twitter
    For Quick Alerts
    ALLOW NOTIFICATIONS  
    For Daily Alerts

    ಸಾವಿನ ನೋವಿಗೆ ಧ್ವನಿಯಾದ 'ಜೋಗಿ ಪ್ರೇಮ್'

    By Pavithra
    |

    ಜೋಗಿ ಪ್ರೇಮ್ 'ಎಕ್ಸ್‌ಕ್ಯೂಸ್ ಮಿ', 'ಜೋಗಿ' ಚಿತ್ರಗಳಲ್ಲಿ ತಾಯಿಯ ನೋವಿನ ಸನ್ನಿವೇಶಗಳಿಗೆ ಜೀವ ಕೊಟ್ಟು ಖ್ಯಾತಿ ಗಳಿಸಿದ ನಿರ್ದೇಶಕ. ಆದರೆ ಇದೀಗ ವ್ಯಕ್ತಿಯೋಬ್ಬರ ಸಾವಿನ ನೋವಿಗೆ ಧ್ವನಿಯಾಗಿ ಮಾನವೀಯತೆ ಮೆರೆದಿದ್ದಾರೆ. ಹೌದು ಕನ್ನಡದ 'ಪರಸಂಗ' ಚಿತ್ರದ ಹಾಡೊಂದನ್ನು ಜೋಗಿ ಪ್ರೇಮ್ ಹಾಡಿದ್ದು ಈ ಹಾಡು ಸೂಪರ್ ಹಿಟ್ ಆಗಿದೆ.

    ಆದ್ರೆ ಈ ಹಾಡು ಹುಟ್ಟಿದ ಸನ್ನಿವೇಶ ಮಾತ್ರ ಒಂದು ಸಾವಿನ ಹಿಂದಿನ ನೋವಿನ ಕ್ಷಣದಲ್ಲಿ ಅನ್ನೋದು ತುಂಬ ಜನರಿಗೆ ಗೊತ್ತಿಲ್ಲ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಎನ್.ಕೆ.ಲೋಲಾಕ್ಷಿ ಈ ಹಾಡನ್ನು ಬರೆದಿದ್ದಾರೆ.

    ಹಿಸ್ಟರಿ ಕ್ರಿಯೆಟ್ ಮಾಡಲು ಸಜ್ಜಾಗಿದೆ 'ದಿ ವಿಲನ್' ಟೀಂ ಹಿಸ್ಟರಿ ಕ್ರಿಯೆಟ್ ಮಾಡಲು ಸಜ್ಜಾಗಿದೆ 'ದಿ ವಿಲನ್' ಟೀಂ

    2007ರಲ್ಲಿ ಲೋಲಾಕ್ಷಿಯವರ ಅಕ್ಕನ ಮಗಳಾದ ಭಾವನ, ಮನೆಯಲ್ಲಿ ಸ್ನಾನ ಮಾಡುವಾಗ ಗ್ಯಾಸ್ ಗೀಸರ್ ಎಲೆಕ್ಟ್ರಿಕ್ ಶಾಕ್‌ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದರು. ಭಾವನರನ್ನ ತನ್ನ ಮಗಳಂತೆ ಹಚ್ಚಿಕೊಂಡಿದ್ದ ಲೋಲಾಕ್ಷಿಯವರು ಭಾವನ ಸಾವಿನ ನೋವಿನಿಂದ ಹೊರಬಂದಿರಲಿಲ್ಲ. ಪದೆ ಪದೆ ಕಾಡುತ್ತಿದ್ದ ಭಾವನರ ನೆನಪುಗಳು ಲೋಲಾಕ್ಷಿಯವರನ್ನ ಖಿನ್ನತೆಗೆ ಒಳಗಾಗುವಂತೆ ಮಾಡುತ್ತಿತ್ತು.‌ಈ ಸಂದರ್ಭದಲ್ಲಿ ಲೋಲಾಕ್ಷಿಯವರು ಭಾವನ ನೆನಪಿನಲ್ಲೆ ಪದ್ಯಗಳನ್ನ ಬರೆಯಲಾರಂಭಿಸದರು.

    Jogi Prem sings the song for kannada Parasanga movie

    ಭಾವನ ವಿಧಿವಶರಾದ 5 ವರ್ಷಗಳ ನಂತರ ಹಲವು ಪದ್ಯಗಳನ್ನ ಬರೆದಿದ್ದ ಲೋಲಾಕ್ಷಿ ಭಾವನ ಹೆಸರಿನಲ್ಲಿ ಸಿಡಿಯೊಂದನ್ನ ಬಿಡುಗಡೆ ಮಾಡಿದರು. ಅದರಲ್ಲಿ 'ಮರಳಿ ಬಾರದ ಊರಿಗೆ' ಎಂಬ ಭಾವಗೀತೆ ಸಾಕಷ್ಟು ಖ್ಯಾತಿ ಗಳಿಸಿತು. ಐದಾರು ವರ್ಷಗಳಿಂದ ಭಾವಗೀತೆಯಾಗಿಯೇ ಉಳಿದಿದ್ದ 'ಮರಳಿ ಬಾರದ ಊರಿಗೆ' ಹಾಡು ಇದೀಗ ಚಿತ್ರಗೀತೆಯಾಗಿದ್ದು. 'ಪರಸಂಗ' ಚಿತ್ರದಲ್ಲಿ ಭಾವನಾತ್ಮಕ ರೂಪ ಪಡೆದುಕೊಂಡಿದೆ.‌

    Jogi Prem sings the song for kannada Parasanga movie

    ಬಹುಮುಖ್ಯವಾಗಿ 'ಪರಸಂಗ' ಚಿತ್ರಕ್ಕೆ ಬಳಕೆಯಾಗುತ್ತಿರುವ ಹಾಡಿಗೆ ಜೋಗಿ ಪ್ರೇಮ್ ಧ್ವನಿಯಾಗಿದ್ದು ಪ್ರೇಮ್ ಹಾಡಿರುವ ಈ ಹಾಡು ಸಖತ್ ಹಿಟ್ ಆಗಿದೆ. ಭಾವನ ಹೆಸರಿನ ಭಾವನೆಗಳ ನೆನಪಿನಲ್ಲಿ ಹುಟ್ಟಿದ ಹಾಡಿಗೆ ಭಾವದಿಂದಲೇ ಧ್ವನಿಗೂಡಿಸಿರುವ ಪ್ರೇಮ್ ಸಹ ಈ ಗೀತೆಯ ಸಾಹಿತ್ಯವನ್ನ ಮೆಚ್ಚಿಕೊಂಡಿದ್ದಾರೆ. ಅದೇನೆ ಇದ್ದರೂ ಪ್ರೇಮ್ ಭಾವನಾತ್ಮಕ ಸನ್ನಿವೇಶಗಳನ್ನಷ್ಟೇ ಚಿತ್ರೀಕರಿಸದೆ ಬೇರೆಯವರ ಭಾವನೆಗಳಿಗೆ ಧ್ವನಿಯೂ ಆಗುತ್ತಾರೆ ಅಂತ ಈ ಹಾಡಿನ ಮೂಲಕ ಸಾಬೀತು ಮಾಡಿದ್ದಾರೆ.

    English summary
    Kannada actor Jogi Prem sings the song for kannada Parasanga movie. Kuvempu Kannada Study Institute of Mysore, Assistant Professor Dr. NK Lolakshi, wrote the song.
    Friday, June 29, 2018, 14:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X