'ಜುಗಾರಿ ಕ್ರಾಸ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಕವಿ ಪೂರ್ಣಚಂದ್ರ ತೇಜಸ್ವಿಯವರ 'ಜುಗಾರಿ ಕ್ರಾಸ್' ಕಾದಂಬರಿಯನ್ನು ಓದಿ ಸಂತಸ ಪಟ್ಟವರು ಸಾಕಷ್ಟು ಜನರಿದ್ದಾರೆ. ಈಗ ಈ ಕಾದಂಬರಿ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ.

'ಜುಗಾರಿ ಕ್ರಾಸ್' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮ ಇಂದು ನಡೆದಿದ್ದು, ಮೊದಲ ಪೋಸ್ಟರ್ ಅನಾವರಣವಾಗಿದೆ. 'ಕಡ್ಡಿಪುಡಿ' ಖ್ಯಾತಿಯ ಚಂದ್ರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಟಿ ಎಸ್ ನಾಗಾಭರಣ ಅವರ ಹೊಸ ಚಿತ್ರ ಇದಾಗಿದೆ. ಕನ್ನಡದ ಮತ್ತೊಂದು ಶ್ರೇಷ್ಠ ಕಾದಂಬರಿಗೆ ಅವರು ದೃಶ್ಯ ರೂಪ ನೀಡುತ್ತಿದ್ದಾರೆ. ಅವರ ಪುತ್ರ ಪನ್ನಗ ಭರಣ ಸಹ ನಿರ್ದೇಶನ ಮಾಡುತ್ತಿದ್ದಾರೆ.

jugari cross kannada movie poster released

ವಿಶೇಷ ಅಂದರೆ, ಈ ಸಿನಿಮಾದ ನಾಯಕನಾಗಿರುವುದು ಚಿರಂಜೀವಿ ಸರ್ಜಾ. ಇಷ್ಟು ದಿನ ಕಮರ್ಶಿಯಲ್ ಸಿನಿಮಾಗಳ ನಾಯಕನಾಗಿದ್ದ ಚಿರು ಈಗ ಹೊಸ ಬಗೆಯ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಚಿರು ಪಾಲಿಗೆ ದೊಡ್ಡ ಚಾಲೆಂಜ್ ಆಗಿದೆ.

ಉಳಿದಂತೆ, ವಾಸುಕೀ ವೈಭವ್ ಸಂಗೀತ, ಹೆಚ್ ಸಿ ವೇಣು ಛಾಯಾಗ್ರಹಣ, ಕೆಂಪರಾಜು ಸಂಕಲನ, ಹರೀಶ್ ಹಾಗಲವಾಡಿ ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕೆ ಇರಲಿದೆ.

More from Filmibeat

English summary
T S Nagabharana directional 'Jugari Cross' kannada movie poster released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X