ವಿದ್ಯುತ್ ಸ್ಪರ್ಷಿಸಿ ಜೂ.ರವಿಚಂದ್ರನ್ ಸಾವು

ರವಿಚಂದ್ರನ್ ಅವರನ್ನು ಹೋಲುತ್ತಿದ್ದ ತುಮಕೂರಿನ ಆರ್ಕೆಸ್ಟ್ರಾ ಕಲಾವಿದ ಲಕ್ಷ್ಮಿ ನಾರಾಯಣ ಅಲಿಯಾಸ್ಜೂ ರವಿಚಂದ್ರನ್ ವಿದ್ಯುತ್ ಸ್ಪರ್ಷದಿಂದ ಸಾವನ್ನಪ್ಪಿದ್ದಾರೆ.

ಜೂ ರವಿಚಂದ್ರನ್ ಎಂದೇ ಖ್ಯಾತರಾಗಿದ್ದ ಲಕ್ಷ್ಮಿ ನಾರಾಯಣ್ ಕುಣಿಗಲ್ ತಾಲ್ಲೂಕಿನ ಹೆರೂರು ಗ್ರಾಮದವರಾಗಿದ್ದರು. ಮಂಗಳವಾರದಂದು ಸಂಪ್‌ಗೆ ನೀರು ತುಂಬಿಸಲು ಮೋಟಾರ್ ಚಾಲು ಮಾಡಿದಾಗ ವಿದ್ಯುತ್ ಪ್ರವಹಿಸಿ ಲಕ್ಷ್ಮಿ ನಾರಾಯಣ್ ಅಸುನೀಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.

Recommended Video

Jr Ravichandran | ಜೂ.ರವಿಚಂದ್ರನ್ ಸಾವಿಗೆ ಕಂಬನಿ ಮಿಡಿದ ಅಭಿಮಾನಿಗಳು | Kunigal Lakshmi Narayana

ಲಕ್ಷ್ಮಿ ನಾರಾಯಣ್ ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡುತ್ತಿದ್ದರು. ನೋಡಲು ರವಿಚಂದ್ರನ್ ಅವರಂತೆ ಕಾಣುತ್ತಿದ್ದ ಅವರಿಗೆ ಒಳ್ಳೆಯ ಜನಪ್ರಿಯತೆ ಇತ್ತು. ರವಿಚಂದ್ರನ್ ರೀತಿ ಮಾತನಾಡುವ, ನಡೆಯುವ, ಕುಣಿಯುವ ಒಲಿಸಿಕೊಂಡಿದ್ದ ಅವರು ಹಲವು ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡಿದ್ದರು.

Jr Ravichandran Fame Kunigal Lakshmi Narayana Passed Away

ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ ಆಗಿದ್ದ ಲಕ್ಷ್ಮಿನಾರಾಯಣ್, ರವಿಚಂದ್ರನ್ ಅವರ ಹಲವು ಸಿನಿಮಾಗಳ ವಿವಿಧ ಗೆಟಪ್‌ಗಳನ್ನು ಧರಿಸಿ ಅವರಂತೆ ಫೋಸು ನೀಡಿ ಫೊಟೊಗಳನ್ನು ತೆಗೆಸಿಕೊಂಡಿದ್ದರು. ಸದಾ ಅವರಂತೆ ಮಾತನಾಡುತ್ತಿದ್ದರು ಸಹ.

ಲಕ್ಷ್ಮಿ ನಾರಾಯಣ್ ನಿಧನಕ್ಕೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಲಕ್ಷ್ಮಿ ನಾರಾಯಣ್ ನಿಧನ ಸಂಬಂಧ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

More from Filmibeat

English summary
Jr Ravichandran fame Kunigal Lakshmi Narayana passed away. He is look alike Ravichandran. He use to mimic Ravichandran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X