»   » ಸುದೀಪ್ ಸಂದರ್ಶನದಲ್ಲಿ ಶಿವಣ್ಣನ ಫೋಟೋ ತೆಗೆದುಹಾಕಿದ್ರಾ? ಅಸಲಿಗೆ ನಡೆದದ್ದೇನು?

ಸುದೀಪ್ ಸಂದರ್ಶನದಲ್ಲಿ ಶಿವಣ್ಣನ ಫೋಟೋ ತೆಗೆದುಹಾಕಿದ್ರಾ? ಅಸಲಿಗೆ ನಡೆದದ್ದೇನು?

Posted By:
Subscribe to Filmibeat Kannada

ವಿವಾದಗಳು ಯಾವಾಗ ಹೇಗೆ ಹುಟ್ಟಿಕೊಳ್ತಾವೋ, ಹೇಳುವುದೇ ಕಷ್ಟ. ಎಷ್ಟೇ ಜಾಗರೂಕತೆ ವಹಿಸಿದರೂ, ಕಣ್ಣಳತೆ ಮೀರಿ ನಡೆಯುವ ಕೆಲ ಅಚಾತುರ್ಯಗಳು ವಿವಾದ ಸೃಷ್ಟಿಸಿ ಬಿಡುತ್ತೆ. ಮನಸ್ಸಲ್ಲಿ ಕಲ್ಮಶ ಇಲ್ಲದಿದ್ದರೂ, ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಸದ್ಯ ಕಿಚ್ಚ ಸುದೀಪ್ ಹಾಗೂ ಪತ್ರಕರ್ತ ಜೋಗಿ ರವರಿಗೆ ಎದುರಾಗಿರುವ ಸನ್ನಿವೇಶ ಇಂಥದ್ದೇ.!

ಹಿರಿಯ ಹಾಗೂ ಖ್ಯಾತ ಪತ್ರಕರ್ತ ಜೋಗಿ ಅವರು 'ಓಪನ್ ಹೌಸ್ ವಿತ್ ಸುದೀಪ್' ಎಂಬ ಹೆಸರಿನಲ್ಲಿ ಕಿಚ್ಚ ಸುದೀಪ್ ಅವರನ್ನ ಸಂದರ್ಶನ ಮಾಡಿದ್ದರು. ಈ ಕಾರ್ಯಕ್ರಮ ಇತ್ತೀಚೆಗಷ್ಟೇ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಪ್ರಸಾರ ಆಗಿತ್ತು. ಕನ್ನಡ ಚಿತ್ರರಂಗದ ಕೆಲ ವಿಷಯಗಳ ಕುರಿತಾಗಿ ಇದೇ ಸಂದರ್ಶನದಲ್ಲಿ ಸುದೀಪ್ ಮನಬಿಚ್ಚಿ ಮಾತನಾಡಿದ್ದರು.

ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಂದರ್ಶನ ಇದೀಗ ವಿವಾದಕ್ಕೂ ಸಿಲುಕಿದೆ. 'ಓಪನ್ ಹೌಸ್ ವಿತ್ ಸುದೀಪ್' ಕಾರ್ಯಕ್ರಮದ ಎರಡನೇ ಭಾಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಫೋಟೋ ಮಿಸ್ ಆಗಿರುವುದು ವಿವಾದದ ಕೇಂದ್ರ ಬಿಂದು. ಅಷ್ಟಕ್ಕೂ, ನಡೆದದ್ದು ಏನು ಎಂಬುದರ ಬಗ್ಗೆ ಸ್ವತಃ ಪತ್ರಕರ್ತ ಜೋಗಿ ತಮ್ಮ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಂಪೂರ್ಣ ವಿವರ ಫೋಟೋ ಸ್ಲೈಡ್ ಗಳಲ್ಲಿ....

ಏನಿದು 'ಶಿವಣ್ಣ'ನ ಫೋಟೋ ವಿವಾದ.?

'ಓಪನ್ ಹೌಸ್ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಫೋಟೋ ಸೇರಿದಂತೆ ಕನ್ನಡ ಚಿತ್ರರಂಗದ ನಾಯಕ ನಟರ ಫೋಟೋಗಳು ಸುದೀಪ್ ಕುಳಿತಿದ್ದ ಹಿಂಬದಿಯ ಗೋಡೆ ಮೇಲೆ ಹಾಕಲಾಗಿತ್ತು. 'ಓಪನ್ ಹೌಸ್ ವಿತ್ ಸುದೀಪ್' ಕಾರ್ಯಕ್ರಮದ ಮೊದಲಾರ್ಧದಲ್ಲಿ ಶಿವರಾಜ್ ಕುಮಾರ್ ರವರ ಫೋಟೋ ಕಾಣಿಸುತ್ತಿತ್ತು. ಆದ್ರೆ, ಎರಡನೇ ಭಾಗದಲ್ಲಿ ಆ ಫೋಟೋ ಇರಲಿಲ್ಲ. ಹೀಗಾಗಿ ಸಂದರ್ಶನದಲ್ಲಿ ಶಿವಣ್ಣ ರವರ ಫೋಟೋನ ತೆಗೆದುಹಾಕಲಾಗಿದೆ ಎಂಬ ವಿವಾದ ಸೃಷ್ಟಿಯಾಯ್ತು.

ಅಷ್ಟಕ್ಕೂ ನಡೆದದ್ದೇನು.?

'ಓಪನ್ ಹೌಸ್ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ರವರ ಫೋಟೋನ ಯಾರೂ ತೆಗೆದು ಹಾಕಿಲ್ಲ. ಕಾರ್ಯಕ್ರಮದ ಎರಡನೇ ಭಾಗದಲ್ಲಿ ಶಿವಣ್ಣ ರವರ ಫೋಟೋ ಮಿಸ್ ಆಗಿರುವುದರ ಬಗ್ಗೆ ಪತ್ರಕರ್ತ ಜೋಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವುದು ಹೀಗೆ....

ಜೋಗಿ ನೀಡಿರುವ ಸ್ಪಷ್ಟನೆ

''ನಿಜವಾಗಿಯೂ ನಡೆದದ್ದೇನೆಂದರೆ, ಈ ಕಾರ್ಯಕ್ರಮಕ್ಕೋಸ್ಕರ ಸುದೀಪ್ ಅವರೇ ಸ್ವತಃ ನಿಂತು ಎಲ್ಲಾ ಕಲಾವಿದರ, ಸಹನಟರ, ನಾಯಕ ನಟರ ಫೋಟೋಗಳನ್ನು ಹಿಂಬದಿಯ ಗೋಡೆಯ ಮೇಲೆ ಅಂಟಿಸುವ ವ್ಯವಸ್ಥೆ ಮಾಡಿದ್ದರು'' - ಜೋಗಿ, ಪತ್ರಕರ್ತ

ಸುದೀಪ್ ಆಶಯ

''ಚಿತ್ರರಂಗ ಅಂದರೆ ನಾನೊಬ್ಬನೇ ಅಲ್ಲ. ಎಲ್ಲರೂ ಸೇರಿಯೇ ಚಿತ್ರೋದ್ಯಮ ಆಗುವುದು ಎಂಬುದು ಅವರ ನಂಬಿಕೆಯಾಗಿತ್ತೆಂದು ಕಾಣುತ್ತದೆ. ಅದಕ್ಕೋಸ್ಕರ ಎಲ್ಲರೂ ತನ್ನ ಜೊತೆಗಿರಬೇಕು ಎಂಬುದೇ ಅವರ ಆಶಯವಾಗಿತ್ತು'' - ಜೋಗಿ, ಪತ್ರಕರ್ತ

ಗಮನಿಸಲೇ ಇಲ್ಲ

''ಹಾಗೆ ಅಂಟಿಸಿದ ಫೋಟೋಗಳ ಪೈಕಿ ಎರಡೋ ಮೂರೋ ಫೋಟೋಗಳು ಕಾರ್ಯಕ್ರಮದ ನಡುವೆ ಬಿದ್ದು ಹೋದವು. ಅವುಗಳನ್ನು ನಮ್ಮ ಹುಡುಗರು ಅಂಟಿಸಲು ಯತ್ನಿಸಿದರೂ ಅವು ಮತ್ತೆ ಮತ್ತೆ ಬಿದ್ದು ಹೋಗುತ್ತಿದ್ದವು. ಹೀಗಾಗಿ ಅವುಗಳನ್ನು ಪಕ್ಕಕ್ಕಿಟ್ಟು ಕಾರ್ಯಕ್ರಮ ಮುಂದುವರಿಸಿದೆವು. ಹಾಗೆ ಬಿದ್ದದ್ದು ಯಾರ ಫೋಟೋ ಅನ್ನುವುದನ್ನು ನಾವ್ಯಾರೂ ಗಮನಿಸಲೇ ಇಲ್ಲ'' - ಜೋಗಿ, ಪತ್ರಕರ್ತ

ಎಚ್ಚರದಿಂದ ಇರಬೇಕಿತ್ತು

''ಆದರೆ ವೀಕ್ಷಕರು ಎಷ್ಟು ಸೂಕ್ಷ್ಮವಾಗಿ ನೋಡುತ್ತಾರೆ ಅನ್ನುವುದಕ್ಕೆ ಈ ಟ್ರೋಲ್ ಸಾಕ್ಷಿ. ಸಣ್ಣ ಸಣ್ಣ ವಿವರಗಳೂ ಅವರ ಕಣ್ಣಿಗೆ ಬೀಳುತ್ತವೆ ಅಂತ ಗೊತ್ತಾದ ಮೇಲೆ ನಾವೆಷ್ಟು ಎಚ್ಚರದಿಂದ ಇರಬೇಕು ಅನ್ನುವುದನ್ನು ಈ ಟ್ರೋಲ್ ತೋರಿಸಿಕೊಟ್ಟಿತು'' - ಜೋಗಿ, ಪತ್ರಕರ್ತ

Sudeep React Those Who Talk Bad About Him on Twitter | Filmibeat Kannada

ಉದ್ದೇಶಪೂರ್ವಕ ಅಲ್ಲ

''ಇದು ಉದ್ದೇಶ ಪೂರ್ವಕ ಅಲ್ಲ ಎಂದು ಹೇಳುತ್ತಾ, ಪ್ರತಿಯೊಂದು ಕಾರ್ಯಕ್ರಮವನ್ನೂ ಅತೀವ ಶ್ರದ್ಧೆಯಿಂದ ನೋಡುವ ಎಲ್ಲರಿಗೂ ವಂದನೆಗಳನ್ನು ಹೇಳುತ್ತಿದ್ದೇನೆ'' - ಜೋಗಿ, ಪತ್ರಕರ್ತ

English summary
Journalist Jogi gives clarification about Shiva Rajkumar photo controversy in 'Open House with Sudeep' Talk show
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada