ಚಿನ್ನದ 'ಪಟಾಕಿ'ಗೆ ಪರಪ್ಪನ ಅಗ್ರಹಾರವೇ ಗತಿ, ರನ್ಯಾ ರಾವ್ ಮೇಲೆ ದೈಹಿಕ ಹಲ್ಲೆ ನಡೆದಿದೆಯಾ ?
ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುವುದು ಎನ್ನುವ ಮಾತಿದೆಯಲ್ಲಾ? ಇದಕ್ಕೆ ಜ್ವಲಂತ ಉದಾಹರಣೆಯಂತೆ ಸದ್ಯ ಇರುವ ರನ್ಯಾ ರಾವ್ ಅವರ ವನವಾಸ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ ಹಣದಾಸೆಗೆ ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ರನ್ಯಾ ರಾವ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ. ಈ ಹಿನ್ನೆಲೆ ಮಾರ್ಚ್ 24ರವರೆಗೆ ಪರಪ್ಪನ ಅಗ್ರಹಾರದಲ್ಲಿ ರನ್ಯಾ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಆದಾಯ ಗುಪ್ತಚರ ನಿರ್ದೇಶನಾಲಯದ { DRI } ಅವಧಿ ಇಂದು ಮುಕ್ತಾಯವಾದ ಕಾರಣ ರನ್ಯಾ ರಾವ್ ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಮಯದಲ್ಲಿ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಇನ್ನು, ಹೊರಗಡೆ ವರ್ಷಕ್ಕೆ 27 ಬಾರಿ ಬೆಂಗಳೂರಿಂದ ದುಬೈಗೆ ಹಾರಾಡಿಕೊಂಡು ನೆಮ್ಮದಿಯಾಗಿದ್ದ ರನ್ಯಾ ರಾವ್‌ಗೆ ಸದ್ಯ ಜೈಲಿನ ಊಟ ಸೇರುತ್ತಿಲ್ಲ. ಕಣ್ಣಿಗೆ ನಿದ್ದೆ ಬರುತ್ತಿಲ್ಲ. ಹೀಗಾಗಿಯೇ ಜೈಲು ಸೇರಿದ ಎರಡೇ ದಿನಕ್ಕೆ ರನ್ಯಾ ರಾವ್ ಸೊರಗಿ ಹೋಗಿದ್ದಾರೆ.ನಿದ್ದೆ ಇಲ್ಲದೇ ರನ್ಯಾ ಕಣ್ಣುಗಳು ಊದಿಕೊಂಡಿವೆ. ಕಣ್ಣುಗಳ ಸುತ್ತ ಮುತ್ತ ಡಾರ್ಕ್ ಸರ್ಕಲ್ ಹೆಚ್ಚಾಗಿತ್ತು. ರನ್ಯಾ ರಾವ್ ಅವರ ಫೋಟೊ ಕೂಡ ವೈರಲ್ ಆಗಿತ್ತು. ಈ ಹಿನ್ನೆಲೆ ಅನೇಕರು ರನ್ಯಾ ಅವರ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿರಬಹುದು ಎನ್ನುವ ಅನುಮಾನ ಅನೇಕರಲ್ಲಿತ್ತು.
ಈ ಕುರಿತ ಪ್ರಶ್ನೆಗೆ ಇಂದು ನ್ಯಾಯಾಲಯದಲ್ಲಿ ಕಣ್ಣೀರು ಹಾಕಿರುವ ರನ್ಯಾ ರಾವ್ ನನ್ನ ಮೇಲೆ ದೈಹಿಕ ಹಲ್ಲೆಯಾಗಿಲ್ಲ ಆದರೆ ನಿರಂತರ ಬೈಗುಳ ಮತ್ತು ಕಿರುಕುಳದಿಂದ ನನಗೆ ಆಘಾತವಾಗಿದೆ ಎಂದು ಹೇಳಿದ್ದಾರೆ ಎಂದು NDTV ವರದಿ ಮಾಡಿದೆ. ಆದಾಯ ಗುಪ್ತಚರ ನಿರ್ದೇಶನಾಲಯ ಕಸ್ಟಡಿಯಲ್ಲಿದ್ದಾಗ ಉತ್ತರ ನೀಡುವಂತೆ ನನಗೆ ಅಧಿಕಾರಿಗಳು ಬೆದರಿಕೆಯನ್ನು ಹಾಕುತ್ತಿದ್ದಾರೆ ಇದರಿಂದ ಆಘಾತಕ್ಕೊಳಗಾಗಿದ್ದು ತೀವೃವಾಗಿ ನೊಂದಿರುವುದಾಗಿ ರನ್ಯಾ ರಾವ್ ಹೇಳಿದ್ದಾರೆ ಎಂದು ಕೂಡ ವರದಿಯಾಗಿದೆ.
ಇನ್ನು, ಇದೆಲ್ಲದರ ನಡುವೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಫೈವ್‌ಸ್ಟಾರ್ ಹೋಟೆಲ್ ಮಾಲೀಕನ ತಮ್ಮನ ಮಗ ತರುಣ್ ರಾಜು ಅವರ ಹೆಸರು ಕೂಡ ಕೇಳಿ ಬಂದಿದ್ದು ವಿಚಾರಣೆ ನಡೆಸಿದ ಅಧಿಕಾರಿಗಳು ಇಂದು ತರುಣ್ ರಾಜ್ ಅವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ತರುಣ್ ರಾಜ್ ಗೆ ರನ್ಯಾ ರಾವ್ ಚಿನ್ನ ತಂದು ಕೊಡುತ್ತಿದ್ದರು ಎಂಬ ಆರೋಪವನ್ನು ಮಾಡಲಾಗಿದೆ.


Click it and Unblock the Notifications











