ಜೋಷ್ ಆ್ಯಪ್‌ನಲ್ಲಿ ಕರ್ನಾಟಕದ ಏಳು ಅದ್ಭುತಗಳ ಅಭಿಯಾನ: ನೀವೂ ಭಾಗವಹಿಸಿ
ಭಾರತದ ಅತೀ ಜನಪ್ರಿಯ ಕಿರು ವಿಡಿಯೋಗಳ ಆ್ಯಪ್ ಜೋಷ್. ಇದು ಈಗಾಗಲೇ ಹಲವಾರು ಜನರ ಹೃದಯ ಗೆದ್ದಿದ್ದು, ಈಗ ವಿವಿಧ ಭಾಷೆಯಲ್ಲಿ ವೈವಿಧ್ಯಮಯ ಫ್ರೆಶ್ ಹಾಗೂ ವೈರಲ್ ಕಂಟೆಂಟ್ ಅನ್ನು ಕ್ರಿಯೇಟ್ ಮಾಡಲು ಮುಂದಾಗಿದೆ. ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ವೇದಿಕೆಯನ್ನು ನೀಡುವುದರಿಂದ ಹಿಡಿದು ಕಂಟೆಂಟ್ ರಚನೆಗಾಗಿ ಕೆಲವು ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಈ ಎಲ್ಲಾ ವಿಷಯಗಳ ಜೊತೆಗೆ, ಜೋಷ್ ಆ್ಯಪ್ ಕೂಲ್ ಆಗಿಯೇ ಕೆಲವು ಅದ್ಭುತ ಸವಾಲುಗಳನ್ನು ಹೋಸ್ಟ್ ಮಾಡುವುದರಲ್ಲಿ ಜನಪ್ರಿಯವಾಗಿದೆ.
#LightsCameraJosh: Top Josh Malayalam Creators Get Ready For The Biggest Meetup In Kochi
ಕರ್ನಾಟಕದ ಎರಡು ಜನಪ್ರಿಯ ಮಾಧ್ಯಮಳಾದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಜೊತೆ ಜೋಷ್ ಆ್ಯಪ್ '7 ವಂಡರ್ಸ್ ಆಫ್ ಕರ್ನಾಟಕ' ಎಂಬ ಅಭಿಯಾನ ಆರಂಭಿಸಿದೆ. ವೋಟ್ ಮಾಡುವ ಮೂಲಕ ರಾಜ್ಯದ ಏಳು ಅತ್ಯುತ್ತಮ ಪ್ರವಾಸೋದ್ಯಮ ಸ್ಥಳಗಳನ್ನು ಪಟ್ಟಿ ಮಾಡಲು ಮುಂದಾಗಿದೆ. ಈ ಅಭಿಯಾನಕ್ಕೆ ನಟ ರಮೇಶ್ ಅರವಿಂದ್ ಬ್ರಾಂಡ್ ಅಂಬಾಸಿಡರ್.
ಮೊದಲ ಹಂತದಲ್ಲಿಯೇ ಈ ಅಭಿಯಾನಕ್ಕೆ ಕರ್ನಾಟಕದ ಜನರಿಂದ ಅಬ್ಬರದ ಪ್ರತಿಕ್ರಿಯೆ ಸಿಕ್ಕಿತ್ತು. ಅಲ್ಲದೆ ಸಾವಿರಾರು ನಾಮಿನೇಷನ್‌ಗಳು ಬಂದಿವೆ. ಅದರಲ್ಲಿ 100 ಸ್ಥಾನಗಳನ್ನು ಶಾರ್ಟ್ ಲಿಸ್ಟ್ ಮಾಡಿ ವೋಟ್ ಮಾಡಲು ಅವಕಾಶ ನೀಡಲಾಗಿದೆ. ಇದೀಗ '7 ವಂಡರ್ಸ್ ಆಫ್ ಕರ್ನಾಟಕ' ಮೂರನೇ ಹಂತಕ್ಕೆ ತಲುಪಿದ್ದು, ಮೈಸೂರು, ಹಂಪಿ, ಶ್ರವಣಬೆಳಗೊಳದಂತಹ 49 ಸ್ಥಳಗಳನ್ನು ಸಾರ್ವಜನಿಕರು ನೀಡಿದ ಮತಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ, ಈ ಅಭಿಯಾನಕ್ಕೆ ಸುಮಾರು 78 ಲಕ್ಷ ಮತಗಳು ಸಿಕ್ಕಿವೆ.
#LightsCameraJosh: Top Malayalam Content Creators Enjoy Josh's Biggest Meetup In Kochi
ಮುಂದಿನ ಹಂತದಲ್ಲಿ, ಈ 49 ಸ್ಥಳಗಳಲ್ಲಿ 27 ಅನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅಂತಿಮ ಸುತ್ತಿನಲ್ಲಿ ಪ್ರೇಕ್ಷಕರು ನೀಡಿದ ಮತಗಳೊಂದಿಗೆ 7 ಸ್ಥಾನಗಳಿಗೆ ಫಿಲ್ಟರ್ ಮಾಡಲಾಗುತ್ತದೆ. ಈ 7 ಸ್ಥಳಗಳನ್ನು 'ಕರ್ನಾಟಕದ 7 ಅದ್ಭುತಗಳು' ಎಂದು ಘೋಷಿಸಲಾಗುತ್ತದೆ.
ಈ ಚಾಲೆಂಜ್‌ನಲ್ಲಿ ಭಾಗವಹಿಸಲು ನೀವು ಇಲ್ಲಿ ಲಾಗ್ ಇನ್ ಆಗಬಹುದು.
https://7wondersofkarnataka.com/
ಈ ಅಭಿಯಾನದಲ್ಲಿ ಒಂದೇ ಸ್ಥಳ ಅಂತಲ್ಲ. ಹಲವು ಸ್ಥಳಗಳಿಗೆ ಮತದಾನ ಮಾಡಬಹುದು. ಪ್ರತಿ ಸ್ಥಳಕ್ಕೂ ಒಂದು ಮತವನ್ನು ಚಲಾಯಿಸಬಹುದು ಎಂಬುದನ್ನು ಈ ಅಭಿಯಾನದಲ್ಲಿ ಭಾವಗವಹಿಸುವವರು ಗಮನಿಸಬೇಕು.

ಈ ಮಧ್ಯೆ, ಮೋಜ್ ಅನ್ನು ಮತ್ತಷ್ಟು ಹೆಚ್ಚಿಸಲು ಜೋಷ್ ಆ್ಯಪ್ #7wondersofkarnataka ಎಂಬ ಅದ್ಭುತ ಚಾಲೆಂಜ್ ಅನ್ನು ತಂದಿದೆ. ಅಲ್ಲಿ ಕ್ರಿಯೇಟರ್‌ಗಳು #7wondersofkarnataka ಎಂಬ ಹ್ಯಾಶ್‌ಟ್ಯಾಗ್ ಜೊತೆಗೆ ಕರ್ನಾಟಕದಲ್ಲಿ ಪ್ರಯಾಣ ಮಾಡಿದ ವಿಡಿಯೋಗಳನ್ನುಅಪ್‌ಲೋಡ್ ಮಾಡಬೇಕು. ಚಾಲೆಂಜ್ ಈಗಾಗಲೇ ಚಾಲ್ತಿಯಲ್ಲಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಅದ್ಭುತ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ ಕ್ರಿಯೇಟರ್‌ಗಳನ್ನು ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ. ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಿಗೆ ಉಚಿತ ವೋಚರ್‌ಗಳೊಂದಿಗೆ ನೀಡಲಾಗುತ್ತೆ.
ಅಂತಹ ಅದ್ಭುತ ಅಭಿಯಾನಗಳ ಭಾಗವಾಗಲು ಮತ್ತು ದೊಡ್ಡ ದೊಡ್ಡ ಬಹುಮಾನಗಳನ್ನು ಗೆಲ್ಲಲು ಬಯಸುವಿರಾ? ಹಾಗಿದ್ದರೆ, ತಕ್ಷಣ ಜೋಷ್ ಆ್ಯಪ್ ಜೊತೆ ಸೇರಿಕೊಳ್ಳಿ.


Click it and Unblock the Notifications











