For Quick Alerts
  ALLOW NOTIFICATIONS  
  For Daily Alerts

  Big News: ಅಭಿನಯ ಚಕ್ರವರ್ತಿ ಜೊತೆ ಹೊಸ ಸಿನಿಮಾ ಘೋಷಿಸಿದ ಜೋಗಿ ಪ್ರೇಮ್

  |

  'ದಿ ವಿಲನ್' ಸಿನಿಮಾದ ಬಳಿಕ ಕಿಚ್ಚ ಸುದೀಪ್ ಜೊತೆ ಜೋಗಿ ಪ್ರೇಮ್ ಮತ್ತೆ ಸಿನಿಮಾ ಮಾಡ್ತಾರಾ ಇಲ್ವಾ ಎಂಬ ಚರ್ಚೆ ಜೋರಾಗಿ ನಡೆದಿತ್ತು. ಏಕಂದ್ರೆ, 'ದಿ ವಿಲನ್' ಬಿಡುಗಡೆ ಹಂತದಲ್ಲಿ ಕೆಲವು ಅಭಿಮಾನಿಗಳು ಪ್ರೇಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವೈಯಕ್ತಿಕವಾಗಿ ನಿಂದಿಸಿದ್ದರು. ಇದರಿಂದ ಬೇಸರಗೊಂಡಿದ್ದ ಪ್ರೇಮ್, ಸೈಬರ್ ಪೊಲೀಸರಿಗೆ ದೂರು ಸಹ ನೀಡಿದ್ದರು.

  ಅಡುಗೆ ಮಾಡೋಕಂತೂ ಬರಲ್ಲ ನೆಟ್ಟುಗೆ ತಿನ್ನು ಅಂತ ಬೈತಿದ್ರು ಸುದೀಪ್ | Filmibeat Kannada

  ಇದೆಲ್ಲ ಆದ್ಮೇಲೆ ಜೋಗಿ ಪ್ರೇಮ್ ಜೊತೆ ಸುದೀಪ್ ಮತ್ತೆ ಸಿನಿಮಾ ಮಾಡುವುದು ಅನುಮಾನ ಎಂದು ಗಾಂಧಿನಗರದಲ್ಲಿ ಚರ್ಚೆಯಾಗಿತ್ತು. ಆದ್ರೀಗ, ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತಮ್ಮ ಟ್ವಿಟ್ಟರ್ ಮೂಲಕ ಅಧಿಕೃತವಾಗಿ ನನ್ನ ಮುಂದಿನ ಸಿನಿಮಾಗೆ ಸುದೀಪ್ ಹೀರೋ ಎಂದು ಪ್ರಕಟಿಸಿದ್ದಾರೆ. ಮುಂದೆ ಓದಿ...

  ಬರ್ತಡೇ ದಿನ ಪ್ರಕಟ ಮಾಡಿದ ಪ್ರೇಮ್

  ಬರ್ತಡೇ ದಿನ ಪ್ರಕಟ ಮಾಡಿದ ಪ್ರೇಮ್

  ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿರುವ ಪ್ರೇಮ್ ''ಸುದೀಪ್ ಜೊತೆ ಮತ್ತೆ ಯಾವಾಗ ಸಿನಿಮಾ ಮಾಡ್ತೀರಾ ಎಂದು ಎಲ್ಲರೂ ಕೇಳುತ್ತಿದ್ದರು. ಆ ಟೈಂ ಬಂದಿದೆ. ಸುದೀಪ್ ಜೊತೆ ಮತ್ತೆ ಸಿನಿಮಾ ಮಾಡ್ತಿದ್ದೀನಿ'' ಎಂದು ಪ್ರೇಮ್ ಪ್ರಕಟಿಸಿದ್ದಾರೆ.

  'ಜೋಗಿ' ಪ್ರೇಮ್ ಹಾಡಿರುವ ಟಾಪ್ 10 ಹಾಡುಗಳು, ನಿಮಗೆ ಯಾವುದು ಇಷ್ಟ?'ಜೋಗಿ' ಪ್ರೇಮ್ ಹಾಡಿರುವ ಟಾಪ್ 10 ಹಾಡುಗಳು, ನಿಮಗೆ ಯಾವುದು ಇಷ್ಟ?

  ಹಿಂದೆಂದೂ ನೋಡದ ಅವತಾರದಲ್ಲಿ ಕಿಚ್ಚ

  ಹಿಂದೆಂದೂ ನೋಡದ ಅವತಾರದಲ್ಲಿ ಕಿಚ್ಚ

  ಮೊದಲ ಘೋಷಣೆಯಲ್ಲಿ ಕುತೂಹಲ ಹುಟ್ಟುಹಾಕಿರುವ ಪ್ರೇಮ್ ಹಿಂದೆಂದೂ ನೋಡದ ಅವತಾರದಲ್ಲಿ ಸುದೀಪ್ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರೇಮ್ ತಿಳಿಸಿದ್ದು #Newavatarsoon ಎಂಬ ಹ್ಯಾಷ್ ಟ್ಯಾಗ್ ಸಹ ಪೋಸ್ಟ್ ಹಾಕಿದ್ದಾರೆ.

  ಇತಿಹಾಸ ಮರುಸೃಷ್ಟಿ!

  ಇತಿಹಾಸ ಮರುಸೃಷ್ಟಿ!

  ಸಿನಿಮಾ ಪ್ರಚಾರ ಮಾಡುವುದರಲ್ಲಿ ಪ್ರೇಮ್ ಎತ್ತಿದ ಕೈ. ಸಿನಿಮಾ ಘೋಷಣೆ ಮಾಡುವುದರಿಂದಲೇ ತಮ್ಮ ಸ್ಟೈಲ್ ತೋರಿಸುವ ಪ್ರೇಮ್ ''ಈ ಚಿತ್ರದ ಮೂಲಕ ಮತ್ತೆ ಇತಿಹಾಸ ಸೃಷ್ಠಿಯಾಗುತ್ತದೆ'' ಎಂದು ಅರ್ಥದಲ್ಲಿ #Historyrepeats ಎಂದು ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

  'ಕಲಿ' ಹೋಯ್ತು 'ಕಲ್ಕಿ' ಬಂತು: ಶಿವಣ್ಣ.. ಸುದೀಪ್ ಅಲ್ಲ ಪ್ರೇಮ್ ಹೀರೋ'ಕಲಿ' ಹೋಯ್ತು 'ಕಲ್ಕಿ' ಬಂತು: ಶಿವಣ್ಣ.. ಸುದೀಪ್ ಅಲ್ಲ ಪ್ರೇಮ್ ಹೀರೋ

  'ಎಕ್ ಲವ್ ಯಾ' ಚಿತ್ರ ಎಲ್ಲಿಗೆ ಬಂತು?

  'ಎಕ್ ಲವ್ ಯಾ' ಚಿತ್ರ ಎಲ್ಲಿಗೆ ಬಂತು?

  ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಪ್ರೇಮ್ ಸದ್ಯ 'ಏಕ್ ಲವ್ ಯಾ' ಎಂಬ ಸಿನಿಮಾ ಮಾಡುತ್ತಿದ್ದರು. ಈ ಚಿತ್ರ ಮುಗಿದ ನಂತರ ಸುದೀಪ್ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ 'ಕೋಟಿಗೊಬ್ಬ-3' ಸಿನಿಮಾ ಮುಗಿಸಿರುವ ಸುದೀಪ್ 'ಫ್ಯಾಂಟಮ್' ಶೂಟಿಂಗ್‌ನಲ್ಲಿದ್ದಾರೆ.

  English summary
  Kannada director Jogi Prem officially announced His Next Movie with Kichcha Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X