'ಟಾಕ್ಸಿಕ್', 'ಜನ ನಾಯಗನ್' ಹಾಗೂ 'ಕೆಡಿ' ಚಿತ್ರಗಳ ಬಜೆಟ್ ಲೆಕ್ಕ ಕೊಟ್ಟ ಜೋಗಿ ಪ್ರೇಮ್

ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಹೆಸರು ಸದ್ದು ಮಾಡ್ತಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಕಾರಣಾಂತರಗಳಿಂದ ಕೊಂಚ ಹಿನ್ನಡೆ ಆಗುತ್ತಿದೆ. 'ಜನ ನಾಯಗನ್' ಹಾಗೂ 'ಟಾಕ್ಸಿಕ್' ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ ಹೋಗ್ತಿದೆ. ಚಿತ್ರಗಳ ಬಜೆಟ್ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಮಾತನಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಜೊತೆ ಸೇರಿ ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್' ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಮುಂದಿನ ವಾರ ಸಿನಿಮಾ ತೆರೆಗೆ ಬರಬೇಕಿತ್ತು. ಇನ್ನು ಸೆನ್ಸಾರ್ ಸಮಸ್ಯೆಯಿಂದ ಸಂಕ್ರಾಂತಿಗೆ ಬಿಡುಗಡೆ ಆಗಬೇಕಿದ್ದ 'ಜನ ನಾಯಗನ್' ಸಿನಿಮಾ ತಡವಾಗುತ್ತಿದೆ. ಈ ನಡುವೆ ಏಪ್ರಿಲ್ 30ಕ್ಕೆ 'ಕೆಡಿ' ಸಿನಿಮಾ ಬಿಡುಗಡೆ ಪ್ರಯತ್ನ ಶುರುವಾಗಿದೆ. ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಮಾಡಿದೆ ಚಿತ್ರತಂಡ.

Jogi Prem Says KVN Productions Is Making 1000 Crore Films Like Toxic Jana Nayagan and KD

ಕಾರಣಾಂತರಗಳಿಂದ 'ಕೆಡಿ' ಸಿನಿಮಾ ಸಿನಿಮಾ ತಡವಾಗಿದ್ದು ಸುಳ್ಳಲ್ಲ. 4 ವರ್ಷಗಳ ಹಿಂದೆ ಸೆಟ್ಟೇರಿದ್ದ ಪ್ಯಾನ್ ಇಂಡಿಯಾ ಸಿನಿಮಾ ಶೂಟಿಂಗ್ ತಡವಾಗುತ್ತಾ ಬಂದಿತ್ತು. ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಸರ್ಜಾ ಹೀರೊ ಆಗಿ ಮಿಂಚಿದ್ದಾರೆ. ಇನ್ನುಳಿದಂತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ತಾರಾಗಣದಲ್ಲಿದ್ದಾರೆ. ಚಿತ್ರದ ಬಜೆಟ್ 100 ಕೋಟಿ ರೂ. ದಾಟಿರುವ ಅಂದಾಜಿದೆ.

'ಟಾಕ್ಸಿಕ್', 'ಜನ ನಾಯಗನ್' ಹಾಗೂ 'ಕೆಡಿ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಜೋಗಿ ಪ್ರೇಮ್ ಮಾತನಾಡಿದ್ದಾರೆ. 'ಕೆಡಿ' ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಈವೆಂಟ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಕೆವಿಎನ್ ಸಂಸ್ಥೆಗೆ ಪದೇ ಪದೆ ಸಮಸ್ಯೆ ಎದುರಾಗ್ತಿದೆ. ದೊಡ್ಡ ಸಿನಿಮಾಗಳನ್ನು ಒಟ್ಟಿಗೆ ನಿರ್ಮಾಣ ಮಾಡುವುದು ತಮಾಷೆಯಲ್ಲ. 3 ಚಿತ್ರಗಳ ಬಜೆಟ್ 1000 ಕೋಟಿ ರೂ.ಗೂ ಅಧಿಕ ಇರಬಹುದು. ನನಗೆ ಗೊತ್ತಿಲ್ಲ.. ಪಕ್ಕದಲ್ಲಿ ಇನ್‌ಕಂ ಟ್ಯಾಕ್ಸ್‌ನವರು ಕೂತಿದ್ದಾರೆ. ಹೋದ್ರೆ ಕಷ್ಟ" ಎಂದು ಪ್ರೇಮ್ ಹೇಳಿರುವುದು ವೈರಲ್ ಆಗ್ತಿದೆ.

ಪ್ರೇಮ್ ಹೇಳುತ್ತಿರುವ ಲೆಕ್ಕದಲ್ಲಿ 'ಟಾಕ್ಸಿಕ್' ಸಿನಿಮಾ ಬಜೆಟ್ 500 ಕೋಟಿ ರೂ. ಮೀರಿದೆ ಎನ್ನುವ ಅಂದಾಜಿದೆ. ಅದೇ ರೀತಿ ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ 'ಜನ ನಾಯಗನ್' ಬಜೆಟ್ ಹೆಚ್ಚಾಗಿದೆ. ದಳಪತಿ ವಿಜಯ್‌ಗೆ 250 ಕೋಟಿ ರೂ.ಗೂ ಅಧಿಕ ಸಂಭಾವನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಬಜೆಟ್ 400 ಕೋಟಿ ರೂ. ದಾಟಿರಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಇನ್ನು 'ಕೆಡಿ' ಚಿತ್ರಕ್ಕೆ 100 ಕೋಟಿ ರೂ. ಸುರಿದಿರಬಹುದು. ಎಲ್ಲಾ ಸೇರಿ 1000 ಕೋಟಿ ರೂ. ಎಂದು ಪ್ರೇಮ್ ಹೇಳಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.

ಈ 3 ಸಿನಿಮಾಗಳು ಮಾತ್ರವಲ್ಲ. ಈಗಾಗಲೇ ಕೆವಿಎನ್ ಸಂಸ್ಥೆ ಬಾಲಿವುಡ್ ಅಂಗಳ ಪ್ರವೇಶಿಸಿದೆ. ಅಕ್ಷಯ್‌ ಕುಮಾರ್ ನಟನೆಯ 'ಹೈವಾನ್' ಚಿತ್ರಕ್ಕೆ ಹಣ ಹೂಡಿದೆ. ತೆಲುಗಿನಲ್ಲಿ ಚಿರಂಜೀವಿ ಹಾಗೂ ಬಾಬಿ ಕೊಲ್ಲಿ ಕಾಂಬಿನೇಷನ್ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇನ್ನು ಮಲಯಾಳಂನಲ್ಲಿ 'ಬಾಲನ್' ಎಂಬ ಚಿತ್ರ ಕೈಗೆತ್ತಿಕೊಂಡಿದೆ. 'ಮಂಜುಮ್ಮೇಲ್ ಬಾಯ್ಸ್' ಸಿನಿಮಾ ಖ್ಯಾತಿಯ ಚಿದಂಬರಂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ 6 ಸಿನಿಮಾಗಳ ಬಜೆಟ್ ಲೆಕ್ಕ ಹಾಕಿದ್ರೆ ಅನಾಯಾಸವಾಗಿ 1000 ಕೋಟಿ ರೂ. ದಾಟುವ ಅಂದಾಜಿದೆ.

ಕನ್ನಡ ಚಿತ್ರನಿರ್ಮಾಣ ಸಂಸ್ಥೆಯೊಂದು ಹೀಗೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಹೊಂಬಾಳೆ ಫಿಲ್ಮ್ಸ್ ರೀತಿಯಲ್ಲೇ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸದ್ದು ಮಾಡ್ತಿದೆ. ಸಾಕಷ್ಟು ಸಿನಿಮಾಗಳನ್ನು ವಿತರಣೆ ಮಾಡುತ್ತಿದೆ. ಸಂಸ್ಥೆಗೆ ಆದಷ್ಟು ಬೇಗ 3 ಸಿನಿಮಾಗಳು ಬಿಡುಗಡೆ ಆಗಿ ಯಶಸ್ಸು ಸಿಗಲಿ.

More from Filmibeat

Read more about: prem kd kvn productions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X