ರಿಲೀಸ್ ಆಗ್ತಿದೆ 'ಏಕ್ ಲವ್ ಯಾ' ಚಿತ್ರದ ಮತ್ತೊಂದು ಹಾಡು !
ಕನ್ನಡದಲ್ಲಿ ಹೊಸ ಹೊಸ ಬಗೆಯ ಸಿನಿಮಾಗಳು ತೆರೆಗೆ ಬರುತ್ತಿದೆ. ಸಾಕಷ್ಟು ಚಿತ್ರಗಳು ವೀಕ್ಷಕರ ಗಮನ ಸೆಳೆಯುತ್ತಿದೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ ಕೂಡ ಈಗ ರಿಲೀಸ್‌ಗೆ ಸಜ್ಜಾಗುತ್ತಿದ್ದು, ಅದಕ್ಕು ಮುಂಚಿತವಾಗಿ ಚಿತ್ರದ ಹಾಡುಗಳನ್ನು ರಿಲೀಸ್ ಮಾಡೊ ಮೂಲಕ ಚಿತ್ರದ ಬಗ್ಗೆ ಪ್ರಮೋಷನ್ ಮಾಡಲಾಗುತ್ತಿದೆ. ಮೊನ್ನೆ ಅಂದರೇ ಡಿಸೆಂಬರ್ 11ನೇ ತಾರೀಖು ಏಕ್ ಲವ್ ಯಾ ಸಿನಿಮಾದ 4ನೇ ಹಾಡು ರಿಲೀಸ್ ಆಗಿತ್ತು. ಇದೀಗ ಚಿತ್ರ ಮೋಸ್ಟ್ ಎಕ್ಸಪೆಕ್ಟೆಡ್ 5ನೇ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಜೋಗಿ ಪ್ರೇಮ್ ಸಿನಿಮಾಗಳು ಅಂದರೇ ಅಲ್ಲಿ ಕಥೆ ಮತ್ತು ಹಾಡುಗಳು ವಿಶೇಷ ಸ್ಥಾನ ಮಾನ ಪಡೆದಿರುತ್ತೆ. ಪ್ರೇಮ್ ಅವರ ಅದೆಷ್ಟೋ ಸಿನಿಮಾಗಳು ಮ್ಯೂಸಿಕಲ್ ಹಿಟ್ ಕೂಡ ಆಗಿವೆ. ರಿಲೀಸ್‌ಗೆ ಸಜ್ಜಾಗಿರೋ ಏಕ್ ಲವ್ ಯಾ ಸಿನಿಮಾ ಕೂಡ ಅದೇ ಪಟ್ಟಿ ಸೇರುವ ಸಾಧ್ಯತೆಗಳಿವೆ. ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು, ಈಗಾಗಲೇ ರಿಲೀಸ್ ಆಗಿರೋ ನಾಲ್ಕು ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ವಿಶೇಷವಾಗಿದೆ.
ನೋಡುಗರಿಂದಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈಗ ರಿಲೀಸ್‌ಗೆ ಸಜ್ಜಾಗಿರುವ 5ನೇ ಹಾಡು 'ಮೀಟ್ ಮಾಡೋಣ' ಹಾಡು ಮತ್ತೊಂದು ಮೈಲಿಗಲ್ಲು ಸೃಷ್ಟಿಸುತ್ತೆ ಎನ್ನುತ್ತಾರೆ ಏಕ್ ಲವ್ ಯಾ ಚಿತ್ರದ ಡೈಲಾಗ್ ರೈಟರ್ ಹಾಗೇ ಮೀಟ್ ಮಾಡೋಣ ಹಾಡಿನ ಸಾಹಿತ್ಯಕಾರ ವಿಜಯ್ ಈಶ್ವರ್.

'ಮೀಟ್ ಮಾಡೋಣ' ಹಾಡಿನ ಬಗ್ಗೆ ಮಾಹಿತಿಯನ್ನು ಫಿಲ್ಮಿಬೀಟ್ ಬಳಿ ಹಂಚಿಕೊಂಡಿರೋ ವಿಜಯ್ ಈಶ್ವರ್, "ಇದೊಂದು ವಿಶೇಷವಾದ ಹಾಡು. ಈಗಿನ ಹುಡುಗಿಯರು ಒಬ್ಬ ಹುಡುಗನನ್ನು ಇಷ್ಟ ಪಟ್ಟರೇ ಏನೆಲ್ಲಾ ಮಾಡ್ತಾರೆ ಅನ್ನೋದನ್ನ ಹೇಳುವ ಪ್ರಯತ್ನ ಈ ಹಾಡಿನಲ್ಲಿ ಮಾಡಲಾಗಿದೆ. ಹೇಳಬೇಕು ಅಂದರೆ ಇದೊಂದು ಹುಕ್ ಅಪ್ ಸಾಂಗ್. ಪ್ರೇಮ್ ಸರ್ ಸಿನಿ ಕೆರಿಯರ್‌ನಲ್ಲೆ ಇದೊಂದು ವಿಭಿನ್ನ ಹಾಡಾಗಿರಲಿದೆ. ಅಲ್ಟ್ರಾ ಮಾರ್ಡನ್ ಹಾಡು ಇದಾಗಿದ್ದು, ಬೇರೆ ಲೆವೆಲ್‌ಗೆ ಜನರಿಗೆ ಹಿಡಿಸುತ್ತೆ" ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು 'ಮೀಟ್ ಮಾಡೋಣ' ಹಾಡನ್ನು ಬಾಲಿವುಡ್ ಸಿಂಗರ್ ನೀತಿ ಮೋಹನ್ ಹಾಡಿದ್ದು, ಹಾಡಿನಲ್ಲಿ ರಚಿತ ರಾಮ್, ಚಿತ್ರ ನಾಯಕ ರಾಣಾ ಮತ್ತು ರೀಷ್ಮಾ ನಾಣಯ್ಯ ಕಾಣಿಸಿಕೊಳ್ಳಲಿದ್ದಾರಂತೆ. ರಚಿತ ರಾಮ್ ಅವರನ್ನು ಹಿಂದೆಂದೂ ನೋಡಿರದ ಗೆಟಪ್‌ನಲ್ಲಿ ಈ ಹಾಡಿನಲ್ಲಿ ನೋಡಬಹುದು ಎನ್ನುತ್ತಾರೆ ವಿಜಯ್ ಈಶ್ವರ್. ಬೆಂಗಳೂರು, ಮೈಸೂರಿನಲ್ಲಿ ಹಾಡಿನ ಚಿತ್ರೀಕರಣವಾಗಿದ್ದು, ಅತ್ಯದ್ಭುತವಾಗಿ ಮೂಡಿಬಂದಿದೆ ಅನ್ನೋದು ಚಿತ್ರತಂಡದ ಮಾತು. ಹಾಡಿನ ರಿಲೀಸ್ ಬಗ್ಗೆ ಜೋಗಿ ಪ್ರೇಮ್ ಸೇರಿದಂತೆ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಾಡನ್ನು ಮಿಸ್ ಮಾಡದೇ ನೋಡಲು ವಿನಂತಿಸಿಕೊಂಡಿದೆ.

'ಮೀಟ್ ಮಾಡೋಣ' ಹಾಡನ್ನು ಅದ್ಧೂರಿಯಾಗಿ ಶಿವಮೊಗ್ಗದಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಇನ್ನು ಏಕ್ ಲವ್ ಯಾ ಸಿನಿಮಾ ಒಂದೊಳ್ಳೆ ಪ್ರೇಮಕಥೆಯನ್ನು ಹೇಳಲು ಹೊರಟಿದ್ದು ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್‌ಗೆ ಸಜ್ಜಾಗುತ್ತಿದೆ.
ಜೊತೆಗೆ ಏಕ್‌ಲವ್‌ಯಾ ಸಿನಿಮಾ 21 ಜನವರಿ 2022ಕ್ಕೆ ತೆರೆಕಾಣಲಿದೆ. ಚಿತ್ರದ ಪೋಸ್ಟರ್ , ಹಾಡುಗಳು ಬಾರಿ ನಿರೀಕ್ಷೆ ಹುಟ್ಟಿಸಿದೆ. ಕೆಲ ತಿಂಗಳ ಹಿಂದೆಯೇ ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮುತ್ತತ್ತಿಯ ಆಂಜನೇಯ ಟೆಂಪಲ್‌ನಲ್ಲಿ ಕುಂಬಳಕಾಯಿ ಒಡೆದಿತ್ತು. ಈಗಾಗಲೇ ಚಿತ್ರದ ಸೆನ್ಸಾರ್ ಕೂಡ ಮುಕ್ತಾಯವಾಗಿದ್ದು ಯುಎ ಸರ್ಟಿಫಿಕೇಟ್ ಪಡೆದಿದೆ. ಏಕ್‌ಲವ್‌ಯಾ ಸಿನಿಮಾಗೆ ರಕ್ಷಿತ ಪ್ರೇಮ್ ಬಂಡವಾಳ ಹೂಡಿದ್ದು, ರಕ್ಷಿತಾ ಅವರ ಸಹೋದರ ಚಿತ್ರದಲ್ಲಿ ನಾಯಕರಾಗಿದ್ದಾರೆ. ರಾಣಾಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಬಣ್ಣ ಹಚ್ಚಿರೋದು ವಿಶೇಷ.


Click it and Unblock the Notifications











