'ಹೋಮ್ ಮಿನಿಸ್ಟರ್' ಉಪೇಂದ್ರ ಭೇಟಿಯಾದ ಕನ್ನಡ 'ಜೋಶ್‌' ಕ್ರಿಯೇಟರ್‌ಗಳು

ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋ ವೇದಿಕೆ 'ಜೋಶ್'. ಈ ಮನೊರಂಜನಾ ಅಪ್ಲಿಕೇಶನ್ ವಿವಿಧ ಬಗೆಯ, ವಿವಿಧ ಭಾಷೆಯ ವಿಡಿಯೋ ಕ್ರಿಯೇಟರ್‌ಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಜೊತೆಗೆ ಹಲವು ಕಾರ್ಯಕ್ರಮಗಳ ಮೂಲಕ ವಿವಿಧ ಸ್ಟಾರ್‌ಗಳನ್ನು ಭೇಟಿಯಾಗುವ ಅವಕಾಶವನ್ನೂ ಒದಗಿಸಿದೆ.

Josh Kannada Content Creators Met Real Star Upendra

ತಮ್ಮ ವಿಡಿಯೋ ಕಂಟೆಂಟ್ ಮೂಲಕ ಮಾತ್ರವೇ ಅಲ್ಲದೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಆರ್ಗನೈಜ್ ಮಾಡುವುದಕ್ಕೆ, ತನ್ನ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹತ್ತು ಹಲವು ಅವಕಾಶಗಳನ್ನು ನೀಡುವ ಕಾರ್ಯವನ್ನೂ ಮಾಡುತ್ತಾ ಬಂದಿದೆ. ಇದೀಗ 'ಜೋಶ್' ಅಪ್ಲಿಕೇಶನ್ ಕನ್ನಡ ವಿಡಿಯೋ ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ಸ್ಟಾರ್ ನಟನನ್ನು ಭೇಟಿಯಾಗುವ ವಿಶೇಷ ಅವಕಾಶವನ್ನು ಒದಗಿಸಿತ್ತು.

Josh Kannada Content Creators Met Real Star Upendra

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೊಟ್ಟಿಗೆ ಭೋಜನ ಮಾಡುವ ಅವರೊಟ್ಟಿಗೆ ಮಾತನಾಡುವ ಅವಕಾಶವನ್ನು ಜೋಶ್ ಅಪ್ಲಿಕೇಶನ್ ತನ್ನ ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ಹಮ್ಮಿಕೊಂಡಿತ್ತು. ಉಪೇಂದ್ರ ನಟನೆಯ 'ಹೋಮ್ ಮಿನಿಸ್ಟರ್' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆಯೂ ಮಾತನಾಡುವ ಅವಕಾಶ ಜೋಶ್‌ ಕಂಟೆಂಟ್ ಕ್ರಿಯೇಟರ್‌ಗಳಿಗೆ ದೊರಕಿತು. ಏಪ್ರಿಲ್ 03 ರಂದು ಈ ಕಾರ್ಯಕ್ರಮವು ಬೆಂಗಳೂರಿನ ಲಾ ಮಾರ್ವೆಲ್ಲಾನಲ್ಲಿ ನಡೆಯಿತು.

Josh Kannada Content Creators Met Real Star Upendra

ಜೋಶ್ ಅಪ್ಲಿಕೇಶನ್, ಕನ್ನಡದ ಏಳು ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳನ್ನು ಪಟ್ಟಿ ಮಾಡಿ ಉಪೇಂದ್ರ ಅವರೊಟ್ಟಿಗೆ ಮೀಟ್ ಆಂಡ್ ಗ್ರೀಟ್ ಕಾರ್ಯಕ್ರಮ ಆಯೋಜಿಸಿತ್ತು. ಏಳು ಕಂಟೆಂಟ್ ಕ್ರಿಯೇಟರ್‌ಗಳು ಅವರೊಟ್ಟಿಗೆ ತಮ್ಮ ಕುಟುಂಬದವರನ್ನೂ ಕರೆ ತಂದಿದ್ದರು. ಕನ್ನಡದ ಜನಪ್ರಿಯ ಜೋಶ್ ಕಂಟೆಂಟ್ ಕ್ರಿಯೇಟರ್‌ಗಳಾದ ವಿಜೆ ಮನೋಜ್, ಅಮೂಲ್ಯ ಗೌಡ, ಅಭಿ ಜಗ್ಗೇಶ್, ಗಿರಿ, ರವಿ ಗೌಡ, ನೇಹಾ, ವಿದ್ಯಾ ಬಿಎಸ್ ಅವರುಗಳನ್ನು ಉಪೇಂದ್ರ ಅವರ ಭೇಟಿಗೆ ಆಹ್ವಾನಿಸಿತ್ತು. ಇಷ್ಟೂ ಮಂದಿ ಕಂಟೆಂಟ್ ಕ್ರಿಯೇಟರ್‌ಗಳು ಒಟ್ಟಾಗಿ ಇನ್‌ಸ್ಟಾಗ್ರಾಂನಲ್ಲಿ 8.4 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದರೆ, ಜೋಶ್‌ನಲ್ಲಿ 5.6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

Josh Kannada Content Creators Met Real Star Upendra

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಂಟೆಂಟ್ ಕ್ರಿಯೇಟರ್‌ಗಳು ಬಹು ಸಮಯ ಉಪೇಂದ್ರ ಅವರೊಟ್ಟಿಗೆ ಮಾತನಾಡಿದರು. ಅವರೊಟ್ಟಿಗೆ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡರು. ಉಪೇಂದ್ರ ಸಹ ಖುಷಿಯಿಂದ ಕಂಟೆಂಟ್ ಕ್ರಿಯೇಟರ್‌ಗಳೊಟ್ಟಿಗೆ ವಿಡಿಯೋದಲ್ಲಿ ಕಾಣಿಸಿಕೊಂಡರು. ಇದು ಮಾತ್ರವೇ ಅಲ್ಲದೆ ಜೋಶ್‌ನ ಅಕೌಂಟ್ ಮ್ಯಾನೇಜರ್‌ಗಳ ಜೊತೆಗೂ ಜೋಶ್‌ನ ಕಾರ್ಯಾಚರಣೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು, ಜೋಶ್‌ನ ಮುಂದಿನ ಕಾರ್ಯಕ್ರಮಗಳ ಬಗ್ಗೆಯೂ ಮಾತನಾಡಿದರು. ಅಂತಿಮವಾಗಿ ಎಲ್ಲರೂ ಸಿಹಿ ನೆನಪುಗಳೊಟ್ಟಿಗೆ ಮನೆಗೆ ಮರಳಿದರು.

Josh Kannada Content Creators Met Real Star Upendra

ಈ ರೀತಿಯ ಅದ್ಧೂರಿ ಕಾರ್ಯಕ್ರಮಗಳಲ್ಲಿ ನೀವೂ ಭಾಗಿ ಆಗಬೇಕೆ, ಉಪೇಂದ್ರ ರೀತಿ ಹಲವು ಸ್ಟಾರ್ ನಟರ ಭೇಟಿ ಆಗಬೇಕೆ ಹಾಗಿದ್ದರೆ ತಡವೇಕೆ? 'ಜೋಶ್' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ, ವಿಡಿಯೋಗಳನ್ನು ಅಪ್‌ಲೋಡ್ ಮಾಡಿ.

More from Filmibeat

English summary
Josh application Kannada content creators met real star Upendra on April 03. Josh organized a meet and greet event with Upendra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X