ಆರ್ಯನ ಬಣ್ಣ ಬಯಲು ಮಾಡಲು ಮುಂದಾದ ಅನು!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ರಾಜನಂದಿನಿ, ಸುಭಾಷ್ ಪಾಟೀಲ್ ಕಥೆ ಅಂತ್ಯಗೊಳ್ಳುವ ಸಮಯ ಬಂದಿದೆ. ಅನು ಸಿರಿಮನೆ ನೇರವಾಗಿ ಆರ್ಯವರ್ಧನ್‌ನನ್ನು ಎಲ್ಲಾ ಪ್ರಶ್ನೆ ಮಾಡಲು ಮುಂದಾಗಿದ್ದಾಳೆ. ಹೀಗಾಗಿ ಆರ್ಯ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾನಾ..? ಇಲ್ಲವೇ ಸಮರ್ಥಿಸಿಕೊಳ್ಳುತ್ತಾನಾ ಕಾದು ನೋಡಬೇಕಿದೆ.
ಆರ್ಯ ಅನು ಜೊತೆಗೆ ಸಮಯ ಕಳೆಯಲು ಬಯಸುತ್ತಿದ್ದಾನೆ. ಹೀಗಾಗಿ ಆರ್ಯ ಆಫೀಸಿಗೂ ಹೋಗದೇ, ಅನು ಜೊತೆಗೆ ಹೊರಗೆ ಹೋಗಲು ಪ್ಲಾನ್ ಮಾಡಿದ್ದಾನೆ. ಆದರೆ ಅನು ಆರ್ಯನ ಮಾತುಗಳನ್ನು ಕೇಳುತ್ತಿಲ್ಲ. ಅವನ ಜೊತೆಗೆ ಮಾತು ಸಹ ಆಡುತ್ತಿಲ್ಲ.
ಅನು ನಡವಳಿಕೆ ಆರ್ಯನಿಗೆ ಪದೇ ಪದೇ ಬೇಸರದ ಜೊತೆಗೆ ಗೊಂದಲವನ್ನೂ ಸೃಷ್ಟಿ ಮಾಡುತ್ತಿದೆ. ಯಾಕೆ ಅನು ಹೀಗೆ ನಡೆದುಕೊಳ್ಳುತ್ತಿದ್ದೀಯಾ ಎಂದು ಕೇಳುತ್ತಾನೆ. ಅನು ಅದಕ್ಕೆ ಗರಂ ಆಗಿಯೇ ಪ್ರಶ್ನೆ ಮಾಡಲು ಶುರು ಮಾಡುತ್ತಾಳೆ.

ಆರ್ಯನನ್ನು ಪ್ರಶ್ನಿಸಿದ ಅನು!
ಅನುಗೆ ಹಳೆಯ ಸತ್ಯಗಳು ಗೊತ್ತಾಗಿ ಸುಮಾರು ಕಾಲವಾಗಿದೆ. ಆದರೆ ಆರ್ಯನಿಗೆ ಈ ವಿಚಾರ ಇನ್ನೂ ಗೊತ್ತಾಗಿಲ್ಲ. ಮನೆ ಮಂದಿಗೆಲ್ಲಾ ಅನು ಇರುವ ಸತ್ಯವನ್ನು ಹೇಳಿದ್ದಾಳೆ. ಇದೀಗ ಆರ್ಯನನ್ನು ಪ್ರಶ್ನೆ ಮಾಡಲು ಅನು ಮುಂದಾಗಿದ್ದಾಳೆ. ಆರ್ಯನ ಕೈಗೆ ಫೈಲ್ ಅನ್ನು ಇಟ್ಟು, ಆರ್ಯವರ್ಧನ್ ಬಾಯಿಂದ ಸತ್ಯ ಬಾಯಿ ಬಿಡಿಸುತ್ತಿದ್ದಾಳೆ. ಸುಭಾಷ್ ಪಾಟೀಲ್ ಬಗ್ಗೆ ನಿಮಗೆ ನನ್ನ ಬಳಿ ಸತ್ಯ ಹೇಳಬೇಕು ಎಂದು ಅನಿಸಲೇ ಇಲ್ವಾ ಎಂದು ಕೇಳುತ್ತಾಳೆ. ಆಗ ಆರ್ಯ ನಾನು ತುಂಬಾ ಸಲ ನಿನ್ನ ಬಳಿ ಸತ್ಯ ಹೇಳುವುದಕ್ಕೆ ಪ್ರಯತ್ನ ಪಟ್ಟೆ ಆದರೆ, ಅಂತಹ ಸಂದರ್ ಭ ಬರಲಿಲ್ಲ ಅಂತ ಸಮಜಾಯಿಷಿ ಕೊಡುತ್ತಾನೆ. ಆಗ ಮತ್ತೆ ಕೋಪಗೊಳ್ಳುವ ಅನು ತನ್ನ ಮನದ ರೋಷವನ್ನೆಲ್ಲಾ ಹೊರ ಹಾಕಲು ಯತ್ನಿಸುತ್ತಾಳೆ.

ಆರ್ಯನ ಫ್ಯಾಕ್ಟರಿಗೆ ಬೆಂಕಿ ಬಿತ್ತು!
ಇದೇ ಸಂದರ್ಭದಲ್ಲಿ ಶಾರದಾ ಬಂದು ವರ್ಧನ್ ಫ್ಯಾಬ್ರಿಕ್ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ ಎಂದು ಹೇಳುತ್ತಾಳೆ. ಆಗ ಫ್ಯಾಕ್ಟರಿಗೆ ಹೋಗಲು ಅನು ಹಾಗೂ ಆರ್ಯ ಸಿದ್ಧವಾಗುತ್ತಾರೆ. ಇದೇ ವೇಳೆಗೆ ಆರ್ಯ ಮೀರಾಗೆ ಕರೆ ಮಾಡುತ್ತಾನೆ. ಆಗ ಮೀರಾ ನೀವು ಬರುವ ಅವಶ್ಯಕತೆ ಏನಿಲ್ಲ ಎನ್ನುತ್ತಾಳೆ. ಮೀರಾ ಮಾತಿನಿಂದ ಉಸಿರು ಬಿಡುವ ಆರ್ಯ, ಅನು ಬಳಿ ಮಾತನಾಡಲು ಮುಂದಾಗುತ್ತಾನೆ. ಆದರೆ, ಅನು ನಾನು ಹೋಗುತ್ತೇನೆ ಎಂದು ಹೇಳಿಹೊರಡುತ್ತಾಳೆ. ಆರ್ಯ ಬೇಡ ಎಂದು ಎಷ್ಟು ಹೇಳಿದರೂ ಅನು ಕೇಳುವುದಿಲ್ಲ.

ಝೇಂಡೇಗೆ ವಾರ್ನಿಂಗ್ ಕೊಟ್ಟ ಅನು!
ಫ್ಯಾಕ್ಟರಿಗೆ ಬೆಂಕಿ ಬೀಳಲು ಝೇಂಡೇನೇ ಕಾರಣವಿರಬಹುದು ಎಂದು ಮೀರಾ ಊಹಿಸುತ್ತಾಳೆ. ವಿಷಯ ತಿಳಿಯುವ ಮೊದಲೇ ಝೇಂಡೇ ಹೇಗೆ ಅಲ್ಲಿಗೆ ಹೋದ.? ಎಲ್ಲಾ ಪ್ಲಾನ್‌ಮಾಡಿಯೇ ಹೀಗೆ ಮಾಡಿದ್ದಾನೆ ಎಂದುಕೊಳ್ಳುತ್ತಾಳೆ. ಅಲ್ಲದೇ ಝೇಂಡೇ ಮೀರಅಗೆ ಆರ್ಯ ಸರ್ ನನ್ನು ಸ್ಥಳಕ್ಕೆ ಬರಲು ಹೇಳು ಎನ್ನುತ್ತಾನೆ. ಆದರೆ ಝೇಂಡೇ ಪ್ಲಾನ್ ಕೆಡಿಸಲು ಮೀರಾ ಆರ್ಯ ಫ್ಯಾಕ್ಟರಿ ಬಳಿ ಬರದಂತೆ ನೋಡಿಕೊಳ್ಳುತ್ತಾಳೆ. ಇನ್ನು ಸ್ಥಳಕ್ಕೆ ಬಂದ ಅನು, ಝೇಂಡೇಗೆ ತರಾಟೆಯನ್ನು ತೆಗೆದುಕೊಳ್ಳುತ್ತಾಳೆ. ಝೇಂಡೇಗೆ ಮರಿಯಾದೆ ಹೋಗುವಂತೆ ಮಾತನಾಡಿ, ವಾರ್ನ್ ಮಾಡಿ ಬರುತ್ತಾಳೆ.

ರಾಜನಂದಿನಿ ಸಾವನ್ನಪ್ಪಿದ ಸ್ಥಳದಲ್ಲಿ ಅನು!
ಅನು ಈಗ ಸತ್ಯ ಶೋಧನೆಗೆ ಮುಂಧಾಗಿದ್ದಾಳೆ. ಹೀಗಾಗಿ ಅನು ರಾಜನಂದಿನಿ ಬೆಟ್ಟದ ಮೇಲಿನಿಂದ ಉರುಳಿ ಬಿದ್ದ ಜಾಗಕ್ಕೆ ಬಂದಿದ್ದಾಳೆ. ಆರ್ಯ ಫೋನ್ ಮಾಡಿ ದಯವಿಟ್ಟು ಮನೆಗೆ ಬಾ ಎಂದರೂ ಕೇಳುವುದಿಲ್ಲ. ಆರ್ಯನಿಗೆ ಕರೆ ಮಾಡಿ ನಾನು ಹೇಳಿದ ಜಾಗಕ್ಕೆ ನೀವು ಬನ್ನಿ ಎಂದು ಆರ್ಡರ್ ಮಾಡಿದ್ದಾಳೆ.


Click it and Unblock the Notifications











