವಲ ಏಕ್ ಲವ್ ಯಾ ಮಾತ್ರವಲ್ಲ ಇದರಿಂದ ಎಲ್ಲ ಸಿನಿಮಾಗಳಿಗೆ ಒಳ್ಳೆಯದಾಗುತ್ತದೆ ಎಂದು ಮನವಿ ಮಾಡುತ್ತೇನೆ'' ಎಂದಿದ್ದರು. ಇದರ ನಡುವೆಯೂ ಚಿತ್ರತಂಡ ಆಸಕ್ತಿಯನ್ನು ಕಳೆದುಕೊಳ್ಳದೇ ಚಿತ್ರ ಪ್ರಚಾರ ನಡೆಸುತ್ತಿದೆ.

Jogi Prem and Rakshitha Prem Movie Promotion at Koppal

ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಫೆಬ್ರವರಿ 24 ರಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಹೊಸ ಪ್ರತಿಭೆಗಳಾದ ರಾಣಾ, ರೀಷ್ಮಾ ನಟಿಸಿದ್ದಾರೆ. ರಚಿತಾ ರಾಮ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೇಮ ಕತೆಯುಳ್ಳ ಈ ಸಿನಿಮಾ ಬಗ್ಗೆ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿತ್ತು. ಆದರೆ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಂಡಿತ್ತು. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ.

More from Filmibeat

English summary
director Prem, Rakshitha Prem and Ek Love Ya movie team today visit Koppal theater to attract viewers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X