ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಜೋಗಿ ಪ್ರೇಮ್ ಧ್ವನಿ
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪಂಚತಂತ್ರ ಸಿನಿಮಾ ಇದೇ ತಿಂಗಳು 29 ರಂದು ತೆರೆಕಾಣುತ್ತಿದೆ. ಸಿನಿಮಾ ಪ್ರಚಾರ, ಅದೂ ಇದೂ ಅಂತಹ ಬ್ಯುಸಿ ಇರುವ ಭಟ್ಟರು, ಇಂತಹ ಟೈಮಲ್ಲಿ ಚಿತ್ರದ ಟೈಟಲ್ ಹಾಡಿನ ಕೆಲಸಕ್ಕೆ ಕೈಹಾಕಿದ್ದಾರೆ.
ಹೌದು, ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಮೂಲಕ ಗಮನ ಸೆಳೆದಿರುವ ಪಂಚತಂತ್ರ ಚಿತ್ರದ ಟೈಟಲ್ ಹಾಡನ್ನ ಜೋಗಿ ಪ್ರೇಮ್ ಹಾಡಿದ್ದಾರೆ. ವಿಶೇಷ ಅಂದ್ರೆ ಈ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.
ಜಯಂತ್ ಕಾಯ್ಕಿಣಿ ಹಾಡುಗಳಂದ್ರೆ ಅದೊಂಥರ ಹೊಸ ಅನುಭವ. ಮೆಲೋಡಿ ಅಥವಾ ರೋಮ್ಯಾಟಿಂಕ್ ಗೀತೆಗಳನ್ನ ಹೆಚ್ಚು ಬರೆಯುವ ಕಾಯ್ಕಿಣಿ ಪಂಚತಂತ್ರಕ್ಕೆ ಯಾವ ರೀತಿ ಹಾಡು ಬರೆದಿದ್ದಾರೆ ಎಂಬುದು ಕುತೂಹಲ. ಹೀಗಿರುವಾಗ ಮಾಸ್ ಸಾಂಗ್ ಹಾಗೂ ಸೆಂಟಿಮೆಂಟ್ ಹಾಡುಗಳಿಗೆ ಖ್ಯಾತಿ ಆಗಿರುವ ಪ್ರೇಮ್, ಕಾಯ್ಕಿಣಿ ಬರೆದಿರುವ ಹಾಡನ್ನ ಹಾಡಿರುವುದು ಇನ್ನೊಂದು ಸ್ಪೆಷಲ್ ಎನಿಸಿದೆ.

ಸೋ, ಈ ಹಾಡು ಹೇಗಿದೆ, ಹೇಗೆ ಬಂದಿರುತ್ತೆ ಎನ್ನುವುದು ಈಗ ಚಿತ್ರ ಪ್ರೇಮಿಗಳ ಕಾತುರ ಹೆಚ್ಚಿಸುತ್ತಿದೆ. ಇನ್ನುಳಿದಂತೆ ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ಪಂಚತಂತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹರಿಪ್ರಸಾದ್ ಜಯಣ್ಣ, ಹೇಮಂತ್ ಪರಡ್ಕರ್ ಬಂಡವಾಳ ಹಾಕಿದ್ದಾರೆ. ವಿಹಾನ್ ನಾಯಕನಾಗಿದ್ದು, ಸೋನಾಲ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಕ್ಷರಾ ಗೌಡ, ರಂಗಾಯಣ ರಘು ಕೂಡ ಇದ್ದಾರೆ.


Click it and Unblock the Notifications











