ಬಾಲಿವುಡ್ ಗಾಯಕ ಸೋನು ನಿಗಮ್‌ಗೆ ಕೆಟ್ಟದಾಗಿ ಬೈದಿದ್ಯಾಕೆ ಜೋಗಿ ಪ್ರೇಮ್?

ಬಾಲಿವುಡ್ ಗಾಯಕ ಸೋನು ನಿಗಮ್ ಕನ್ನಡ ಹಾಡುಗಳನ್ನು ಹಾಡಿ ಗೆದ್ದಿದ್ದಾರೆ. ಹಲವು ಸೂಪರ್ ಹಿಟ್ ಗೀತೆಗಳ ಮೂಲಕ ಸಂಗೀತ ಪ್ರೇಮಿಗಳನ್ನು ಸೋನು ರಂಜಿಸುತ್ತಾ ಬರ್ತಿದ್ದಾರೆ. ಇತ್ತೀಚೆಗೆ ಕನ್ನಡಿಗರ ಬಗ್ಗೆ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ನಂತರ ಕ್ಷಮೆ ಕೇಳಿ ವಿವಾದ ಬಗೆಹರಿದಿತ್ತು.

ಈ ಹಿಂದೆ ಸೋನು ನಿಗಮ್‌ಗೆ ನಿರ್ದೇಶಕ ಜೋಗಿ ವೃತ್ತಿ ಧರ್ಮದ ಪಾಠ ಮಾಡಿದ್ದರಂತೆ. ಬಾಲಿವುಡ್ ಗಾಯಕ ಬೇಜವಾಬ್ದಾರಿ ನಡೆಗೆ ಪ್ರೇಮ್ ತಕ್ಕಶಾಸ್ತಿ ಮಾಡಿದ್ದಾಗಿ ಹೇಳಿದ್ದಾರೆ. ಇತ್ತೀಚೆಗೆ 'ಲೈಫ್ ಟುಡೇ' ಚಿತ್ರಕ್ಕಾಗಿ ಅವರ ಹಾಡೊಂದನ್ನು ಹಾಡಿದ್ದಾರೆ. "ಲೂಪ್ ಸ್ಟುಡಿಯೋ"ದಲ್ಲಿ ರೆಕಾರ್ಡಿಂಗ್ ನಡೀತು. ಈ ವೇಳೆ ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಮತ್ತೆ ಜೈಲು ಸೇರಿರುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

Jogi Prem Recalls Scolding Sonu Nigam for Irresponsible Behavior During Kannada Song Recording

'ಏಕ್‌ ಲವ್‌ ಯಾ' ಚಿತ್ರಕ್ಕಾಗಿ ಸೋನು ನಿಗಮ್ ಒಂದು ಹಾಡು ಹಾಡಿದ್ದಾರೆ. ಅದರ ರೆಕಾರ್ಡಿಂಗ್‌ಗೆ ಹೋದಾಗ ಏನಾಗಿತ್ತು ಎಂದು ಪ್ರೇಮ್ ನೆನಪಿಸಿಕೊಂಡಿದ್ದಾರೆ. "ನಾನು ಹಾಗೂ ಅರ್ಜುನ್ ಜನ್ಯಾ ಮುಂಬೈಗೆ ಹೋಗಿ ಸೋನು ಸಿಗಮ್ ಅವರಿಂದ ಹಾಡು ಹಾಡಿಸಬೇಕಿತ್ತು. ಸಂಜೆ 6 ಗಂಟೆಗೆ ಬರೋಕೆ ಹೇಳಿದ್ರು. ಅವ್ರು ಇರಲಿಲ್ಲ. ಸ್ಟುಡಿಯೋದಲ್ಲಿ ಅವ್ರ ಆಪ್ತರು ಸಾಂಗ್ ಟ್ರ್ಯಾಕ್ ಕೇಳಿದ್ರು. ಸರ್ ಬರೋದು ಸ್ವಲ್ಪ ತಡವಾಗುತ್ತೆ 7 ಗಂಟೆ ಆಗಬಹುದು ಅಂದ್ರು. ಸರಿ ಎಂದು ಕುಳಿತೆವು" ಎಂದು ಪ್ರೇಮ್ ಆ ಘಟನೆ ಬಗ್ಗೆ ಹೇಳಿದ್ದಾರೆ.

ಕೊನೆಗೆ ಸೋನು ಆ ದಿನ ಹಾಡೋಕೆ ನಿರಾಕರಿಸಿದ್ದಾಗ ಪ್ರೇಮ್ ಬಾಯಿಗೆ ಬಂದಂತೆ ಬೈದಿದ್ದನ್ನು ಮೆಲುಕು ಹಾಕಿದ್ದಾರೆ. "ಸ್ವಲ್ಪ ಹೊತ್ತಿನ ನಂತರ ಸರ್ 9 ಗಂಟೆಗೆ ಬರ್ತಾರೆ ಎಂದು ಆತ ಹೇಳಿದ. ಸರಿ ಎಂದು ಊಟ ಮಾಡಿಕೊಂಡು ಬರೋಣ ಎಂದು ನಾನು ಜನ್ಯಾ ಹೊರಗೆ ಬಂದೆವು. ಬಳಿಕ ಹೋದರೆ ಸರ್ ಮನೆಯಲ್ಲಿ ಏನೋ ಫಂಕ್ಷನ್ ಅಂತೆ 12 ಗಂಟೆಗೆ ಬರ್ತಾರಂತೆ ಎಂದು ಆತ ಹೇಳಿದ. ಕೂಡಲೇ ಬೇಸರದಿಂದ ಸೋನು ನಿಗಮ್‌ಗೆ ಫೋನ್ ಮಾಡಿ ಬೈದೆ" ಎಂದಿದ್ದಾರೆ.

"ನನಗೆ ಎಷ್ಟು ಚೆನ್ನಾಗಿ ಕನ್ನಡ, ಹಿಂದಿ, ಮಲಯಾಳಂ ಭಾಷೆಯಲ್ಲಿ ಬೈಯೋಕೆ ಬರುತ್ತೋ ಅಷ್ಟು ಕೆಟ್ಟದಾಗಿ ಬೈದೆ. ಇದು ನನ್ನ ಹಾಡು, ನಮ್ಮ ಸಂಗೀತ ನಿರ್ದೇಶಕರು ಇವ್ರು, ಮೊದ್ಲು ಹಾಡಿಗೆ, ಸಂಗೀತ ನಿರ್ದೇಶಕರಿಗೆ ಗೌರವ ಕೊಡುವುದನ್ನು ಕಲಿ ಎಂದೆ. ಬಳಿಕ ಆತ ಕ್ಷಮೆ ಕೇಳಿ ಸೋನು ನಿಗಮ್ ಖುದ್ದಾಗಿ ಫ್ಲೈಟ್ ಟಿಕೆಟ್ ಹಾಕ್ಕೊಂಡು ಬಂದು ಅರ್ಜುನ್ ಸ್ಟುಡಿಯೋದಲ್ಲಿ ಹಾಡು ಹಾಡಿದ್ರು. ತಪ್ಪಾಯ್ತು, ಹೀಗೆ ಮಾಡಬಾರದಿತ್ತು ಎಂದು ತಮ್ಮ ವ್ಲಾಗ್‌ ಅಲ್ಲಿ ಹಾಕಿದ್ರು. ಕನ್ನಡಿಗರ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟಾಗಲೂ ಕ್ಷಮೆ ಕೇಳಿ ಬಿಟ್ಟಿದ್ರೆ ಆಗ್ತಿತ್ತು" ಎಂದು ಪ್ರೇಮ್ ಹೇಳಿದ್ದಾರೆ.

ಪ್ರೇಮ್ ಸದ್ಯ 'ಕೆಡಿ' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಧ್ಯವಾದಷ್ಟು ಬೇಗ ಸಿನಿಮಾ ತೆರೆಗೆ ತರುವ ಲೆಕ್ಕಾಚಾರದಲ್ಲಿದ್ದಾರೆ. ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಸಂಜಯ್ ದರ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ.

ವಿಲಿಯಂ ಡೇವಿಡ್ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ 'ಕೆಡಿ' ಚಿತ್ರಕ್ಕಿದೆ. ಈಗಾಗಲೇ 2 ಹಾಡು ಹಾಗೂ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ.

More from Filmibeat

English summary
Reason behind why Director Prem scolded Sonu Nigam
Read more about: prem sonu nigam sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X