»   » ಎಲ್ಲ ಪ್ರಯತ್ನ ನಡೆಸುತ್ತಿರುವ ಕೋಡ್ಲು ರಾಮಕೃಷ್ಣ,

ಎಲ್ಲ ಪ್ರಯತ್ನ ನಡೆಸುತ್ತಿರುವ ಕೋಡ್ಲು ರಾಮಕೃಷ್ಣ,

Posted By: Staff
Subscribe to Filmibeat Kannada

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ 'ಜುಗಾರಿಕ್ರಾಸ್‌"ಗೆ ನಾಯಕಿಯಾಗಿ ಸೌಂದರ್ಯ ಆಯ್ಕೆಯಾಗಿದ್ದಾರೆ. ಇದೀಗ 'ದ್ವೀಪ"ದಲ್ಲಿ ಮುಳುಗಿ ಹೋಗಿರುವ ಸೌಂದರ್ಯ, ಹೊರಬಂದ ನಂತರ 'ಜುಗಾರಿಕ್ರಾಸ್‌" ತಿರುವುಗಳಿಗೆ ಸಾಕ್ಷಿಯಾಗುವುದಾಗಿ ಕೋಡ್ಲು ರಾಮಕೃಷ್ಣ ಅವರಿಗೆ ಮಾತುಕೊಟ್ಟಿದ್ದಾರಂತೆ.

'ದ್ವೀಪ" ಸಿನಿಮಾದ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿರುವ ಸೌಂದರ್ಯ ಕನ್ನಡ ಸಿನಿಮಾಗಳತ್ತ ಒಲವು ತೋರುತ್ತಿದ್ದಾರೆ. ಅದರೆ, 'ಜುಗಾರಿಕ್ರಾಸ್‌" ಆರಂಭಿಸಲಿಕ್ಕೆ ಕೋಡ್ಲು ನವಂಬರ್‌ವರೆಗೆ ಕಾಯಬೇಕು. ಆ ವೇಳೆಗೆ 'ದ್ವೀಪ"ದಿಂದ ಹೊರಬರುವ ಸೌಂದರ್ಯ, ನವಂಬರ್‌ 20 ರಿಂದ 'ಜುಗಾರಿಕ್ರಾಸ್‌"ಗೆ ಡೇಟ್ಸ್‌ ಕೊಟ್ಟಿದ್ದಾರೆ. ಅಂದಿನಿಂದಲೇ ಸಿನಿಮಾದ ಚಿತ್ರೀಕರಣವೂ ಆರಂಭ ಎನ್ನುತ್ತಾರೆ ಕೋಡ್ಲು.

'ಜುಗಾರಿಕ್ರಾಸ್‌" ಕೋಡ್ಲು ರಾಮಕೃಷ್ಣ ಅವರ ಮಹಾತ್ವಾಕಾಂಕ್ಷೆಯ ಚಿತ್ರ. ಇತ್ತೀಚೆಗೆ ಯಶಸ್ಸಿನಿಂದ ದೂರವಾಗಿರುವ ಅವರು, 'ಜುಗಾರಿಕ್ರಾಸ್‌"ನಲ್ಲಿ ಮರುಹುಟ್ಟು ಕಾಣುವ ವಿಶ್ವಾಸದಲ್ಲಿದ್ದಾರೆ. ಆದರೆ, ಇತ್ತೀಚಿನ ಕೆಲವು ಹೇಳಿಕೆಗಳು 'ಜುಗಾರಿಕ್ರಾಸ್‌"ನಲ್ಲಿ ಕೋಡ್ಲು ಅವರನ್ನೇ ಮಾಯವಾಗಿಸುವ ಮಟ್ಟಕ್ಕೆ ತಲುಪಿದ್ದವು. ತಮಗೆ ಡೆಡ್‌ಲೈನ್‌ ಕೊಡುವ ಕೋಡ್ಲು ಅವರ ಹೇಳಿಕೆಯಾಂದರಿಂದ ಕೆರಳಿದ್ದ ಶಿವಣ್ಣ , ಜುಗಾರಿಕ್ರಾಸನ್ನು ತಾವೇ ನಿರ್ದೇಶಿಸುವುದಾಗಿ ಬಾಂಬ್‌ ಸಿಡಿಸಿದ್ದರು.

ಶಿವಣ್ಣನ ಬರ್ತಡೇ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ 'ಜುಗಾರಿಕ್ರಾಸ್‌" ಜಾಹಿರಾತು ಕೂಡ ವಿವಾದಕ್ಕೆ ಕಾರಣವಾಗಿತ್ತು . ಅಪ್ಪಟ ಆ್ಯಕ್ಷನ್‌ ಫೋಸ್‌ನಲ್ಲಿ ನಿಂತಿದ್ದ ಶಿವಣ್ಣ ಅವರ ಚಿತ್ರವನ್ನು ನೋಡಿದ ಪೂರ್ಣಚಂದ್ರ ತೇಜಸ್ವಿ, ನಾನು ಬರೆದದ್ದು ಇಂಥ ಕತೆಯಾ ಎಂದು ಆಶ್ಚರ್ಯ ಪಟ್ಟಿದ್ದರಂತೆ.

ಬಾಲಂಗೋಚಿ : ಮಲೇಶಿಯಾ, ಹಾಂಗ್‌ಕಾಂಗ್‌ ಮತ್ತು ಥೈಲ್ಯಾಂಡ್‌ಗಳಲ್ಲಿ 'ಜುಗಾರಿಕ್ರಾಸ್‌" ಚಿತ್ರೀಕರಣ ನಡೆಯುತ್ತದೆಂದು ಕೋಡ್ಲು ಹೇಳಿದ್ದಾರೆ. ಕಥೆ ಪೂರ್ತಿ ನಡೆಯುವುದು ಮಲೆನಾಡಿನ ಪರಿಸರದಲ್ಲಿ . ಅಂದಮೇಲೆ, ಕೋಡ್ಲು ವಿದೇಶಕ್ಕೆ ಹೋಗುವುದು ಯಾತಕ್ಕಾಗಿ?

English summary
Jugari cross stars are soundarya and shivaraj kumar
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada