ಅದ್ಭುತವಾದ ಪಯಣ ಇದಾಗಿತ್ತು: ನಟಿ ರಕ್ಷಿತಾ ಭಾವುಕ ಪೋಸ್ಟ್

ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದರೂ, ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ರಕ್ಷಿತಾ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

Recommended Video

ಕುಂಬಳ ಕಾಯಿ ಹೊಡೆದು ಮುಂದಿನ ಚಿತ್ರಕ್ಕೆ ಮುಹೂರ್ಥ ಇಟ್ಟ ಪ್ರೇಮ್

ಕಿರುತೆರೆ ಜೊತೆಗೆ ರಕ್ಷಿತಾ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ರಕ್ಷಿತಾ ಸಹೋದರ ರಾಣಾ ನಟನೆಯ ಚೊಚ್ಚಲ ಸಿನಿಮಾದ ನಿರ್ಮಾಣವನ್ನು ರಕ್ಷಿತಾ ವಹಿಸಿಕೊಂಡಿದ್ದು, ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹೌದು, ರಕ್ಷಿತಾ ಸಹೋದರ ರಾಣಾ ನಟನೆಯ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದಲ್ಲಿ ರಕ್ಷಿತಾ ಬ್ಯುಸಿಯಾಗಿದ್ದಾರೆ. ಸುಮಾರು ಎರಡು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಕೊರೊನಾ ಭೀಕರ ಪರಿಸ್ಥಿತಿಯನ್ನು ದಾಟಿ ಇದೀಗ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದಾರೆ.

ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಬಗ್ಗೆ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಭಾವಕ ಪತ್ರ ಬರೆದಿದ್ದಾರೆ. ತಂಡದ ಪ್ರತಿಯೊಬ್ಬ ಸದಸ್ಯರಿಗೂ ಧನ್ಯವಾದ ತಿಳಿಸಿರುವ ರಕ್ಷಿತಾ ಇದೊಂದು ಅದ್ಭುತವಾದ ಪಯಣವಾಗಿತ್ತು ಎಂದು ಹೇಳಿದ್ದಾರೆ. ಇಡೀ ತಂಡದ ಜೊತೆ ಇರುವ ಫೋಟೋ ಶೇರ್ ಮಾಡಿ ರಕ್ಷಿತಾ, "ಇವತ್ತು ಏಕ್ ಲವ್ ಯಾ ಸಿನಿಮಾದ ಕೊನೆಯ ದಿನದ ಚಿತ್ರೀಕರಣ. ಕೊನೆಯ ಚಿತ್ರೀಕರಣ ಮುತ್ತತ್ತಿಯಲ್ಲಿ ನಡೆಯಿತು. ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ತುಂಬಾ ಪಾಸಿಟಿವ್ ಆಗಿದೆ. ಈ ಸಿನಿಮಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞ, ಕಲಾವಿದರು ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದಿದ್ದಾರೆ.

Jogi Prem directorial ek love ya movie shooting completed

"ಇದು ಅದ್ಭುತವಾದ ಪಯಣವಾಗಿತ್ತು. ನಮ್ಮಲ್ಲಿ ಪ್ರತಿಯೊಬ್ಬರು ಅದ್ಭುತವಾದ ಕೆಲಸ ಮಾಡುವ ಹುಡುಗರಿದ್ದಾರೆ. ನಾವು ಶೀಘ್ರದಲ್ಲೇ ಬಿಡುಗಡೆ ಮಾಡಲು ಕಾಯುತ್ತಿದ್ದೇವೆ. ನೀವೆಲ್ಲರೂ ಈ ಸಿನಿಮಾ ಇಷ್ಟ ಪಡುತ್ತೀರಿ ಎಂದು ಭಾವಿಸಿದ್ದೀವಿ. ಏಕ್ ಲವ್ ಯಾ ಚಿತ್ರೀಕರಣ ಮತ್ತು ರಚನೆಯನ್ನು ತುಂಬಾ ಎಂಜಾಯ್ ಮಾಡಿದ್ದೇವು. ಏಕ್ ಲವ್ ಯಾ ತಂಡಕ್ಕೆ ಲವ್ ಯೂ. ಈ ತಂಡ ಒಳ್ಳೆಯ ಸಿನಿಮಾಗಳನ್ನು ಮಾಡಲಿ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಕ್ಷಿತಾ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಏಕ್ ಲವ್ ಯಾ ಈಗಾಗಲೇ ಫಸ್ಟ್ ಲುಕ್ ಮತ್ತು ಹಾಡಿನ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಮಲೆೋಡಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಗಾಯಪ್ರಿಯರ ಹೃದಯ ಗೆದ್ದಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಏಕ್ ಲವ್ ಯಾ ಹಾಡುಗಳು ಮೂಡಿ ಬಂದಿವೆ.

Jogi Prem directorial ek love ya movie shooting completed

ಏಕ್ ಲವ್ ಯಾ ಸಿನಿಮಾದಲ್ಲಿ ರಾಣಾಗೆ ನಾಕಿಯಾಗಿ ರೇಷ್ಮಾ ನಾಣಯ್ಯ ಕಾಣಿಸಿಕೊಳ್ಳುತ್ತಿದ್ದಾರೆ. ರೇಷ್ಮಾಗೆ ಇದು ಮೊದಲ ಸಿನಿಮಾವಾಗಿದ್ದು, ಚೊಚ್ಚಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಾಣುವ ಉತ್ಸುಕದಲ್ಲಿದ್ದಾರೆ. ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಟಿಸಿದ್ದಾರೆ.

ವಿಭಿನ್ನ ಪಾತ್ರದಲ್ಲಿ ರಚಿತಾ ಮಿಂಚಿದ್ದಾರೆ. ಈಗಾಗಲೇ ರಚಿತಾ ಮೊದಲ ಲುಕ್ ಬಿಗುಡೆಯಾಗಿದ್ದು, ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಿಗರೇಟ್ ಸೇದು ಅಚ್ಚರಿ ಮೂಡಿಸಿರುವ ರಚಿತಾ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇನ್ನು ಚಿತ್ರದ ಒಂದು ಹಾಡಿನಲ್ಲಿ ರಚಿತಾ ಜೊತೆ ನಟಿ ರಕ್ಷಿತಾ ಕೂಡ ಹೆಜ್ಜೆ ಹಾಕಿದ್ದಾರೆ. ಮದುವೆ ಬಳಿಕ ರಕ್ಷಿತಾ ಮೊದಲ ಬಾರಿಗೆ ಹಾಡಿನ ಮೂಲಕ ತೆರೆಮೇಲೆ ಬರ್ತಿದ್ದಾರೆ. ಒಟ್ನಲ್ಲಿ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಏಕ್ ಲವ್ ಯಾ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Jogi Prem directorial Ek Love Ya movie movie shooting completed. Rakshitha shares emotional post about wrap up of Ek love Shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X