'ಜೊತೆ ಜೊತೆಯಲಿ' ಮಹಾ ಟ್ವಿಸ್ಟ್ 'ಪುಟ್ಟಕ್ಕನ ಮಕ್ಕಳು' ನಟ ಕಂಠಿ ಎಂಟ್ರಿ!

ಜೊತೆ ಜೊತೆಯಲಿ ಧಾರಾವಾಹಿಯನ್ನು ನೋಡುತ್ತಿದ್ದರೆ, ಸೀರಿಯಲ್ ಮುಗಿಯುವುದು ಗ್ಯಾರೆಂಟಿ ಎಂಬಂತೆ ಕಾಣುತ್ತಿದೆ. ಯಾಕೆಂದರೆ ಈಗಾಗಲೇ ನಿನ್ನೆಯ ಎಪಿಸೋಡ್ ಪ್ರಕಾರ ಆರ್ಯವರ್ಧನ್ ಮನೆಯಿಂದ ಹೊರಗೆ ಹೊರಟಿದ್ದಾನೆ.

ಅಲ್ಲದೇ, ಅನು ಕೂಡ ತಾನು ಗರ್ಭಿಣಿ ಎಂಬ ವಿಚಾರವನ್ನು ಎಲ್ಲರಿಗೂ ಹೇಳಿ, ಮನೆಯಲ್ಲಿನ ಮೌನವನ್ನು ಹೋಗಲಾಡಿಸಲು ಮುಂದಾಗಿದ್ದಾಳೆ. ಆಫೀಸಿನ ಜವಾಬ್ದಾರಿ ಎಲ್ಲವೂ ಹರ್ಷವರ್ಧನ್ ಹೆಗಲಿಗೆ ಹೊರಿಸಲಾಗಿದೆ.

ಇನ್ನು ಕೃಷ್ಣ ಜನ್ಮಾಷ್ಟಮಿಯ ದಿನದಂದು ಆರ್ಯವರ್ಧನ್‌ಗೆ ಎಲ್ಲಾ ವಿಚಾರವನ್ನು ಹೇಳಿ, ಆರ್ಯನ ಜೊತೆಗೆ ಸಂತೋಷವಾಗಿ ಬಾಳಬೇಕು ಎಂದು ಅನು ನಿರ್ಧರಿಸಿದ್ದಾಳೆ. ಹಾಗಾಗಿ ಆರ್ಯನ ಮೇಲಿನ ಅನುಮಾನ ಆತಂಕವನ್ನು ಬಿಟ್ಟು ಬಿಡಲು ಮುಂದಾಗಿರುವ ಅನುಗೆ ದೊಡ್ಡ ಸಂಕಷ್ಟ ಬಂದಿದೆ.

ಮನೆ ಬಿಟ್ಟು ಹೋದ ಆರ್ಯ, ಅನುಗೆ ಶಾಕ್!

ಮನೆ ಬಿಟ್ಟು ಹೋದ ಆರ್ಯ, ಅನುಗೆ ಶಾಕ್!

ಮಲಗುವ ಮುನ್ನ ಅನು ಹಬ್ಬದ ದಿನ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಎಲ್ಲರಿಗೂ ಹೇಳಬೇಕು. ಆಗ ಎಲ್ಲರೂ ಖುಷಿ ಪಡುತ್ತಾರೆ. ಮತ್ತೆ ಹೊಸ ಜೀವನ ಶುರುವಾಗುತ್ತದೆ. ಎಲ್ಲಾ ಸಮಸ್ಯೆಗಳು ಮರೆತು ಹೋಗಿ ಖುಷಿಯೇ ತುಂಬಿರುತ್ತದೆ. ಎಲ್ಲರೂ ಮತ್ತೆ ಒಂದಾಗುತ್ತಾರೆ ಎಂದು ಅಂದುಕೊಂಡು ಮಲಗುತ್ತಾಳೆ. ಬೆಳಗ್ಗೆ ಬೇಗನೇ ಎದ್ದು, ಆರ್ಯ ಸರ್ ಇಲ್ಲದಿರುವುದನ್ನು ನೋಡಿ, ಎಲ್ಲಿಗೆ ಹೋದರು ಎಂದು ಕೊಳ್ಳುತ್ತಲೇ ರೆಡಿಯಾಗುತ್ತಾಳೆ. ಮೊದಲು ಆರ್ಯ ಸರ್ ಜೊತೆಗೆ ಮಾತನಾಡಬೇಕು. ಎಲ್ಲವನ್ನೂ ಹೇಳಬೇಕು ಎಂದು ಕೊಳ್ಳುತ್ತಾಳೆ. ಆದರೆ ಆರ್ಯ ಬರೆದಿಟ್ಟ ಪತ್ರ ನೋಡಿ ಶಾಕ್ ಆಗುತ್ತಾಳೆ.

ಆರ್ಯ ಹುಡುಕಿ ಹೊರಟ ಅನು!

ಆರ್ಯ ಹುಡುಕಿ ಹೊರಟ ಅನು!

ಆರ್ಯವರ್ಧನ್ ದೊಡ್ಡ ನಿರ್ಧಾರ ತೆಗೆದುಕೊಂಡು, ನಾನು ಮೊದಲಿದ್ದಲ್ಲಿಗೆ ಹೋಗಲು ತೀರ್ಮಾನ ಮಾಡಿದ್ದೇನೆ, ಎಂದು ಪತ್ರ ಬರೆದಿಟ್ಟು ಆರ್ಯ ಮನೆಯಿಂದ ಹೊರಟಿದ್ದಾನೆ. ಪತ್ರ ಓದಿದ ಅನು ಶಾಕ್ ಆಗಿ, ಏನೇ ಆದರೂ ಆರ್ಯನನ್ನು ಕರೆದುಕೊಂಡು ಬಂದೇ, ಬರುತ್ತೇನೆ ಎಂದು ನಿರ್ಧರಿಸಿ ಮನೆಯಿಂದ ಹೊರಡುತ್ತಾಳೆ. ಮೊದಲು ಏರ್‌ಪೋರ್ಟ್‌ ಕಡೆಗೆ ಹೊರಟ ಅನು, ನಂತರ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿ ಬಸ್ಸುಗಳಲ್ಲಿ ಆರ್ಯನನ್ನು ಹುಡುಕುತ್ತಾಳೆ. ಆದರೆ ಎಲ್ಲೂ ಆರ್ಯವರ್ಧನ್ ಕಾಣುವುದಿಲ್ಲ. ಯಾಕೆಂದರೆ ಆರ್ಯವರ್ಧನ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಬಸ್ ಹತ್ತಿ ಹೊರಟು ಬಿಟ್ಟಿದ್ದಾನೆ.

ಜೊತೆ ಜೊತೆಯಲಿ ಕಂಠಿ ಎಂಟ್ರಿ!

ಜೊತೆ ಜೊತೆಯಲಿ ಕಂಠಿ ಎಂಟ್ರಿ!

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್‌ಗಳು ಎದುರಾಗಿದೆ. ಈ ಕಥೆಯಲ್ಲಿ ಪುಟ್ಟಕ್ಕನ ಮಕ್ಕಳು ನಟ ಕಂಠಿ ಎಂಟ್ರಿ ಕೊಟ್ಟಿದ್ದಾನೆ. ಕಂಠಿ ಬೆಂಗಳೂರಿಗೆ ಬಂದಿದ್ದು, ಕಂಠಿಯ ಗಾಡಿಗೆ ಅನು ಅಡ್ಡ ಬರುತ್ತಾಳೆ. ಆಗ ಗಾಡಿ ನಿಲ್ಲಿಸಿದ ಕಂಠಿ ಅನು ಸಮಸ್ಯೆ ಏನು, ತಮ್ಮಿಂದದ ಏನು ಸಹಾಯ ಬೇಕು ಎಂದು ಕೇಳುತ್ತಾನೆ. ಅನು ತಮ್ಮ ಗಂಡನನ್ನು ಹುಡುಕುತ್ತಿರುವುದು ತಿಳಿದು, ಆರ್ಯವರ್ಧನ್ ಹೊರಟಿರುವ ಬಸ್‌ ಹಿಂದೆ ಜಿಪ್‌ನಲ್ಲಿ ಹೋಗಿ ಬಸ್ ಅಡ್ಡ ಗಟ್ಟುತ್ತಾನೆ ಕಂಠಿ.

ಹಳೇ ರೂಪದಲ್ಲಿ ಆರ್ಯವರ್ಧನ್!

ಹಳೇ ರೂಪದಲ್ಲಿ ಆರ್ಯವರ್ಧನ್!

ಅದೇ ಬಸ್ಸಿನಲ್ಲಿ ಆರ್ಯವರ್ಧನ್ ಇರುತ್ತಾನೆ. ಅನು ಬಸ್ಸಿನಲ್ಲಿ ಆರ್ಯನನ್ನು ಹುಡುಕುತ್ತಾಳೆ. ಆರ್ಯ ಮುಖ ಮುಚ್ಚಿಕೊಂಡು ಕುಳಿತಿರುತ್ತಾನೆ. ಅನು ಆರ್ಯನನ್ನು ಬನ್ನಿ ಸರ್ ಎಂದು ಕರೆಯುತ್ತಾಳೆ. ಎಷ್ಟು ಕರೆದರೂ ಆರ್ಯ ಸುಮ್ಮನೆ ಕುಳಿತಿರುತ್ತಾನೆ. ಅನು ಪದೆ ಪದೇ ಕರೆಯುತ್ತಾಳೆ. ಅಲ್ಲಿಗೆ ಸಂಚಿಕೆ ಮುಗಿಯುತ್ತದೆ. ಇನ್ನು ಮುಂದಿನ ಸಂಚಿಕೆಯಲ್ಲಿ ಆರ್ಯವರ್ಧನ್ ಮನೆಗೆ ಬರುವ ದೃಶ್ಯ ತೋರಿಸಲಾಗಿದೆ. ಇನ್ನು ಆರ್ಯವರ್ಧನ್ ಮುಂದಿನ ನಿರ್ಧಾರ ಏನು ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Jothe Jotheyali Serial Writen Update On August 25th, New Hero Enty With Anu, KNow More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X