ಹುಡುಗರ ಬ್ರೇಕ್ಅಪ್ ಸಾಂಗ್ ರಿಲೀಸ್‌ಗೆ ಸಜ್ಜಾಗ್ತಿದೆ ಏಕ್‌ಲವ್‌ಯಾ ಚಿತ್ರತಂಡ

ಕನ್ನಡದಲ್ಲಿ ಹೊಸ ಹೊಸ ಬಗೆಯ ಸಿನಿಮಾಗಳು ತೆರೆಗೆ ಬರುತ್ತಿದೆ. ಒಂದಷ್ಟು ಸಿನಿಮಾಗಳು ರಿಲೀಸ್‌ ಆದ ನಂತರ ಹಿಟ್ ಆದರೇ ಮತ್ತೆ ಕೆಲವು ರಿಲೀಸ್‌ಗು ಮುನ್ನವೇ ಸೌಂಡ್ ಮಾಡುತ್ತಿದೆ. ಅದರಲ್ಲಿ ಒಂದು ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ. ಏಕ್ ಲವ್ ಯಾ ಸಿನಿಮಾ ಒಂದೊಳ್ಳೆ ಪ್ರೇಮಕಥೆಯನ್ನು ಹೇಳಲು ಹೊರಟಿದ್ದು ಶೂಟಿಂಗ್ ಕಂಪ್ಲೀಟ್‌ ಮಾಡಿ ರಿಲೀಸ್‌ಗೆ ಸಜ್ಜಾಗುತ್ತಿದೆ. ಇದರ ನಡುವಲ್ಲಿ ಚಿತ್ರದ ಟೀಸರ್ ಮತ್ತು ಒಂದೊಂದೇ ಹಾಡುಗಳನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ. ಇದೀಗ ಚಿತ್ರದ ಮತ್ತೊಂದು ಹಾಡು ರಿಲೀಸ್‌ಗೆ ಸಜ್ಜಾಗಿದೆ.

ಏಕ್‌ಲವ್‌ಯಾ ಚಿತ್ರದ 4ನೇ ಹಾಡು ರಿಲೀಸ್ ಆಗುತ್ತಿದ್ದು, ಅನಿತಾ ಅನಿತಾ ಎಂಬ ಲಿರಿಕ್ಸ್ ಈ ಹಾಡಿನಲ್ಲಿದೆ. ಇದೇ ತಿಂಗಳ ಅಂದರೇ ಡಿಸೆಂಬರ್ 11ನೇ ತಾರೀಖು ಈ ಅನಿತಾ ಅನಿತಾ ಹಾಡು ರಿಲೀಸ್ ಆಗಲಿದ್ದು,ಇದು ಹುಡುಗರಿಗೆ ಬ್ರೇಕ್ ಅಪ್ ಆದಾಗ ಏನೇನು ಮಾಡುತ್ತಾರೆ, ಬ್ರೇಕ್ ಅಪ್ ಆದರೂ ಹುಡುಗರು ಪ್ರೀತಿಯನ್ನು ಮರೆಯೊದಿಲ್ಲ ಎಂಬ ಸಾರಾಂಶವನ್ನು ಹೊಂದಿದೆಯಂತೆ. ಈ ಹಿಂದೆ ಹೆಣ್ಣು ಮಕ್ಕಳ ಬ್ರೇಕ್ ಅಪ್ ಸಾಂಗ್ ರಿಲೀಸ್ ಮಾಡಿದ್ದ ಚಿತ್ರತಂಡ ಈಗ ಹುಡುಗರಿಗಾಗಿ ಈ ಸಾಂಗ್‌ ಅನ್ನು ರಿಲೀಸ್ ಮಾಡುತ್ತಿದೆ.

ಅನಿತಾ ಅನಿತಾ ಸಾಂಗ್ ರಿಲೀಸ್‌ಗೆ ಚಿತ್ರತಂಡ ವಿಶೇಷ ತಯಾರಿಯನ್ನು ಮಾಡಿಕೊಂಡಿದೆ. ಹುಬ್ಬಳಿಯಲ್ಲಿ ಸಾಂಗ್ ರಿಲೀಸ್ ಈವೆಂಟ್ ಮಾಡಲು ಚಿತ್ರತಂಡ ಪ್ರಿಪರೇಷನ್ ನಡೆಸುತ್ತಿದ್ದು, ಡಿಸೆಂಬರ್ 11ಕ್ಕೆ ಬೆಳಗ್ಗೆ 11 ಗಂಟೆಗೆ ಈ ಹಾಡು ರಿಲೀಸ್ ಆಗಲಿದೆ. ಈ ಅನಿತಾ ಅನಿತಾ ಹಾಡನ್ನು ಖ್ಯಾತ ಗಾಯಕ ಶಂಕರ್ ಮಹದೇವನ್ ಅವರು ಹಾಡಿದ್ದು, ನವ ಪ್ರತಿಭೆ ಹಾಗೂ ಪಂಚಾಕ್ಷರಿ ಗವಾಯಿ ಅವರ ಶಿಷ್ಯರು ಆಗಿರುವ ಶರಣ ಕುಮಾರ ಗಜೇಂದ್ರ ಗಡ ಅವರು ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಏಕ್‌ಲವ್‌ಯಾ ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, ಮುಂದಿನ ದಿನಗಳಲ್ಲಿ ಉಳಿದ ಹಾಡುಗಳನ್ನು ರಿಲೀಸ್ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.

Jogi Prem Directional Ek Love Ya movie song releasing on december 11th

ಅನಿತಾ ಅನಿತಾ ಹಾಡಿನ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಬೆಂಗಳೂರು, ಶಿವಮೊಗ್ಗ, ಮೈಸೂರು ಮತ್ತು ಊಟಿ ಸುತ್ತಮುತ್ತ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನಲ್ಲಿ ಚಿತ್ರದ ನಾಯಕ ರಾಣಾ, ನಟಿ ರಚಿತಾ ರಾಮ್ ಮತ್ತು ರೇಷ್ಮಾ ನಾಣಯ್ಯ ಮೂವರು ಕಾಣಿಸಿಕೊಳ್ಳಲಿದ್ದು, ಟ್ರೈ ಆಂಗಲ್‌ನಲ್ಲಿ ಈ ಹಾಡು ಮೂಡಿಬರಲಿದೆ. ಹಾಡಿಗೆ ತಲೈ ಮಾಸ್ಟರ್ ಕೋರಿಯೋಗ್ರಫಿ ಮಾಡಿದ್ದು, ಈ ಹಾಡಿನ ಸಣ್ಣ ಝಲಕ್ ಅನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, 11ಕ್ಕೆ ಈ ಹಾಡು ರಿಲೀಸ್ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಅಂದರೇ ನವೆಂಬರ್ 12ನೇ ತಾರೀಖು ಏಕ್‌ಲವ್‌ಯಾ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿತ್ತು. ಕೇಳ್ರಪ್ಪೋ ಕೇಳಿ ಎಂಬ ಹಾಡು ಇದಾಗಿತ್ತು. ಹುಡುಗಿಯರ ಬ್ರೇಕ್‌ ಅಪ್‌ ಕಾನ್ಸೆಪ್ಟ್ ಹೊಂದಿದ್ದ ಈ ಹಾಡು ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಕೂಡ ಪಡೆದುಕೊಂಡಿತ್ತು. ಈ ಹಾಡಿಗೆ ನಿರ್ದೇಶಕ ಪ್ರೇಮ್ ಸಾಹಿತ್ಯ ನೀಡಿದ್ದು,ಟಾಲಿವುಡ್‌ ಸಿಂಗರ್ ಮಂಗ್ಲಿ ಮತ್ತು ಬಾಲಿವುಡ್‌ನ ಖ್ಯಾತ ಸಿಂಗರ್ ಕೈಲಾಶ್ ಖೇರ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಸಿನಿಮಾಗಿದ್ದು, ಈ ಹಿಂದೆ ರಿಲೀಸ್ ಆಗಿದ್ದ ಚಿತ್ರದ ಮತ್ತೆರೆಡು ಹಾಡುಗಳು ಕೂಡ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

Jogi Prem Directional Ek Love Ya movie song releasing on december 11th

ಜೊತೆಗೆ ಏಕ್‌ಲವ್‌ಯಾ ಸಿನಿಮಾ 21 ಜನವರಿ 2022ಕ್ಕೆ ತೆರೆಕಾಣಲಿದ್ದು, ಬಾರಿ ನಿರೀಕ್ಷೆ ಹುಟ್ಟಿಸಿದೆ. ಕೆಲ ತಿಂಗಳ ಹಿಂದೆಯೇ ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮುತ್ತತ್ತಿಯ ಆಂಜನೇಯ ಟೆಂಪಲ್‌ನಲ್ಲಿ ಕುಂಬಳಕಾಯಿ ಒಡೆದಿತ್ತು. ಈಗಾಗಲೇ ಚಿತ್ರದ ಸೆನ್ಸಾರ್ ಕೂಡ ಮುಕ್ತಾಯವಾಗಿದ್ದು ಯು/ಎ ಸರ್ಟಿಫಿಕೆಟ್ ಪಡೆದಿದೆ. ಏಕ್‌ಲವ್‌ಯಾ ಸಿನಿಮಾಗೆ ರಕ್ಷಿತ ಪ್ರೇಮ್ ಬಂಡವಾಳ ಹೂಡಿದ್ದು, ರಕ್ಷಿತಾ ಅವರ ಸಹೋದರ ಚಿತ್ರದಲ್ಲಿ ನಾಯಕರಾಗಿದ್ದಾರೆ. ರಾಣಾಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಬಣ್ಣ ಹಚ್ಚಿರೋದು ವಿಶೇಷ.

More from Filmibeat

English summary
director prem Ek Love Ya movie song releasing on december 11th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X