ಶಿವಣ್ಣನ 'ರಸ್ತುಂ' ಸಿನಿಮಾ ಬಗ್ಗೆ ಬಾಲಿವುಡ್ ನಟ ಜಾನ್ ಅಬ್ರಾಹಂ ಮಾತು
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ರುಸ್ತುಂ' ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಇದೆ ತಿಂಗಳು ತೆರೆಗೆ ಬರುತ್ತಿರುವ ಚಿತ್ರಕ್ಕೆ ಟಾಲಿವುಡ್, ಬಾಲಿವುಡ್ ನಟರೆಲ್ಲ ಶುಭ ಹಾರೈಸುತ್ತಿದ್ದಾರೆ. ಈಗಾಗಲೆ ಟ್ರೈಲರ್ ಮೂಲಕ ಬಾರಿ ಹವಾ ಕ್ರಿಯೇಟ್ ಮಾಡಿರುವ 'ರುಸ್ತುಂ' ಚಿತ್ರಕ್ಕೆ ಬಾಲಿವುಡ್ ನಟ ಜಾನ್ ಅಬ್ರಾಹಂ ಕೂಡ ವಿಶ್ ಮಾಡಿದ್ದಾರೆ.
ಅಂದ್ಹಾಗೆ 'ರುಸ್ತುಂ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಸಾಹಸ ನಿರ್ದೇಶಕ ರವಿವರ್ಮ. 'ರುಸ್ತುಂ' ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ರವಿ ವರ್ಮಾಗೆ ಬೇರೆ ಬೇರೆ ಭಾಷೆಯ ನಟರೆಲ್ಲ ಸಾಥ್ ನೀಡುತ್ತಿದ್ದಾರೆ. ಕಾರಣ ರವಿ ವರ್ಮಾ ಸಾಹಸ ನಿರ್ದೇಶಕರಾಗಿ ಅನೇಕ ಭಾಷೆಯಲ್ಲಿ ಅನೇಕ ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ.
ಮೊನ್ನೆ ಮೊನ್ನೆಯಷ್ಟೆ ತೆಲುಗು ನಟ ವೆಂಕಟೇಶ್ ಕೂಡ ಚಿತ್ರಕ್ಕೆ ಶುಭ ಹಾರೈಸಿದ್ರು. ಸದ್ಯ ಜಾನ್ ಅಬ್ರಾಹಂ 'ರುಸ್ತುಂ'ಗೆ ವಿಶ್ ಮಾಡಿದ್ದಾರೆ. "ರವಿ ಅಣ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಇದೆ ತಿಂಗಳು 28ಕ್ಕೆ ತೆರೆಗೆ ಬರುತ್ತಿದೆ ಎಲ್ಲರು ನೋಡಿ" ಎಂದು ಹೇಳುವ ಮಾಲಕ 'ರುಸ್ತುಂ'ಗೆ ಸಾಥ್ ನೀಡಿದ್ದಾರೆ.

ಈಗಾಗಲೆ ಹಾಡುಗಳು ಮತ್ತು ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿರುವ 'ರುಸ್ತುಂ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಖದರ್ ತೋರಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಮಿಂಚಿದ್ದಾರೆ.


Click it and Unblock the Notifications











