ಕನ್ನಡದಲ್ಲಿ ತಾವೇ ಡಬ್ಬಿಂಗ್ ಮಾಡಿದ ಜಾನಿ ಲೀವರ್

By Bharath Kumar

Recommended Video

ಇದಪ್ಪಾ ಕನ್ನಡ ಪ್ರೇಮ ಅಂದ್ರೆ...!! | Bollywood comedian dubs in Kannada..! | Filmibeat Kannada

ಬಾಲಿವುಡ್ ಖ್ಯಾತ ಹಾಸ್ಯ ನಟ ಜಾನಿ ಲೀವರ್ 'ಗರ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮೊದಲ ಸಿನಿಮಾ ಮಾಡ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಡಬ್ಬಿಂಗ್ ಆರಂಭವಾಗಿದ್ದು, ಸ್ಟುಡಿಯೋದಲ್ಲಿ ಜಾನಿ ಲೀವರ್ ಕೂಡ ಭಾಗಿಯಾಗಿದ್ದರು.

ವಿಶೇಷ ಅಂದ್ರೆ ಜಾನಿ ಲೀವರ್ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿದ್ದಾರೆ. ಮೂಲತಃ ತೆಲುಗಿನವರಾದ ಜಾನಿಲೀವರ್ ನಿರ್ದೇಶಕರು ನೀಡಿದ ಸಂಭಾಷಣೆಯನ್ನು ತಾಲೀಮು ನಡೆಸಿ ಸತತ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಏಳು ಗಂಟೆಗಳ ಕಾಲ ಕನ್ನಡ ಭಾಷೆಯಲ್ಲಿ ಧ್ವನಿ ನೀಡಿದ್ದಾರೆ.

ಇನ್ನು ಜಾನಿ ಲೀವರ್ ಅವರು ಕನ್ನಡದಲ್ಲೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದಕ್ಕೆ ನಿರ್ದೇಶಕ ಕೆ..ಆರ್.ಮುರಳಿಕೃಷ್ಣ ಹಾಗೂ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ.

Johnny Lever completed dubbing of kannada movie

ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ 'ಗರ' ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ, ಉಮಾಶಂಕರ್ ಬಾಬು ಸಂಕಲನ, ದಿನೇಶ್ ಕಲಾ ನಿರ್ದೇಶನ ಹಾಗೂ ಬಾಲಿವುಡ್ ಖ್ಯಾತಿಯ ಸರೋಜ್ ಖಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಬಿಗ್ ಬಾಸ್ ಖ್ಯಾತಿಯ ರೆಹಮಾನ್, ಆವಂತಿಕ, ಆರ್ಯನ್, ಪ್ರಶಾಂತ್ ಸಿದ್ದಿ, ರಾಮಕೃಷ್ಣ, ರೂಪಾದೇವಿ, ಮನದೀಪ್ ರಾಯ್, ತಬಲ ನಾಣಿ, ರೋಹಿತ್, ಸುನೇತ್ರ ಪಂಡಿತ್, ಸುಚಿತ್ರ, ನಿರಂಜನ್, ರಾಜೇಶ್ ರಾವ್, ಸೋನು, ದಯಾನಂದ್, ಗುರುರಾಜ್ ಕಲಾಲ್ ಬಂಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮತ್ತೊಂದು ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಜಾನಿಲೀವರ್ ಜೊತೆ ಸಾಧುಕೋಕಿಲ ಕೂಡ ಬಣ್ಣ ಹಚ್ಚಿದ್ದಾರೆ. ಸದ್ಯ, ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆದಷ್ಟೂ ಬೇಗ ನಿಮ್ಮ ಮುಂದೆ ಬರುವ ಪ್ಲಾನ್ ಮಾಡಿದೆ.

More from Filmibeat

English summary
After over 300 films as a comedian in Hindi films, Johnny Lever will be seen in a Kannada film for the first time. recently he has completed dubbing of kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X