»   » ನಟ ಜೂನಿಯರ್ ಎನ್ಟಿಆರ್ ಆಧಾರ್ ಕಾರ್ಡ್ ಲಭ್ಯ

ನಟ ಜೂನಿಯರ್ ಎನ್ಟಿಆರ್ ಆಧಾರ್ ಕಾರ್ಡ್ ಲಭ್ಯ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಆಧಾರ್ ಕಾರ್ಡ್ ಪಡೆಯುವುದು ಪ್ರತಿಯೊಬ್ಬ ಶ್ರೀಸಾಮಾನ್ಯನ ಹಕ್ಕು. ಯಾವುದೇ ಲಿಂಗಭೇಧ, ವಯಸ್ಸಿನ ಮಿತಿಯಿಲ್ಲದೆ ದೇಶದ ಪ್ರತಿಯೊಬ್ಬರೂ ಇದನ್ನು ಉಚಿತವಾಗಿ ಪಡೆಯಬಹುದು. ಸರ್ಕಾರದ ಯೋಜನೆಗಳಿಗೆ ಇದು ಉಪಯುಕ್ತವಾಗಲಿದೆ.

ಆಧಾರ್ ಕಾರ್ಡ್ ಗಾಗಿ ಎಷ್ಟು ಮಂದಿ ಸಿನಿಮಾ ತಾರೆಗಳು ನೋಂದಾಯಿಸಿಕೊಂಡಿದ್ದಾರೋ ಏನೋ ಗೊತ್ತಿಲ್ಲ. ಆದರೆ ತೆಲುಗು ನಟ ಜೂನಿಯರ್ ಎನ್ಟಿಆರ್ ಮಾತ್ರ ಆಧಾರ್ ಕಾರ್ಡನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಡ್ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

Jr. NTR Aadhar card

ತಮ್ಮ ಅಭಿಮಾನಿಗಳಿಗಾಗಿಯೇ ಆಧಾರ್ ಕಾರ್ಡನ್ನು ಜೂ.ಎನ್ಟಿಆರ್ ಬಹಿರಂಗ ಮಾಡಿದ್ದಾರೆ ಎನ್ನುತ್ತವೆ ಮೂಲಗಳು. ಈ ಕಾರ್ಡ್ ನಲ್ಲಿ ಎನ್ಟಿಅರ್ ಗಾರು ಹೈದರಾಬಾದ್ ವಿಳಾಸವನ್ನು ಕೊಟ್ಟಿದ್ದಾರೆ. ತಮ್ಮ ತಂದೆಯ ಹೆಸರನ್ನು ನಂದಮೂರಿ ಹರಿಕೃಷ್ಣ ಎಂದು ನೋಂದಾಯಿಸಿದ್ದಾರೆ.

ಇನ್ನು ಆಧಾರ್ ಕಾರ್ಡ್ ಬಗ್ಗೆ ಸರಳವಾಗಿ ಹೇಳಬೇಕೆಂದರೆ...ಆಧಾರ್ ಒಂದು ಯೂನಿಕ್ ಐಡೆಂಟಿಟಿ ಕಾರ್ಡ್ ಅಗಿದೆ. ಒಬ್ಬ ವ್ಯಕ್ತಿ ಎಲ್ಲೇ ಹೋದರೂ ಅವರನ್ನು ಈ ಆಧಾರ್ ಕಾರ್ಡ್ ಮೂಲಕ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.

ಇದು 12 ಅಂಕಿಗಳುಲ್ಲ ಒಂದು ಕಾರ್ಡ್. ಇದನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದ್ದು ಜನರು ಯಾವುದೇ ಶುಲ್ಕ ನೀಡಬೇಕಿಲ್ಲ. ಪ್ರತಿಯೊಬ್ಬ ವಿಶಿಷ್ಟ ವಿಚಾರಗಳ ಮೇಲೆ ಇದನ್ನು ನೀಡಲಾಗುತ್ತಿದೆ. ಇದಕ್ಕೆ ಎರಡು ಕೈ ಬೆರಳುಗಳ ರೇಖೆಗಳು, ಕಣ್ಣಿನ ಅಕ್ಷಿಪಟಲ ಚಿತ್ರ ಸಂಗ್ರಹಿಸಲಾಗುವುದು.

ಸಾಮಾನ್ಯ ಪ್ರಜೆಗಳು ಮಾತ್ರವಲ್ಲ, ನಮ್ಮ ದೇಶದಲ್ಲಿ ಕನಿಷ್ಠ 180 ದಿನಗಳ ವಾಸವಾಗಿರುವ ನಿವಾಸಿಗಳಿಗೂ ಇದನ್ನು ನೀಡಲಾಗುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ತಪ್ಪದೆ ಪಡೆಯಬಹುದು.

English summary
Tollywood young actor Jr NTR's Aadhar card appeared on the Internet. Young Tiger NTR starrer Ramayya Vastavayya is currently in its final schedule shooting and the film is slated for end September release.
Please Wait while comments are loading...