»   » ಅತ್ಯಂತ ದುಬಾರಿ ಕಾದಂಬರಿಕಾರ....

ಅತ್ಯಂತ ದುಬಾರಿ ಕಾದಂಬರಿಕಾರ....

Posted By: Super
Subscribe to Filmibeat Kannada

ಡಿಮ್ಯಾಂಡ್‌ ಅಪ್ಪೊ ಡಿಮ್ಯಾಂಡ್‌ಗೆ ಪೂರ್ಣಚಂದ್ರ ತೇಜಸ್ವಿ ಸೇರ್ಪಡೆ . ಹೌದು, ಇದೀಗ ನಾರಾಯಣ್‌ ಪೂರ್ಣ ಚಂದ್ರ ತೇಜಸ್ವೀ ಅವರ ಜುಗಾರಿ ಕ್ರಾಸ್‌ ಕಾದಂಬರಿಯನ್ನು ಸಿನಿಮಾ ಮಾಡುವ ಹಾದಿಯಲ್ಲಿದ್ದಾರೆ. ಈ ಕಾದಂಬರಿಯ ಹಕ್ಕಿಗೆ ಅವರು ನೀಡಿದ ಮೊತ್ತ 1.75 ಲಕ್ಷ ರುಪಾಯಿ. ಈ ಮೂಲಕ ಕನ್ನಡದ p;#3214;ಂಬ ಖ್ಯಾತಿಗೆ ತೇಜಸ್ವಿ ಪಾತ್ರರಾಗಿದ್ದಾರೆ. ಇದೇ ಕಾದಂಬರಿಯ ಹಕ್ಕನ್ನು ಟೀವಿ ಸೀರಿಯಲ್‌ ಮಾಡುವ ಸಲುವಾಗಿ ಸುರೇಂದ್ರನಾಥ ಖರೀದಿಸಿದ್ದರು. ಆವಾಗ ಅವರು ನೀಡಿದ ಮೊತ್ತ 75 ಸಾವಿರ. ಹಕ್ಕಿನ ಅವಧಿ ಮುಗಿಯುವ ಮುನ್ನ ಇದನ್ನು ಸೀರಿಯಲ್‌ ಮಾಡೋದಕ್ಕೆ ಸೂರಿಯಿಂದ ಸಾಧ್ಯವಾಗಲಿಲ್ಲ. ಈಗಲೂ ಅವರ ಬಳಿ ಜುಗಾರಿ ಕ್ರಾಸ್‌ನ ಚಿತ್ರಕತೆ ಸಂಭಾಷಣೆಯ ಟೆಕ್ಸ್ಟ್‌ ರೆಡಿಯಿದೆ

ತೇಜಸ್ವಿ ಮತ್ತು ನಾರಾಯಣ್‌ ನಡುವೆ ವ್ಯಾಪಾರ ಕುದುರಿದ ಬಗ್ಗೆಯೂ ಒಂದು ಸ್ವಾರಸ್ಯಕರ ಕತೆಯಿದೆ. ಆರಂಭದಲ್ಲಿ ತೇಜಸ್ವಿ ಚಿತ್ರದ ಬಜೆಟ್‌ ಎಷ್ಟಾಗಬಹುದು ಎಂದು ಕೇಳಿದರಂತೆ. ಇವರು ಒಂದು ಕೋಟಿ ಅಂದರು. ತಕ್ಷಣ ತೇಜಸ್ವಿ ಅದರ ಶೇಕಡಾ 5ರಷ್ಟು ನನಗೆ ಸಂಭಾವನೆ ಕೊಡಿ ಅಂದರಂತೆ. ಕೊನೆಗೆ ಸಾಕಷ್ಟು ಚೌಕಾಸಿಯ ನಂತರವೇ ಬೆಲೆಯಲ್ಲಿ ಕಡಿತವಾಗಿದ್ದು.

ಕಾದಂಬರಿ ಪ್ರಿಯ ನಾರಾಯಣ್‌ ಅವರೇನೋ ಜುಗಾರಿ ಕ್ರಾಸ್‌ ಕತೆಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಈ ಚಿತ್ರಕ್ಕೆ ಅವರು ಕೋಡ್ಲು ರಾಮಕೃಷ್ಣ ಅವರಂಥ ಆವರೇಜ್‌ ನಿರ್ದೇಶಕರನ್ನು ಆಯ್ಕೆ ಮಾಡಿದ ಬಗ್ಗೆ ಶಿವರಾಜ್‌ಕುಮಾರ್‌ರಂಥ ಕಮರ್ಷಿಯಲ್‌ ನಾಯಕನನ್ನು ಮುಖ್ಯಪಾತ್ರದಲ್ಲಿ ಹಾಕಿಕೊಂಡಿರುವ ಬಗ್ಗೆ ಈಗಾಗಲೇ ಅಪಸ್ವರಗಳು ಎದ್ದಿವೆ. ಮೂಲವೊಂದರ ಪ್ರಕಾರ ಇಂಧ್ರಧನುಷ್‌ ಚಿತ್ರದ ಷೂಟಿಂಗ್‌ ಸಂದರ್ಭದಲ್ಲಿ ಕೋಡ್ಲು ಅವರು ನಾರಾಯಣ್‌ ಕೈಯಿಂದ ಶಿವರಾಜ್‌ಗೆ 5 ಲಕ್ಷ ಅಡ್ವಾನ್ಸ್‌ ಕೊಡಿಸಿದ್ದರಂತೆ. ಆ ಲೆಕ್ಕಾಚಾರವನ್ನು ಚುಕ್ತಾ ಮಾಡುವ ಸಲುವಾಗಿ ಇವರಿಬ್ಬರನ್ನು ಹಾಕಿಕೊಳ್ಳುವುದು ನಾರಾಯಣ್‌ಗೆ ಅನಿವಾರ್ಯವಾಯಿತು ಎನ್ನಲಾಗಿದೆ.

ಇಂದಿಗೂ ನಾರಾಯಣ್‌ ಅವರಿಗೆ ಕೋಡ್ಲು ಸಾಮರ್ಥ್ಯದ ಬಗ್ಗೆ ನಂಬಿಕೆ ಮೂಡಿಲ್ಲ. ಇತ್ತೀಚೆಗೆ ಪತ್ರಕರ್ತರ ಮುಂದೆಯೇ ಅವರು ಕೋಡ್ಲು ಅವರನ್ನು ಕರೆದು ನಿಮ್ಮ ಕೈಯಲ್ಲಿ ಜುಗಾರಿ ಕ್ರಾಸ್‌ ಮಾಡೋದಕ್ಕೆ ಸಾಧ್ಯವಾಗದೇ ಇದ್ದರೆ ಹೇಳಿ. ನಾನು ಸೀತಾರಾಂ ಕೈಯಲ್ಲಿ ಮಾಡಿಸ್ತೇನೆ ಎಂದು ಗುಡುಗಿದ್ದರು ಎನ್ನುವುದು ಈಗ ಇತಿಹಾಸ.

English summary
Kannada novels as the theme song for movies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada