twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣನ 'ರಸ್ತುಂ' ಸಿನಿಮಾ ಬಗ್ಗೆ ಬಾಲಿವುಡ್ ನಟ ಜಾನ್ ಅಬ್ರಾಹಂ ಮಾತು

    |

    Recommended Video

    Rustum Kannada Movie: ಸಖತ್ ಸದ್ದು ಮಾಡುತ್ತಿದೆ 'ರುಸ್ತುಂ' ಸಿನಿಮಾ | FILMIBEAT KANNADA

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ರುಸ್ತುಂ' ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಇದೆ ತಿಂಗಳು ತೆರೆಗೆ ಬರುತ್ತಿರುವ ಚಿತ್ರಕ್ಕೆ ಟಾಲಿವುಡ್, ಬಾಲಿವುಡ್ ನಟರೆಲ್ಲ ಶುಭ ಹಾರೈಸುತ್ತಿದ್ದಾರೆ. ಈಗಾಗಲೆ ಟ್ರೈಲರ್ ಮೂಲಕ ಬಾರಿ ಹವಾ ಕ್ರಿಯೇಟ್ ಮಾಡಿರುವ 'ರುಸ್ತುಂ' ಚಿತ್ರಕ್ಕೆ ಬಾಲಿವುಡ್ ನಟ ಜಾನ್ ಅಬ್ರಾಹಂ ಕೂಡ ವಿಶ್ ಮಾಡಿದ್ದಾರೆ.

    ಅಂದ್ಹಾಗೆ 'ರುಸ್ತುಂ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಸಾಹಸ ನಿರ್ದೇಶಕ ರವಿವರ್ಮ. 'ರುಸ್ತುಂ' ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ರವಿ ವರ್ಮಾಗೆ ಬೇರೆ ಬೇರೆ ಭಾಷೆಯ ನಟರೆಲ್ಲ ಸಾಥ್ ನೀಡುತ್ತಿದ್ದಾರೆ. ಕಾರಣ ರವಿ ವರ್ಮಾ ಸಾಹಸ ನಿರ್ದೇಶಕರಾಗಿ ಅನೇಕ ಭಾಷೆಯಲ್ಲಿ ಅನೇಕ ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ.

    ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ 'ಭಜರಂಗಿ-2' ಫಸ್ಟ್ ಲುಕ್ ರಿಲೀಸ್ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ 'ಭಜರಂಗಿ-2' ಫಸ್ಟ್ ಲುಕ್ ರಿಲೀಸ್

    ಮೊನ್ನೆ ಮೊನ್ನೆಯಷ್ಟೆ ತೆಲುಗು ನಟ ವೆಂಕಟೇಶ್ ಕೂಡ ಚಿತ್ರಕ್ಕೆ ಶುಭ ಹಾರೈಸಿದ್ರು. ಸದ್ಯ ಜಾನ್ ಅಬ್ರಾಹಂ 'ರುಸ್ತುಂ'ಗೆ ವಿಶ್ ಮಾಡಿದ್ದಾರೆ. "ರವಿ ಅಣ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಇದೆ ತಿಂಗಳು 28ಕ್ಕೆ ತೆರೆಗೆ ಬರುತ್ತಿದೆ ಎಲ್ಲರು ನೋಡಿ" ಎಂದು ಹೇಳುವ ಮಾಲಕ 'ರುಸ್ತುಂ'ಗೆ ಸಾಥ್ ನೀಡಿದ್ದಾರೆ.

    John Abraham supported to actor Shiva Rajkumar starrer Rustum film

    ಈಗಾಗಲೆ ಹಾಡುಗಳು ಮತ್ತು ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿರುವ 'ರುಸ್ತುಂ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಖದರ್ ತೋರಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಮಿಂಚಿದ್ದಾರೆ.

    English summary
    Bollywood actor John Abraham supported to actor Shiva Rajkumar starrer Rustum film. Rustum all set to release on June 28th.This movie is directed by Ravi Varma.
    Thursday, June 20, 2019, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X