ಭಾರಿ ಜೋಶ್ ನಲ್ಲಿ ರಾಕೇಶ್; ನಟೋರಿಯಸ್ ಶುರು

Rakesh
ಜೋಶ್ ರಾಕೇಶ್ ಈಗ ಫುಲ್ ಜೋಶ್ ನಲ್ಲಿದ್ದಾರೆ. ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ಹಾಗೂ ಲೂಸ್ ಮಾದ ಯೋಗೇಶ್ ಸಂಗಮದ 'ಯಾರೇ ಕೂಗಾಡಲಿ' ಚಿತ್ರದಲ್ಲಿ ನೆಗೆಟಿವ್ ಶೇಟ್ ಇರುವ ಪ್ರಮುಖ ಪಾತ್ರವೊಂದನ್ನು ಗಿಟ್ಟಿಸಿಕೊಂಡಿದ್ದ ರಾಕೇಶ್ ಈಗ 'ನಟೋರಿಯಸ್' ಎಂಬ ಹೊಸ ಚಿತ್ರದ ನಾಯಕರಾಗಿದ್ದಾರೆ.

ಜಿಜೆ ಎಂಬ ಹೊಸ ನಿರ್ದೇಶಕರ ಹೊಸ ಚಿತ್ರದ ಹೀರೋ ಆಗುವ ಮೂಲಕ ರಾಕೇಶ್ ಸಾಕಷ್ಟು ಕುತೂಲಹ ಕೆರಳಿಸಿದ್ದಾರೆ. 'ಜೋಶ್' ನಂತರ ಗಟ್ಟಿತನ ಇರುವ ಪಾತ್ರಕ್ಕಾಗಿ ಹುಡುಕಾಡುತ್ತಿದ್ದ ರಾಕೇಶ್, ಈಗ ಸಿಕ್ಕ ಸಿಕ್ಕ ಪಾತ್ರಘಲನ್ನು ಒಪ್ಪಿಕೊಳ್ಳದೇ ಭಾರಿ ಚೂಸಿ ಆಗಿದ್ದಾರೆ. ಈಗ ಅವರಿಷ್ಟದ ಪ್ರಕಾರವೇ ಒಳ್ಳೊಳ್ಳೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ.

ಸದ್ದಿಲ್ಲದೇ ನಿನ್ನೆ, ಅಂದರೆ 06 ಆಗಸ್ಟ್ 2012 ರಂದು ಶೂಟಿಂಗ್ ಪ್ರಾರಂಭಿಸಿರುವ 'ನಟೋರಿಯಸ್' ಚಿತ್ರಕ್ಕೆ ಗುರುರಾಜ್ ಎಂಬವರು ನಿರ್ಮಾಪಕರು. ಇದು ಅವರ ಮೊದಲ ನಿರ್ಮಾಣದ ಚಿತ್ರವಾಗಿದೆ. ರಾಕೇಶ್ ಅವರಿಗೆ ನಾಯಕಿಯಾಗಿ 'ಗ್ಲಾಮರ್ ಡಾಲ್' ಸಂಜನಾ ಇದ್ದಾರೆ. ಇದೊಂದು ಥ್ರಿಲ್ಲರ್ ಸಸ್ಪೆನ್ಸ್ ಚಿತ್ರ. ಜೊತೆಗೆ ನವಿರಾದ ಪ್ರೀತಿ-ಪ್ರೇಮ, ತಲ್ಲಣ ಹಾಗೂ ಹಾಸ್ಯ ಎಲ್ಲವೂ ಇದೆ ಎಂದಿದೆ ಚಿತ್ರತಂಡ.

ಜೋಶ್ ಮೂಲಕ ನಾಯಕನಟರಾಗಿ ಮಿಂಚಿದ ರಾಕೇಶ್, ಈಗ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಯ 'ಮಂದಹಾಸ' ಬಿಡುಗಡೆಗೆ ರೆಡಿಯಾಗಿದೆ. ಅಯೋಧ್ಯಾಪುರಂ ಚಿತ್ರೀಕರಣ ಹಂತದಲ್ಲಿದೆ ಹಾಗೂ ಅಲೆಮಾರಿ ಖ್ಯಾತಿಯ ಸಂತು ನಿರ್ದೇಶನದ ಡವ್ ಚಿತ್ರೀಕರಣಕ್ಕೆ ಸಜ್ಜಾಗಿದೆ. ಅಷ್ಟರಲ್ಲೇ ನಟೋರಿಯಸ್ ಬಳಗ ಸೇರಿ ನಾಯಕನಾಗಿ ಅಭಿನಯ ಶುರುಮಾಡಿದ್ದಾರೆ ರಾಕೇಶ್.

ಈ 'ನಟೋರಿಯಸ್' ಚಿತ್ರದ ಛಾಯಾಗ್ರಾಹಕರು ಬಾಲಿವುಡ್ ನಲ್ಲಿ ಕೆಲಸ ಮಾಡಿದ ಅನುಭವಿ ಧನುಷ್. ತಮಿಳಿನಲ್ಲಿ ಕೆಲವು ಚಿತ್ರಗಳಿಗೆ ಸಂಗೀತ ನೀಡಿರುವ ಪ್ರಭು, ನಟೋರಿಯಸ್ ಚಿತ್ರದ ಸಂಗೀತ ನಿರ್ದೇಶಕರು. ಚಿತ್ರದಲ್ಲಿ ರಾಜು ತಾಳಿಕೋಟೆ, ಸಾಧುಕೋಕಿಲ ಮುಂತಾದ ಹಿರಿಯ ಕಲಾವಿದರ ದೊಡ್ಡ ಬಳಗವೇ ಇದೆಯಂತೆ. ಈಗಾಗಲೇ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ, ವಿಭಿನ್ನ ಚಿತ್ರ ಕೊಡುವ ಹುಮ್ಮಸ್ಸಿನಲ್ಲಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Josh fame actor Rakesh upcoming 'Notorious' titled movie shooting Started on 06th August 2012. Newcomer called 'Jije' directing this movie and Sanjana is the Heroine for Rakesh. Gururaj is the producer.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X