For Quick Alerts
  ALLOW NOTIFICATIONS  
  For Daily Alerts

  ಅಪ್ಪನ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಜೂ. ಚಿರು

  |

  ನಟ ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ಇಂದು ರಿಲೀಸ್ ಆಗಿದೆ. ಚಿರು ಇಲ್ಲದಿದ್ದರೂ ಅವರ ಸಿನಿಮಾಗಳ ಮೇಲಿನ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಸದ್ಯ ರಿಲೀಸ್ ಆಗಿರುವ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆೆ.

  ಜೂ.ಚಿರು ರಿಲೀಸ್ ಮಾಡಿದ ಟ್ರೈಲರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Filmibeat Kannada

  ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ರಿಲೀಸ್ ನ ವಿಶೇಷ ಎಂದರೆ ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡುತ್ತಿದ್ದಾರೆ. ಹೌದು ಅದು ಮತ್ಯಾರು ಅಲ್ಲ ಚಿರಂಜೀವಿ ಮತ್ತು ಮೇಘನಾ ರಾಜ್ ಮುದ್ದಿನ ಪುತ್ರ ಜೂ.ಚಿರು. ಪುಟ್ಟ ಪೋರ ಜೂ.ಚಿರು ಅಪ್ಪನ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದಾನೆ.

  ಅಮ್ಮನ ತೋಳಲ್ಲಿ ಜೂನಿಯರ್ ಚಿರು: ಮುದ್ದುಕಂದನ ಮೊದಲ ಚಿತ್ರ ಇಲ್ಲಿದೆಅಮ್ಮನ ತೋಳಲ್ಲಿ ಜೂನಿಯರ್ ಚಿರು: ಮುದ್ದುಕಂದನ ಮೊದಲ ಚಿತ್ರ ಇಲ್ಲಿದೆ

  ಇಂದು ಸಿನಿಮಾದ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ನಟಿ ಮೇಘನಾ ರಾಜ್ ಮಗನನ್ನು ಕೂರಿಸಿಕೊಂಡು ಟ್ರೈಲರ್ ರಿಲೀಸ್ ಮಾಡಿದ್ದಾರೆ. ಟ್ರೈಲರ್ ಬಿಡುಗಡೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ರೈಲರ್ ನೋಡಿ ಮೇಘನಾ ಮೆಚ್ಚಿಕೊಂಡ ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಬಗ್ಗೆ ಹೇಳಿದ್ದಾರೆ.

  'ಈ ಸಿನಿಮಾ ಚಿರುಗೆ ತುಂಬಾ ಮನಸ್ಸಿಗೆ ಹತ್ತಿರವಾದ ಚಿತ್ರ. ವಿಶೇಷವಾದ ಸಿನಿಮಾ ಅಂತ ಅಂದುಕೊಂಡಿದ್ದ ಸಿನಿಮಾ. ಬೇರೆಲ್ಲ ಸಿನಿಮಾಗಳಿಗಿಂತ ವಿಶೇಷವಾಗಿದೆ. ನಮಗೆ ಚಿರು ಅವರನ್ನು ಈ ಪಾತ್ರದಲ್ಲಿ ನೋಡಿ ಇಷ್ಟಪಟ್ಟಿದ್ದೀವಿ. ಅಪ್ಪನಿಗೋಸ್ಕರ, ಅಪ್ಪನಿಗಾಗಿ ಸಿನಿಮಾತಂಡಕ್ಕಾಗಿ ನನ್ನ ಮಗ ಈ ಟ್ರೈಲರ್ ಲಾಂಚ್ ಮಾಡುತ್ತಿದ್ದಾನೆ' ಎಂದು ಹೇಳಿದ್ದಾರೆ.

  ಚಿತ್ರದ ಟ್ರೈಲರ್ ಲಾಂಚ್ ಬಗ್ಗೆ ನಿರ್ದೇಶಕ ರಾಮ್ ನಾರಾಯಣ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಚಿರು ಪುತ್ರನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ವೀಡಿಯಾದಲ್ಲಿ ಪೋಸ್ಟ್ ಮಾಡಿ, ಜೂ ಚಿರು ಟ್ರೈಲರ್ ರಿಲೀಸ್ ಮಾಡುತ್ತಿರುವುದಾಗಿ ಹೇಳಿದ್ದರು. ಬಹುಶಃ ಇದೇ ಮೊದಲಬಾರಿಗೆ ಪುಟ್ಟ ಮಗು ಟ್ರೈಲರ್ ರಿಲೀಸ್ ಮಾಡುತ್ತಿರುವುದು ಎಂದಿದ್ದರು.

  ಚಿರು ಇಲ್ಲದಿದ್ದರೂ ಚಿರು ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಟ್ರೈಲರ್ ಗೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಧ್ವನಿ ಕೂಡ ಸಿನಿಮಾದಲ್ಲಿ ಇದೆ. ಸದ್ಯ ಮಗನ ಕೈಯಿಂದ ಲಾಂಚ್ ಆಗಿರುವ ಟ್ರೈಲರ್ ಪೊಗರು ಸಿನಿಮಾದ ಜೊತೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.

  English summary
  Jr. Chiru launch Chiranjeevi Sarja starrer Rajamarthanda movie trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X