ಇಂದು ರಿಲೀಸ್ ಆಗಬೇಕಿದ್ದ ಏಕ್‌ಲವ್‌ಯಾ ಚಿತ್ರದ 3ನೇ ಹಾಡು ಮುಂದಕ್ಕೆ ಹೋಗಿದ್ದು ಯಾಕೆ

ನಟ ಪುನೀತ್ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ಆದರು ಅವರು ಆಭಿನಯದ ಸಿನಿಮಾಗಳು, ಹಾಡುಗಳು, ಹೆಚ್ಚಾಗಿ ಪುನೀತ್ ನೆನಪುಗಳು ಸದಾ ನಮ್ಮೊಂದಿಗೆ ಇರುತ್ತೆ. ಚಿತ್ರರಂಗದ ಮಂದಿ ಕೂಡ ಪುನೀತ್ ಸಾವನ್ನು ಅರಗಿಸಿಕೊಳ್ಳಲಾಗದೇ ಪುನೀತ್ ಇಲ್ಲದ ಚಿತ್ರರಂಗವನ್ನು ಮುನ್ನಡೆಸಿಕೊಂಡು ಹೋಗಲು ಮುಂದಾಗಿದೆ. ಪುನೀತ್ ಅವರ ನಿಧನದಿಂದಾಗಿ ಚಿತ್ರರಂಗದ ಅದೆಷ್ಟೋ ಸಂಭ್ರಮ ಸಡಗರಗಳ ಕಾರ್ಯಕ್ರಮಗಳನ್ನು ಈಗ ನಿಲ್ಲಿಸಲಾಗಿದೆ. ಸಾಂಗ್ ರಿಲೀಸ್ ಟ್ರೈಲರ್ ರಿಲೀಸ್‌ಗಳು ಮುಂದಕ್ಕೆ ಹೋಗಿವೆ. ಅಪ್ಪು ಇಲ್ಲದೇ ಇಂತ ಸಂಭ್ರಮಗಳು ಬೇಡ ಎಂದು ತೀರ್ಮಾನಿಸಿರುವ ಚಿತ್ರತಂಡಗಳು ಒಂದಷ್ಟು ದಿನಗಳ ನಂತರ ಸಿನಿಮಾದ ಕೆಲಸಗಳನ್ನು ಆರಂಭಿಸಲಿವೆ. ಇದೀಗ ಕನ್ನಡದ ಏಕ್ ಲವ್‌ ಯಾ ಸಿನಿಮಾ ಕೂಡ ಅಪ್ಪು ಅಗಲಿಕೆಯ ನೋವಿನಲ್ಲಿದ್ದು ಇಂದು ರಿಲೀಸ್ ಆಗಬೇಕಿದ್ದ ಚಿತ್ರದ ಹಾಡನ್ನು ನವೆಂಬರ್ 12ಕ್ಕೆ ಮುಂದೂಡಲಾಗಿದೆ.

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸೌಂಡ್ ಮಾಡುತ್ತಿದೆ. ಒಂದೊಳ್ಳೆ ಪ್ರೇಮ ಕಥೆಯನ್ನು ನಿರ್ದೇಶಕ ಪ್ರೇಮ್ ತೆರೆಮೇಲೆ ತರಲು ಮುಂದಾಗಿದ್ದಾರೆ. ಈ ಹಿಂದೆಯೇ ಚಿತ್ರತಂಡ ಹೇಳಿಕೊಂಡಂತೆ ಇವತ್ತು ಚಿತ್ರದ ಮೂರನೇ ಹಾಡು ರಿಲೀಸ್ ಆಗಬೇಕಿತ್ತು. ಆದರೆ ಪುನೀತ್ ರಾಜ್‌ಕುಮಾರ್ ನಿಧನದಿಂದಾಗಿ ಮನನೊಂದಿರುವ ಪ್ರೇಮ್ ಈ ಸಂದರ್ಭದಲ್ಲಿ ಹಾಡು ರಿಲೀಸ್ ಮಾಡುವುದು ಸೂಕ್ತವಲ್ಲ ಎಂದು ನವೆಂವರ್ 12ಕ್ಕೆ ಹಾಡು ಬಿಡುಗಡೆ ಮಾಡಲು ನಿರ್ಧರಿಸಿದೆ.

ಈ ಬಗ್ಗೆ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, "ಮೋಡಕವಿದ ಆಗಸ ಇನ್ನೂ ಸರಿಹೋಗಿಲ್ಲಾ. ಮೋಡದ ಮಧ್ಯೆ ಸೂರ್ಯನು ಇಣಿಕಿ ನೋಡುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೇ ನಮ್ಮ ಏಕ್‌ಲವ್‌ಯಾ ಚಿತ್ರದ ಹಾಡಿನ ಸಂಭ್ರಮಾಚರಣೆ ಮಾಡಲು ಮನಸಾಗುತ್ತಿಲ್ಲ.ಆದ್ದರಿಂದ 4ನೇ ತಾರಿಖು ಬಿಡುಗಡೆಯಾಗಬೇಕಿದ್ದ ನಮ್ಮ ಚಿತ್ರದ ಹಾಡನ್ನು ಇದೇ ತಿಂಗಳ 12ನೇ ತಾರೀಖಿಗೆ ಮುಂದೂಡಲಾಗಿದೆ .ನಿಮಗೆಂದು ಸಾವಿಲ್ಲ, ನೀವಿಲ್ಲದೇ ಏನೇನೂ ಇಲ್ಲಾ ಇಂತಿ ನಿಮ್ಮ ಪ್ರೇಮ್ಸ್" ಎಂದು ಬರೆದುಕೊಂಡಿದ್ದರು. ಹಾಗೇ ಪುನೀತ್ ಅವರೊಂದಿಗೆ ಇರುವ ಒಂದು ಭಾವಚಿತ್ರವನ್ನು ಪ್ರೇಮ್ ಶೇರ್ ಮಾಡಿಕೊಂಡಿದ್ದಾರೆ.

 Jogi Prem Directional Ek Love Ya movie song postponed to November 12

ನವೆಂಬರ್ 12ನೇ ತಾರೀಖು ಸಂಜೆ 5 ಗಂಟೆಗೆ ಏಕ್‌ಲವ್‌ಯಾ ಸಿನಿಮಾದ ಮೂರನೇ ಹಾಡು ರಿಲೀಸ್ ಆಗುತ್ತಿದೆ. ಕೇಳ್ರಪ್ಪೋ ಕೇಳಿ ಎಂಬ ಹಾಡು ಇದಾಗಿದ್ದು, ಹುಡುಗಿಯರ ಬ್ರೇಕ್‌ ಅಪ್‌ ಕಾನ್ಸೆಪ್ಟ್ ಹೊಂದಿರುವ ಹಾಡು ಇದಾಗಿದೆ. ಈ ಹಾಡಿಗೆ ನಿರ್ದೇಶಕ ಪ್ರೇಮ್ ಸಾಹಿತ್ಯ ನೀಡಿದ್ದು, ಟಾಲಿವುಡ್‌ ಸಿಂಗರ್ ಮಂಗ್ಲಿ ಮತ್ತು ಬಾಲಿವುಡ್‌ನ ಖ್ಯಾತ ಸಿಂಗರ್ ಕೈಲಾಶ್ ಖೇರ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಸಿನಿಮಾಗಿದ್ದು, ಈ ಹಿಂದೆ ರಿಲೀಸ್ ಆಗಿದ್ದ ಚಿತ್ರದ ಎರಡು ಹಾಡುಗಳು ಕೂಡ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. 12ನೇ ತಾರೀಖು ರಿಲೀಸ್ ಆಗುತ್ತಿರುವ ಕೇಳ್ರಪ್ಪೋ ಕೇಳಿ ಹಾಡು ಹೇಗಿರಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

 Jogi Prem Directional Ek Love Ya movie song postponed to November 12

ಜೊತೆಗೆ ಏಕ್‌ಲವ್‌ಯಾ ಸಿನಿಮಾ 21 ಜನವರಿ 2022ಕ್ಕೆ ತೆರೆಕಾಣಲಿದ್ದು, ಬಾರಿ ನಿರೀಕ್ಷೆ ಹುಟ್ಟಿಸಿದೆ. ಕೆಲ ತಿಂಗಳ ಹಿಂದೆಯೇ ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮುತ್ತತ್ತಿಯ ಆಂಜನೇಯ ದೇಗುಲದಲ್ಲಿ ಕುಂಬಳಕಾಯಿ ಒಡೆದಿತ್ತು ಚಿತ್ರತಂಡ. ಏಕ್‌ಲವ್‌ಯಾ ಸಿನಿಮಾಗೆ ರಕ್ಷಿತ ಪ್ರೇಮ್ ಬಂಡವಾಳ ಹೂಡಿದ್ದು, ರಕ್ಷಿತಾ ಅವರ ಸಹೋದರ ಚಿತ್ರದಲ್ಲಿ ನಾಯಕರಾಗಿದ್ದಾರೆ. ರಾಣಾಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಬಣ್ಣ ಹಚ್ಚಿರೋದು ವಿಶೇಷ.

More from Filmibeat

English summary
Director Prem postponed Ek Love Ya movie song release date to November, because of Puneeth Rajkumar death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X