'ನವರಸ ನಾಯಕನ ನಾಲ್ಕು ಹೆಜ್ಜೆ' ಹೆಸರಿನಲ್ಲಿ ಜಗ್ಗೇಶ್ ಆತ್ಮಕಥೆ

ಸುಮಾರು ನಾಲ್ಕು ದಶಕದಿಂದ ಸಿನಿಮಾರಂಗದಲ್ಲಿ ಕಲಾಸೇವೆ ಮಾಡಿಕೊಂಡು ಬಂದಿರುವ ನವರಸ ನಾಯಕ ಜಗ್ಗೇಶ್ ಅವರ ಜೀವನ ಅನೇಕರಿಗೆ ಸ್ಫೂರ್ತಿ. ಅವಕಾಶಕ್ಕಾಗಿ, ಒಂದು ಹೊತ್ತಿನ ಊಟಕ್ಕಾಗಿಯೂ ಕಷ್ಟ ಪಟ್ಟ ದಿನಗಳು ಅವರ ಬಾಳಲ್ಲಿ ಇದೆ.

ಈ ಬಗ್ಗೆ ಸ್ವತಃ ಅವರೇ ಅನೇಕ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಟಿವಿ ಕಾರ್ಯಕ್ರಮ ಅಥವಾ ಟ್ವಿಟ್ಟರ್ ಹೀಗೆ ಒಂದಲ್ಲ ಒಂದು ಕಡೆ ತಾವು ನಡೆದ ಬಂದ ಹಾದಿಯ ಬಗ್ಗೆ ಅಭಿಮಾನಿಗಳಿಗೆ ಹೇಳುತ್ತಿರುತ್ತಾರೆ.

ಜಗ್ಗೇಶ್ ಅವರ ಕಥೆ ಕೇಳಿದ ಅನೇಕರಿಗೆ 'ಯಾಕೆ ಜಗ್ಗೇಶ್ ಅವರು ಆತ್ಮಕಥೆ ಬರೆಯಬಾರದು' ಎಂಬ ಪ್ರಶ್ನೆಯೂ ಬಂದಿರಬಹುದು. ಬಹುಶಃ ಅಂತಹ ಯೋಚನೆ ಸ್ವತಃ ಜಗ್ಗೇಶ್ ಅವರಿಗೂ ಬಂದಿದ್ರೂ ಅಚ್ಚರಿಯಿಲ್ಲ.

Journalist tunga renuka writing a autobiography on jaggesh

ಇದೀಗ, ಜಗ್ಗೇಶ್ ಅವರ ಆತ್ಮಕಥೆ ಸಿದ್ಧವಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಖುದ್ದು ಜಗ್ಗೇಶ್ ಅವರೇ ಮಾಹಿತಿ ನೀಡಿದ್ದಾರೆ. ಹೀಗೆ, ಅಭಿಮಾನಿಯೊಬ್ಬರು 'ಆತ್ಮಕತೆಯ ರೂಪದಲ್ಲಿ ನಿಮ್ಮ ಜೀವನ ಹೊರತರಬಹುದಲ್ಲವೇ???' ಎಂದು ಕೇಳಿದ್ದಾರೆ.

ಇವರಿಗೆ ಉತ್ತರಿಸಿರುವ ನಟ ಜಗ್ಗೇಶ್ ''ನನ್ನ ಬದುಕು ನನಗೆ ಶ್ರೇಷ್ಠ.. ನನ್ನ ಆತ್ಮಕಥೆ ತುಂಗರೇಣುಕ ಪತ್ರಕರ್ತೆ ಬರೆದಿದ್ದಾರೆ ಅದರ ಶೀರ್ಷಿಕೆ #ನವರಸನಾಯಕನ ನಾಲ್ಕು ಹೆಜ್ಜೆ.. ಎಂದು ನಿರೀಕ್ಷಿಸಿರಿ ಅತಿ ಶೀಘ್ರದಲ್ಲಿ.. ಅದರಲ್ಲಿ ನಾನು ನನ್ನ ಬದುಕು.. ನಾನು ನಡೆದು ಬಂದ ದಾರಿ ಮಾತ್ರ ಉಲ್ಲೇಖ..'' ಎಂದು ತಮ್ಮ ಕುರಿತು ಆತ್ಮಕಥೆ ಬರುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಗ್ಗೇಶ್ ಅವರ ಈ ಆತ್ಮಕತೆಯಲ್ಲಿ ಯಾವೆಲ್ಲ ಕಥೆಗಳು, ಗೊತ್ತಿಲ್ಲದ ವಿಚಾರಗಳು, ಸಿನಿಮಾ ಜರ್ನಿ, ಖಾಸಗಿ ಜೀವನದ ಅಂಶಗಳು, ರಾಜಕೀಯ ಹೀಗೆ ಏನೆಲ್ಲ ಇರಬಹುದು ಎಂಬ ಕುತೂಹಲ ಹುಟ್ಟಿಕೊಂಡಿದೆ.

More from Filmibeat

English summary
Journalist tunga renuka writing a autobiography on kannada actor jaggesh in the name of 'navarasa nayaka nalku hejje'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X