'KD' ಚಿತ್ರತಂಡದ ಜೊತೆ ಅಧೀರ ಸಂಜಯ್ ದತ್ ಪಾರ್ಟಿ: ಫೋಟೊಗಳು ವೈರಲ್
KGF- 2 ನಂತರ ಸಂಜಯ್ ದತ್ ಕನ್ನಡದ 'KD' ಸಿನಿಮಾದಲ್ಲಿ ನಟಿಸ್ತಿರೋದು ಗೊತ್ತೇಯಿದೆ. ಇತ್ತೀಚೆಗಷ್ಟೆ ಸಂಜು ಬಾಬು ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದೀಗ ಚಿತ್ರತಂಡದ ಜೊತೆ ಜೆ. ಪಿ ನಗರದ ಲೆವೆಲ್ಸ್ ಪಬ್‌ನಲ್ಲಿ ಸಂಜು ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ನಟಿ ರಕ್ಷಿತಾ ಪ್ರೇಮ್ ಹಂಚಿಕೊಂಡಿದ್ದಾರೆ.
ರಕ್ಷಿತಾ ಪ್ರೇಮ್ ಸಹೋದರ ನಟ ರಾಣಾ ಮತ್ತು ಸ್ನೇಹಿತರು ಸೇರಿ ಜೆ. ಪಿ ನಗರದಲ್ಲಿ ಲೆವೆಲ್ಸ್ ಪಬ್ & ಕಿಚನ್ ನಡೆಸುತ್ತಿದ್ದಾರೆ. ಇದೇ ಪಬ್‌ನಲ್ಲಿ ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ 'ಕ್ರಾಂತಿ' ಸಿನಿಮಾ ಸಂಭ್ರಮಾಚರಣೆ ಮಾಡಿದ್ದರು. ಇದೀಗ 'KD' ಚಿತ್ರತಂಡದ ಸದಸ್ಯರು ಸೇರಿ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಧ್ರುವ ಸರ್ಜಾ ನಟನೆಯ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ಇದು. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಫಸ್ಟ್ ಲುಕ್ ಟೈಟಲ್ ಟೀಸರ್‌ನಿಂದಲೇ 'KD' ಸಿನಿಮಾ ಸದ್ದು ಮಾಡ್ತಿದೆ. ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಮುಖ್ಯವಾದ ಪಾತ್ರ ಮಾಡ್ತಿದ್ದಾರೆ. KGF ಅಧೀರ ಸಂಜಯ್ ದತ್ ಎಂಟ್ರಿಯಿಂದ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನು ಪಾರ್ಟಿಯಲ್ಲಿ ನಟ ಝೈದ್ ಖಾನ್, ರಾಣಾ, ಜೋಗಿ ಪ್ರೇಮ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವರ್ಷಾಂತ್ಯಕ್ಕೆ 'KD' ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.


Click it and Unblock the Notifications











