For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ನಲ್ಲಿ ಶುರುವಾಯ್ತು 'ಜೂಡಾ' ಗಾನಬಜಾನ

  By Pavithra
  |

  'ಬದ್ಮಾಶ್' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ವಿಭಿನ್ನ ರೀತಿಯ ಸಂಗೀತವನ್ನು ಪ್ರೇಕ್ಷಕರಿಗೆ ನೀಡಿದ ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಟಾಲಿವುಡ್ ಗೆ ಹಾರಿದ್ದಾರೆ. 'ಬದ್ಮಾಶ್' ಚಿತ್ರದ ನಂತರ 'ಆಪರೇಷನ್ ಅಲಮೇಲಮ್ಮ' ಹಾಗೂ 'ಚಮಕ್' ಚಿತ್ರಕ್ಕೆ ಜೂಡಾ ಟ್ಯೂನ್ ನೀಡಿದ್ದರು.

  'ಚಮಕ್' ಚಿತ್ರದ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರರಂಗಕ್ಕೆ ಬರುವ ಮುನ್ನ ಜೂಡಾ ತಮ್ಮದೇ ಆದ ಬ್ಯಾಂಡ್ ಮೂಲಕ ಸಂಗೀತ ಪ್ರಿಯರಿಗೆ ಚಿರಪರಿಚಿತರಾಗಿದ್ದರು. ವಿಭಿನ್ನ ಸಂಗೀತದಿಂದಲೇ ಪ್ರಖ್ಯಾತಿಗಳಿಸಿದ್ದ ಜೂಡಾ, ಅಲ್ಲು ಸಿರೀಶ್ ಅಭಿನಯದ 'ಎಬಿಸಿಡಿ' ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

  ಗೊಂಬೆ ಹಾಡಿಗೆ ಮತ್ತೆ ಜೀವ ತುಂಬಿದ ರಾಘವೇಂದ್ರ ರಾಜ್ ಕುಮಾರ್ ಗೊಂಬೆ ಹಾಡಿಗೆ ಮತ್ತೆ ಜೀವ ತುಂಬಿದ ರಾಘವೇಂದ್ರ ರಾಜ್ ಕುಮಾರ್

  ಅಲ್ಲು ಸಿರೀಶ್ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾರಂಗ ಹಾಗೂ ಇಲ್ಲಿಯ ಕಲಾವಿದರ ಜೊತೆಯಲ್ಲಿ ಉತ್ತಮ ಬಾಂದವ್ಯವನ್ನು ಹೊಂದಿದ್ದು, ಇಲ್ಲಿಯವರರೇ ಆದ ಜೂಡಾ ಅವರನ್ನು ತಮ್ಮ ಚಿತ್ರಕ್ಕೆ ಸಂಗೀತ ನೀಡಲು ಆಹ್ವಾನ ನೀಡಿದ್ದಾರೆ.

  ಚಮಕ್ ಚಿತ್ರದ ಹಾಡುಗಳನ್ನ ಹೇಳಿ ಇಂಪ್ರೆಸ್ ಆದ ಸಿರೀಶ್ ಇವರನ್ನೇ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಿಕೊಳ್ಳೋಣ ಎಂದು ನಿರ್ಧರಿಸಿದ್ದಾರೆ. ನಂತರ ಜೂಡಾ ಅವರನ್ನೇ ಹೈದ್ರಾಬಾದ್ ಗೆ ಕರೆಸಿ ಮಾತನಾಡಿದ್ದಾರೆ. ಕನ್ನಡದ ಪ್ರತಿಭೆ ಪರಭಾಷೆಯಲ್ಲೂ ಮಿಂಚುತ್ತಿರುವುದು ಅಭಿಮಾನಿಗಳಿಗೆ ಮಾತ್ರವಲ್ಲದೆ ಜೂಡಾ ಅವರಿಗೂ ಖುಷಿ ತಂದಿದ್ಯಂತೆ.

  English summary
  Kannada music director Judah Sandhy composing music for Allu Sirish new movie .Judah Sandhy has previously composed music for Operation Alamelamma and Chamak

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X