Megha Shetty: ಕಲರ್ ಫುಲ್ ಸೀರೆಯ ಚಿಟ್ಟೆಯಾದ ನಟಿ ಮೇಘಾ ಶೆಟ್ಟಿ, ಕಿವಿ ಒಲೆ ಕಂಡು ಬೆರಗಾದ ಫ್ಯಾನ್ಸ್!
ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಕಮಾಲ್ ಮಾಡಿ ಇದೀಗ ಹಿರಿತೆರೆಯಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಮೇಘಾ ಶೆಟ್ಟಿ ಚಂದನವನದಲ್ಲಿ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿಯ ಮೂಲಕ ಅನು ಸಿರಿಮನೆ ಆಗಿ ಮಿಂಚಿದ ನಟಿ ಧಾರಾವಾಹಿ ಪ್ರೇಮಿಗಳ ಮನೆ ಮಾತಾಗಿದ್ದರು.
ನಟನೆಯಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರು ಇಲ್ಲ ಎನ್ನುವ ಹಾಗೆ ಬಹಳ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ನಟನೆಯ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಮೇಘಾ ಶೆಟ್ಟಿ ನೋಡಿದ ಅಭಿಮಾನಿಗಳಿಗೆ ಬಹಳ ಖುಷಿಯ ಸಂಗತಿ ಆಗಿದೆ. ದಿನವೂ ಕಿರುತೆರೆಯಲ್ಲಿ ಮೇಘಾ ಶೆಟ್ಟಿಯನ್ನು ನೋಡುತ್ತಿದ್ದರು. ಆದರೆ ಇದೀಗ ಸಿನಿಮಾದಲ್ಲಿ ಮೇಘಾ ಶೆಟ್ಟಿಯನ್ನು ನೋಡುತ್ತಿರುವುದು ಬಹಳ ಹೆಮ್ಮೆಯ ವಿಚಾರ.

ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ಮಿಂಚಿದ ನಟಿ
ಮೇಘಾ ಶೆಟ್ಟಿ ಹೊಸ ರೀತಿಯ ಫೋಟೋಶೂಟ್‌ಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಇದೀಗ ಕಲರ್ ಫುಲ್ ಆಗಿರುವ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆ ಕದ್ದು ಬಿಟ್ಟಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಮೇಘಾ ಶೆಟ್ಟಿ ಫೋಟೋ ನೋಡಿದ ಅಭಿಮಾನಿಗಳು ದೇವತೆ, ಸುಂದರಿ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಶೆಟ್ಟಿ ಫೋಟೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್ ಆಗಿದ್ದು ನೋಡುಗರಿಗೆ ಮತ್ತಷ್ಟು ಖುಷಿ ನೀಡುತ್ತಿದೆ.ಇ ತ್ತೀಚಿನ ಕೆಲ ದಿನಗಳಿಂದ ಕಲರ್‌ಫುಲ್ ಫೋಟೋಗಳ ಮೂಲಕವೇ ಮೇಘಾ ಶೆಟ್ಟಿ ಹೆಚ್ಚು ಸುದ್ದಿ ಮಾಡುತ್ತಿದ್ದರು. ಕಲರ್‌ಫುಲ್ ಸೀರೆಯನ್ನುಟ್ಟು, ಸರಳವಾಗಿ ಮೇಕಪ್ ಮಾಡಿಕೊಂಡಿದ್ದಾರೆ. ಜೊತೆಗೆ ಒಂದು ಕೈಗೆ ಮಾತ್ರ ಬಳೆ ತೊಟ್ಟಕೊಂಡಿದ್ದಾರೆ. ಹಾಗೆಯೇ ಹಣೆಗೆ ಬಿಂದಿಯನ್ನು ಇಟ್ಟಿಲ್ಲ. ವಿಶೇಷವಾಗಿ ಅವರು ಕಿವಿಗೆ ದೊಡ್ಡದಾದ ಓಲೆಯನ್ನೂ ಹಾಕಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಕಿವಿ ಹುಷಾರು ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ
ಹಾಗೆಯೇ ಮೇಘಾ ಶೆಟ್ಟಿಯನ್ನು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದು ಕಾಮೆಂಟ್ ಮಾಡಿದ್ದಾರೆ. ಈಗಾಗಲೇ ಮೇಘಾ ಶೆಟ್ಟಿ ಅಭಿನಯದ ತ್ರಿಬಲ್ ರೈಡಿಂಗ್ ಹಾಗೂ ದಿಲ್ ಪಸಂದ್ ಸಿನಿಮಾ ರಿಲೀಸ್ ಆಗಿದ್ದು ಗ್ರಾಮಾಯಣ, ಆಫ್ಟರ್ ಆಪರೇಷನ್ ಲಂಡನ್ ಕೆಫೆ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಗ್ರಾಮಾಯಣ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಅವರಿಗೆ ಮೇಘಾ ಶೆಟ್ಟಿ ಜೋಡಿ ಆಗುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುವ ನಟಿ
ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಸುಮಾರು 11 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಮೇಘಾ ಶೆಟ್ಟಿ ಆಗಾಗ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.


Click it and Unblock the Notifications











