ಕಿಚ್ಚನ ಜೊತೆ ಸಿನಿಮಾ ಘೋಷಿಸಿದ ಜೋಗಿ ಪ್ರೇಮ್; 'ಕೆಡಿ' ಹಾಗೂ 'D58' ಕಥೆಯೇನು?

ಜೋಗಿ ಪ್ರೇಮ್ ನಿರ್ದೇನದ 'ಕೆಡಿ' ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಸಿನಿಮಾ ಯಾವಾಗ ರಿಲೀಸ್ ಎನ್ನುವ ಬಗ್ಗೆ ಸ್ವತಃ ಪ್ರೇಮ್ ಅವರಿಗೂ ಖಚಿತ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಹಾಗಾಗಿ 'D58' ಸಿನಿಮಾ ಕೂಡ ಯಾವಾಗ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಇದೆಲ್ಲದರ ನಡುವೆ ಸುದೀಪ್ ಜೊತೆ ಸಿನಿಮಾ ಮಾಡುವುದಾಗಿ ಪ್ರೇಮ್ ಹೇಳಿದ್ದಾರೆ.

'ಮಾರ್ಕ್' ಚಿತ್ರದ ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಜೋಗಿ ಪ್ರೇಮ್ ಭಾಗಿ ಆಗಿದ್ದರು. ಆರ್‌. ಚಂದ್ರು, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸುದೀಪ್ ಹೇಳಿದಂತೆಯೇ ಒಂದೇ ವರ್ಷದಲ್ಲಿ ಮ್ಯಾಕ್ಸ್ ಬಳಿಕ ಮಾರ್ಕ್ ಸಿನಿಮಾ ತೆರೆಗೆ ತರುತ್ತಿದ್ದಾರೆ. ಇದೇ ವಿಚಾರವಾಗಿ ಪ್ರೇಮ್ ಮಾತನಾಡುತ್ತಾ ಮುಂದೆ ನಮ್ಮಿಬ್ಬರ ಸಿನಿಮಾ. ಇದೇ ರೀತಿ ಬೇಗ ಮಾಡ್ತೀವಿ ಎಂದು ಹೇಳಿದ್ದಾರೆ.

Jogi Prem Hints at Future Collaboration with Sudeep Amid Uncertainty Over KD and D58 Releases

'ಕೆಡಿ' ಚಿತ್ರದ ಅತಿಥಿ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆದಿತ್ತು. ಸೀಕ್ವೆಲ್‌ಗೆ ಲಿಂಕ್ ಕೊಡುವ ಸನ್ನಿವೇಶದಲ್ಲಿ ಕಿಚ್ಚ ನಟಿಸಿದ್ದಾರೆ ಎನ್ನಲಾಗ್ತಿದೆ. 'ಮಾರ್ಕ್' ಜೊತೆ 'ಬಿಲ್ಲ ರಂಗ ಬಾಷ' ಚಿತ್ರವನ್ನು ಸುದೀಪ್ ಆರಂಭಿಸಿದ್ದರು. ಒಂದು ಶೆಡ್ಯೂಲ್ ಬಳಿಕ 'ಮಾರ್ಕ್' ತಂಡ ಸೇರಿದ್ದರು. ಇದೀಗ 'ಮಾರ್ಕ್' ಚಿತ್ರೀಕರಣ ಮುಗಿದಿದೆ. ಹಾಗಾಗಿ ಸಿನಿಮಾ ರಿಲೀಸ್ ಬಳಿಕ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸಲಿದ್ದಾರೆ.

ಸಂತೋಷ್ ಆನಂದ್‌ರಾಮ್ ನಿರ್ದೇಶನದ ಚಿತ್ರದಲ್ಲಿ ಕೂಡ ಸುದೀಪ್ ನಟಿಸುತ್ತಾರೆ ಎನ್ನಲಾಗ್ತಿದೆ. ಎಸ್. ತಮನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ತೆಲುಗು ಕಾರ್ಯಕ್ರಮವೊಂದರಲ್ಲಿ ಸ್ವತಃ ತಮನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಯುವ' ಬಳಿಕ ಸಂತೋಷ್ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ಸುದೀಪ್ ನಟನೆಯ ಸಿನಿಮಾ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಸುದೀಪ್ ಜೊತೆ ಪ್ರೇಮ್ ಸಿನಿಮಾ ಘೋಷಿಸಿರುವುದು ಅಚ್ಚರಿ ಮೂಡಿಸಿದೆ.

'ಕೆಡಿ' ಬಳಿಕ ದರ್ಶನ್ ನಟನೆಯ 58ನೇ ಚಿತ್ರಕ್ಕೆ ಪ್ರೇಮ್ ಕೆಲಸ ಮಾಡಬೇಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯೇ ಚಿತ್ರಕ್ಕೆ ಹಣ ಹೂಡಲಿದೆ. ಆದರೆ ದರ್ಶನ್ ಜೈಲು ಸೇರಿ ಎಲ್ಲಾ ಉಲ್ಟಾ ಪಲ್ಟಾ ಆಗಿದೆ. ಸದ್ಯಕ್ಕೆ ದರ್ಶನ್ ಜೈಲಿನಿಂದ ಹೊರ ಬರುವ ಸುಳಿವು ಸಿಗುತ್ತಿಲ್ಲ. ಹಾಗಾಗಿ ಪ್ರೇಮ್ ಆ ಚಿತ್ರ ಪಕ್ಕಕ್ಕಿಟ್ಟು ಬೇರೆ ಸಿನಿಮಾ ಆರಂಭಿಸುವ ಲೆಕ್ಕಾಚಾರದಲ್ಲಿರುವಂತೆ ಕಾಣ್ತಿದೆ. ಅದಕ್ಕೂ ಮುನ್ನ 'ಕೆಡಿ' ಸಿನಿಮಾ ತೆರೆಗೆ ತರಬೇಕಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಕೆಡಿ' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತದಲ್ಲಿ 2 ಸಾಂಗ್ ಬಂದು ಹಿಟ್ ಆಗಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಬಜೆಟ್ 100 ಕೋಟಿ ರೂ. ಗಡಿ ದಾಟಿದೆ ಎನ್ನಲಾಗ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಂದಕ್ಕೆ ಹೋಗ್ತಿಲ್ಲ.

ಪ್ರೇಮ್ ಪ್ರೀತಿಯಿಂದ 'ಮಾರ್ಕ್' ವೇದಿಕೆಯಲ್ಲಿ ಸುದೀಪ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿರಬಹುದು. ಸದ್ಯಕ್ಕೆ ಅದು ಸಾಧ್ಯವಿಲ್ಲ ಎನ್ನಲಾಗ್ತಿದೆ. ಮೊದಲಿಗೆ ಸುದೀಪ್ 'ಬಿಲ್ಲ ರಂಗ ಬಾಷ' ಚಿತ್ರ ಮುಗಿಸಬೇಕಿದೆ. ಅದು ಬಹಳ ದೊಡ್ಡ ಸಿನಿಮಾ. ಕನಿಷ್ಠ ಪಕ್ಷ ಒಂದು ವರ್ಷ ಚಿತ್ರೀಕರಣ ಮಾಡಬೇಕಾಗಬಹುದು. ಹಾಗಾಗಿ 2027ರವರೆಗೆ ಕಿಚ್ಚನ ಕಾಲ್‌ಶೀಟ್ ಸಿಗುವುದು ಅನುಮಾನ. ದೊಡ್ಡ ಬ್ರೇಕ್‌ಗಾಗಿ ಪ್ರೇಮ್ ಕಾಯುತ್ತಿದ್ದಾರೆ.

ಈ ಹಿಂದೆ ಸುದೀಪ್ ಹಾಗೂ ಶಿವಣ್ಣ ನಟನೆಯ 'ದಿ ವಿಲನ್' ಚಿತ್ರಕ್ಕೆ ಪ್ರೇಮ್ ಆಕ್ಷನ್ ಕಟ್ ಹೇಳಿದ್ದರು. ಆದರೆ ಅದು ಕೈ ಕೊಟ್ಟಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಹಾಗಾಗಿ ಕಿಚ್ಚನ ಜೊತೆ ಮತ್ತೆ ಸಿನಿಮಾ ಮಾಡಲು ಪ್ರೇಮ್ ಪ್ಲ್ಯಾನ್ ಮಾಡುತ್ತಿದ್ದಾರೆ.

More from Filmibeat

Read more about: prem sudeep darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X