»   » 'ಟೆಂಪರ್' ರೈಸ್ ಆದ ಜೂ.ಎನ್.ಟಿ.ಆರ್ ಮಾಡಿದ್ದೇನು?

'ಟೆಂಪರ್' ರೈಸ್ ಆದ ಜೂ.ಎನ್.ಟಿ.ಆರ್ ಮಾಡಿದ್ದೇನು?

Posted By:
Subscribe to Filmibeat Kannada

ರೀಲ್ ಮೇಲೆ ಅಬ್ಬರಿಸುವ ಜೂ.ಎನ್.ಟಿ.ಆರ್ ರಿಯಲ್ಲಾಗೂ ಅಬ್ಬರಿಸಿದ್ರೆ ಹೇಗಿರುತ್ತೆ? ಪಿತ್ತ ನೆತ್ತಿಗೇರಿದ್ರೆ ಯಂಗ್ ಟೈಗರ್ ಮುಂದೆ ಯಾರಾದ್ರೂ ಬದುಕುವುದುಂಟಾ? ಮೊದಲೇ ರಭಸದಿಂದ ಬರುವ ನಂದಮೂರಿ ಕುಟುಂಬದ ಕುಡಿಗೆ ಟೆಂಪರ್ ರೇಸ್ ಆದ್ರೆ ಹೇಗಿರ್ಬಹುದೋ ಗೊತ್ತಿಲ್ಲ. ಯಾಕಂದ್ರೆ, ಅದರ ದರ್ಶನವಿನ್ನೂ ಯಾರಿಗೂ ಆಗಿಲ್ಲ. ಆಗುವುದು ಬೇಡ ಬಿಡಿ.

ಜೂ.ಎನ್.ಟಿ.ಆರ್ 'ಟೆಂಪರ್' ಬಗ್ಗೆ ನಾವಿಷ್ಟೆಲ್ಲಾ ಹೇಳುತ್ತಿರುವುದಕ್ಕೆ ಕಾರಣ ಅವರ ಹೊಸ ಸಿನಿಮಾ 'ಟೆಂಪರ್'. ಜೂ.ಎನ್.ಟಿ.ಆರ್ ಗೆ ಹೇಳಿಮಾಡಿಸಿದ ಹಾಗಿದೆ ಈ ಟೆಂಪರ್ ಅನ್ನುವ ಟೈಟಲ್. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ರೆಡಿಯಾಗುತ್ತಿರುವ 'ಟೆಂಪರ್' ಸಿನಿಮಾದಲ್ಲಿ ಯಂಗ್ ಟೈಗರ್ ಹೇಗೆ ಕಾಣ್ತಾರೆ ಗೊತ್ತಾ?

Jr.NTR1

ಗುಂಡುಗುಂಡಾಗಿದ್ದ ಜೂ.ಎನ್.ಟಿ.ಆರ್ ಇದೀಗ ಹಿಂದಿಗಿಂತಲೂ ಸಖತ್ ಸ್ಲಿಮ್ ಅಂಡ್ ಟ್ರಿಮ್ ಆಗಿದ್ದಾರೆ. ಹಗಲು ರಾತ್ರಿ ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿರುವ ಜೂ.ಎನ್.ಟಿ.ಆರ್ 'ಟೆಂಪರ್' ಚಿತ್ರಕ್ಕೋಸ್ಕರ ತಾಳಿರುವ ರೂಪ ಇದು. ಸಲ್ಮಾನ್ ಖಾನ್ ರೇಂಜಿಗೆ ಶರ್ಟ್ ಬಿಚ್ಚಿ ಪೋಸ್ ಕೊಟ್ಟಿರುವ ಮರಿ ಹುಲಿ, 'ಟೆಂಪರ್' ಸಿನಿಮಾದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದು ಸ್ಪಷ್ಟವಾಗಿದೆ.

'ಬಾದ್ ಷಾ' ಮತ್ತು 'ಬೃಂದಾವನ' ಚಿತ್ರಗಳ ನಂತ್ರ ಜೂ.ಎನ್.ಟಿ.ಆರ್ ಗೆ 'ಟೆಂಪರ್' ಚಿತ್ರದಲ್ಲಿ ಮತ್ತೆ ಜೋಡಿಯಾಗಿರುವುದು ಕಾಜಲ್ ಅಗರ್ ವಾಲ್. ಈಗಾಗಲೇ ಬಿರುಸಿನಿಂದ ಚಿತ್ರೀಕರಣ ನಡೆಸುತ್ತಿರುವ 'ಟೆಂಪರ್' ಸಿನಿಮಾ ಸಂಕ್ರಾಂತಿ ಹೊತ್ತಿಗೆ ತೆರೆಗೆ ಬರಲಿದೆ.

Jr.NTR2

''ಟೆಂಪರ್ ಚಿತ್ರದಲ್ಲಿ ನನ್ನ ರೂಪಾಂತರ ನೋಡುತ್ತೀರಿ'', ಅಂತ ಹಿಂದೊಮ್ಮೆ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದ ಜೂ.ಎನ್.ಟಿ.ಆರ್ ಇದೀಗ ಆಡಿದ ಮಾತನ್ನ ಉಳಿಸಿಕೊಂಡಿದ್ದಾರೆ. ಇಷ್ಟಕ್ಕೆ ಎಲ್ಲಾ ಮುಗೀತು ಅಂದುಕೊಳ್ಳುವಹಾಗಿಲ್ಲ. ಸಿನಿಮಾ ತೆರೆಗೆ ಬರೋದಿನ್ನೂ ಬಾಕಿ ಇದೆ.

Read in English: Jr. NTR Goes Shirtless?
English summary
Jr.NTR's brand new six pack look in his upcoming movie Temper is out. Puri Jagannadh is directing this movie and Kajal Aggarwal is roped in to play opposite to Jr.NTR for the third time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada